|ದೇವರಾಜ್ ಕನಕಪುರಬೆಂಗಳೂರು
ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅನರ್ಹರು!
ಹೌದು. ಕಾಲೇಜು ಶಿಕ್ಷಣ ಇಲಾಖೆಯು ಅತಿಥಿ ಉಪನ್ಯಾಸಕರ ಭರ್ತಿಗೆ ಅರ್ಜಿ ಆಹ್ವಾನಿಸಿತ್ತು. 60, 004 ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 38,264 ಅಭ್ಯರ್ಥಿಗಳು ಅನರ್ಹರಾಗಿದ್ದಾರೆ. ಏಕೆಂದರೆ, ಇವರಿಗೆ ಬೋಧನಾ ಅನುಭವವೇ ಇಲ್ಲ. 21,740 ಅಭ್ಯರ್ಥಿಗಳು ಮಾತ್ರವೇ ಅರ್ಹತೆ ಪಡೆದುಕೊಂಡಿದ್ದು, ಇದರಲ್ಲಿ ಹುದ್ದೆಗಳ ಅನುಸಾರವಾಗಿ 10,636 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಒಟ್ಟಾರೆ, 60 ಸಾವಿರ ಅಭ್ಯರ್ಥಿಗಳ ಪೈಕಿ 49,368 ಅಭ್ಯರ್ಥಿಗಳು ಉದ್ಯೋಗದಿಂದ ಹೊರಗುಳಿದಂತಾಗಿದೆ.
ಅನರ್ಹರು ಏಕೆ?:ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆಯೇ ಇರಬೇಕಾದ ಅರ್ಹತೆಯನ್ನು ಕಾಲೇಜು ಶಿಕ್ಷಣ ಇಲಾಖೆಯು ಸ್ಪಷ್ಟವಾಗಿ ತಿಳಿಸಿದೆ. ಆದರೂ, ಕೆಲವರು ಬೋಧನಾ ಅನುಭವ ಇಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದಾರೆ. ಮೆರಿಟ್ ಪಟ್ಟಿ ರೂಪಿಸುವಾಗ ಸ್ನಾತಕೋತ್ತರ ಪದವಿ ಅಂಕ, ನೆಟ್, ಸ್ಲೆಟ್, ಪಿಎಚ್.ಡಿ, ಸೇವಾ ಅನುಭವನ್ನು ಇಂತಿಷ್ಟು ಅಂಕಗಳಿಗೆ ಎಂದು ಲೆಕ್ಕಹಾಕಿ ಸಿದ್ಧಪಡಿಸಿದೆ. ನಿಗದಿ ಪಡಿಸಿರುವ ಅರ್ಹತಾ ಮಾನದಂಡಗಳು ಇಲ್ಲದೇ ಇರುವ ಕಾರಣಕ್ಕೆ ಅವರನ್ನು ಅನರ್ಹಗೊಳಿಸಿದೆ.
ಹೆಚ್ಚು-ಕಮ್ಮಿ:ವಾಣಿಜ್ಯ ವಿಭಾಗದಲ್ಲಿ 1810 ಹುದ್ದೆಗಳಿದ್ದು, 11,314 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅತಿ ಹೆಚ್ಚು ಅರ್ಜಿ ಸಲ್ಲಿಸಿರುವ ವಿಷಯ ಇದಾಗಿದೆ. ಇನ್ನೂ ಅರೆಬಿಕ್​ನಲ್ಲಿ ಒಂದು ತಮಿಳು-2, ತೆಲುಗು-6 ಹುದ್ದೆಗಳಿದ್ದು, ಇಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆ ಇದೆ.
ಕಾಲೇಜು ಶಿಕ್ಷಣ ಇಲಾಖೆಯು 10 ಸಾವಿರ ಹುದ್ದೆಗಳ ಪೈಕಿ 7,225 ಪೂರ್ಣ ಕಾರ್ಯಭಾರವಿರುವ ಹಾಗೂ 3,411 ಭಾಗಶಃ ಕಾರ್ಯಭಾರವಿರುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಆನ್​ಲೈನ್ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಸುತ್ತಿದೆ. ಅಭ್ಯರ್ಥಿಗಳಿಗೆ ಆನ್​ಲೈನ್ ಮೂಲಕ ಭಾಗವಹಿಸಲು ಹೇಳಿ, ಆನ್​ಲೈನ್​ನಲ್ಲೇ ಸ್ಥಳ ನಿಯುಕ್ತಿ ಮಾಡುತ್ತಿದೆ.
ಕೌನ್ಸೆಲಿಂಗ್ ಗೈರಾದವರಿಗೆ ಕೆಲ್ಸ ಇಲ್ಲ:ಕೌನ್ಸೆಲಿಂಗ್​ಗೆ ಗೈರಾದರೆ, ಕೆಲಸ ಕಳೆದುಕೊಂಡಂತೆಯೇ ಅರ್ಥ. ಬೆಳಗ್ಗೆ ಯಿಂದ ಸಂಜೆಯವರೆಗೂ ಕೌನ್ಸೆಲಿಂಗ್ ನಡೆಯಲಿದ್ದು, ಯಾವ ಸಮಯದಲ್ಲಿ ಬೇಕಾದರೂ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಒಂದು ವೇಳೆ ಗೈರು ಹಾಜರಾದರೆ, ಅವರನ್ನು ಕೈ ಬಿಡಲಾಗುತ್ತದೆ. ಈ ರೀತಿ ಉಳಿಕೆಯಾದ ಹುದ್ದೆಗಳಿಗೆ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸಿ, ಅರ್ಹತಾ ಪಟ್ಟಿಯಲ್ಲಿರುವ ಇತರರಿಗೆ ಅವಕಾಶ ನೀಡಲಿದೆ.
ಕೆಲಸ ಕಳೆದುಕೊಂಡವರು:ಈ ಮೊದಲು ವಾರಕ್ಕೆ 8 ಗಂಟೆಗಳ ಕಾರ್ಯಾಭಾರವನ್ನು ನಿಗದಿ ಪಡಿಸಿತ್ತು. ಆದರೆ, ಇದೀಗ ಹೊಸದಾಗಿ 15 ಗಂಟೆಗಳ ಕಾರ್ಯಭಾರ ನಿಗದಿ ಪಡಿಸಿದೆ. ಪೂರ್ಣ ಕಾರ್ಯಭಾರ ಇರುವ ಹುದ್ದೆಗಳು 7,225 ಮಾತ್ರ. ಇದರಿಂದ ಈ ಹಿಂದೆ ಅರ್ಜಿ ಕರ್ತವ್ಯ ನಿರ್ವಹಿಸುತ್ತಿದ್ದ 14 ಸಾವಿರ ಅತಿಥಿ ಉಪನ್ಯಾಸಕರಲ್ಲಿ 7 ಸಾವಿರ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಉಪನ್ಯಾಸಕರು ಆರೋಪಿಸಿದ್ದಾರೆ.
ಪ್ರತಿಭಟನೆಗೆ ಮುಂದಾದ ಉಪನ್ಯಾಸಕರು: ಅರ್ಹತೆ ಪಟ್ಟಿ ಪ್ರಕಟ ಮಾಡುತ್ತಿದ್ದಂತೆಯೇ ಅತಿಥಿ ಉಪನ್ಯಾಸಕರು ಮತ್ತೆ ಪ್ರತಿಭಟನೆ ಹಾದಿ ತುಳಿದಿದ್ದಾರೆ. ಸಿಐಟಿಯು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿರುವ ವರಲಕ್ಷ್ಮೀ ಉಪನ್ಯಾಸಕರೊಂದಿಗೆ ಪ್ರತಿಭಟನೆಗೆ ಇಳಿದಿದ್ದಾರೆ. ಮೌರ್ಯ ವೃತ್ತದಲ್ಲಿ ಅತಿಥಿ ಉಪನ್ಯಾಸಕರೊಂದಿಗೆ ಪ್ರತಿಭಟನೆ ಆರಂಭಿಸಿದ್ದಾರೆ. ಯಾರನ್ನೂ ಉದ್ಯೋಗದಿಂದ ತೆಗೆಯಬಾರದು. ಎಲ್ಲರನ್ನೂ ಉದ್ಯೋಗಕ್ಕೆ ಮರಳಿ ಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡೇ ವೇತನ ಹೆಚ್ಚಳ ಮಾಡಿದೆ. ಸೇವಾ ಭದ್ರತೆ ನೀಡುವುದಕ್ಕೆ ಸಾಧ್ಯವಿಲ್ಲ. ಇದು ತಾತ್ಕಾಲಿಕ ಹುದ್ದೆ ಯಾಗಿದ್ದು, ಪ್ರತಿಭಟನೆಯಿಂದ ಪ್ರಯೋಜನ ಇಲ್ಲ.
|ಪಿ.ಪ್ರದೀಪ್ಆಯುಕ್ತ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ
ವಿಷ ಕೊಟ್ಟು ಬಿಡಿ ಸಾರ್..
ಮನೆಯಲ್ಲಿ ಅತ್ತೆ ಮಾವ ಸರಿ ಇಲ್ಲ. ಗಂಡ ಕುಡುಕ. ನನಗೆ ಒಂದು ವರ್ಷದ ಮಗು ಇದೆ. ನಾನು ಕೆಲಸಕ್ಕೆ ಹೋಗುತ್ತೇನೆ ಎಂಬ ಒಂದೇ ಕಾರಣಕ್ಕೆ ನನ್ನನ್ನು ಮನೆಯಲ್ಲಿಟ್ಟುಕೊಂಡಿದ್ದಾರೆ. ಅರ್ಹತಾ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ. ನನಗೆ ವಿಷ ಕೊಟ್ಟುಬಿಡಿ ಸಾರ್… ಈ ರೀತಿ ಮಹಿಳಾ ಅಭ್ಯರ್ಥಿಯೊಬ್ಬರು ಕಾಲೇಜು ಶಿಕ್ಷಣ ಇಲಾಖೆ ಜತೆಗೆ ಅಳಲು ತೊಡಿಕೊಂಡಿರುವ ಆಡಿಯೋ ವೈರಲ್ ಆಗಿದೆ.
ವಿಜಯವಾಣಿ ವಿಜಯೋತ್ಸವ ವಿಜೇತರಿಗೆ ಬಹುಮಾನಗಳ ವಿತರಣೆ: ಕಾರು, ಬೈಕ್, ಫ್ರಿಜ್​ ಸೇರಿ ಹಲವು ಉಡುಗೊರೆ

ಸಪ್ತ ಸುರಂಗದಾಚೆ ಎಲ್ಲೋ ಅಂತರ್ಜಲವು ಕಾದಿದೆ; ಅಭಿನವ ಭಗೀರಥಗೀಗ ಪದ್ಮಗೌರವವು ಸಂದಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seven =
Remember me
