ಬೆಂಗಳೂರು:ರಾಜಧಾನಿಯಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಹೆಚ್ಚಿದೆ. ಸೋಮವಾರ 38.5 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದ್ದು, ಸತತ 2ನೇ ದಿನವೂ ಇದೇ ಉಷ್ಣಾಂಶ ದಾಖಲಾಗಿದೆ.
ವಾಡಿಕೆಗಿಂತ 4.4 ಡಿ. ಸೆ. ಹೆಚ್ಚು ಉಷ್ಣಾಂಶ ವರದಿಯಾಗಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ 40ರ ಗಡಿ ಮುಟ್ಟುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಎರಡು ದಿನಗಳಿಂದ 38ರ ಅಸುಪಾಸಿನಲ್ಲಿ ಉಷ್ಣಾಂಶ ಕಂಡುಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ 2019ರಲ್ಲಿ 39.9 ಉಷ್ಣಾಂಶ ದಾಖಲಾಗಿದ್ದು, ಈವರೆಗೆ ದಾಖಲಾದ ಅತ್ಯಧಿಕ ಉಷ್ಣಾಂಶ ಇದಾಗಿದೆ.
ರಾಜ್ಯದಲ್ಲಿ ರಾಜಸ್ಥಾನ ಮಾದರಿ ಉರಿ ಬಿಸಿಲು:23 ಜಿಲ್ಲೆಗಳಲ್ಲಿ 40ರ ಗಡಿ ದಾಟಿದ ಉಷ್ಣಾಂಶ
ತೇವಾಂಶ ಭರಿತ ಮೋಡಗಳ ಸೆಳೆತ, ಗಾಳಿ ವೇಗ ಇಲ್ಲದಿರುವುದು, ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆ ಸೇರಿ ಇತರೆ ಕಾರಣಗಳಿಂದ ತಾಪಮಾನ ಹೆಚ್ಚಳವಾಗಿದೆ. ಈ ಬಾರಿ ನಗರದಲ್ಲಿ 4 ತಿಂಗಳು ಬೇಸಿಗೆ ಇದೆ. ಮೇ ವರೆಗೆ ಬಿಸಿಲಿನ ಪ್ರಖರತೆ ಕಾಣಿಸಿಕೊಳ್ಳಲಿದೆ. ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಫೆಬ್ರವರಿಯಿಂದಲೇ ಸುಡು ಬಿಸಿಲು ಕಾಣಿಸಿಕೊಂಡಿತ್ತು. ಏಪ್ರಿಲ್​ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್​ನಲ್ಲಿ ಅಧಿಕವಾಗಿತ್ತು. ಅದೇ ರೀತಿ, ಕನಿಷ್ಠ ತಾಪಮಾನದಲ್ಲಿಯೂ ಅತ್ಯಾಧಿಕ ಉಷ್ಣಾಂಶ ಏರಿಕೆಯಾಗುತ್ತಿದೆ. ರಾತ್ರಿ ವೇಳೆ ಬೆಚ್ಚಗಿನ ವಾತಾವರಣ ಉಂಟಾಗುತ್ತಿದೆ. ಜನರಿಗೆ ರ್ನಿಜಲೀಕರಣ ಸೇರಿ ಇತರ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
