ಬೆಂಗಳೂರು:ಜೂನ್​ 21ರಿಂದ ಎರಡನೇ ಹಂತದಲ್ಲಿ ಲಾಕ್​ಡೌನ್​ ನಿಯಮಗಳನ್ನು ಇನ್ನಷ್ಟು ಸಡಿಲಿಸಲು ಸಿದ್ಧತೆ ನಡೆದಿರುವಂತೆಯೇ ಕೋವಿಡ್​ 3ನೇ ಅಲೆಯ ಆತಂಕ ಬೆನ್ನೇರಿರುವುದು ಸರ್ಕಾರವನ್ನು ಚಿಂತೆಗೆ ದೂಡಿದೆ. ಹೀಗಾಗಿ ಲಾಕ್​ಡೌನ್​ ನಿಯಮಗಳನ್ನು ಸೀಮಿತ ಪ್ರಮಾಣದಲ್ಲಿ ಸಡಿಲಿಸುವ ಜತೆಗೆ ವೀಕೆಂಡ್​ ಕ್ಯೂರ್ ಮುಂದುವರಿಸಲು ಚಿಂತನೆ ನಡೆದಿದೆ.
ಸರ್ಕಾರದ ನಿರ್ದೇಶನದಂತೆ ಕೆಲವು ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಸೋಮವಾರದಿಂದ ಶುಕ್ರವಾರದವರೆಗೆ ಅವಕಾಶ ಮಾಡಿಕೊಡಲಾಗುವುದು. ಬಹುತೇಕ ಜನರು 5 ದಿನಗಳು ತಮ್ಮ ಕೆಲಸ ನಿರ್ವಹಿಸುತ್ತಾ ಸೀಮಿತ ಪ್ರದೇಶದಲ್ಲಿರುತ್ತಾರೆ. ಆದರೆ, ವೀಕೆಂಡ್​ ದಿನಗಳಲ್ಲಿ ಸುತ್ತಾಟ, ಗುಂಪು ಸೇರುವುದು, ಮೋಜು&ಮಸ್ತಿ ಮಾಡಲು ಮುಂದಾಗುತ್ತಾರೆ. ಹೀಗಾಗಿ, ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ವೀಕೆಂಡ್​ ಕಪ್ಯೂರ್ ಜಾರಿ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತು ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಬಹುತೇಕ ಜಾರಿಯಾಗುವ ನಿರೀೆಯಿದೆ.ದೇಶದಲ್ಲಿ ಕೋವಿಡ್​ 2ನೇ ಅಲೆಯಿಂದ ಹೆಚ್ಚಾಗಿ ತತ್ತರಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿ ಸ್ಥಾನದಲ್ಲಿದೆ. ಅದರಲ್ಲಿಯೂ ಸಾಕಷ್ಟು ವೈದ್ಯಕಿಯ ಸೌಲಭ್ಯಗಳನ್ನು ಹೊಂದಿದ ಬೆಂಗಳೂರಿನಲ್ಲಿ ಅತ್ಯಧಿಕ ಸೋಂಕು ಪ್ರಕರಣ, ಸಾವು&ನೋವು ವರದಿಯಾಗಿವೆ.
ಕೋವಿಡ್​ ಮೊದಲನೆ ಅಲೆಯಿಂದ ಶೇ.80 ಚೇತರಿಕೆ ಕಾಣಿಸಿಕೊಳ್ಳುವ ವೇಳೆಗೆ ಪುನ@ ಲಾಕ್​ಡೌನ್​ ವಿಧಿಸಲಾಯಿತು. ಸುಮಾರು ಮೂರು ತಿಂಗಳ ಪರಿಶ್ರಮದಿಂದ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಹಂತ ಹಂತವಾಗಿ ಸಡಿಲಿಕೆ ಮಾಡಲಾಗುತ್ತಿದೆ. ಈಗಿನ ಅನ್​ಲಾಕ್​ನಲ್ಲಿ ವಾಣಿಜ್ಯೋದ್ಯಮ, ಕೈಗಾರಿಕೆ, ವ್ಯಾಪಾರಕ್ಕೆ ಶೇ.50 ಜನರ ಹಾಜರಾತಿಗೆ ಸಡಿಲಿಕೆಗೆ ನಿರ್ಧರಿಸಲಾಗಿದೆ.3ನೇ ಅಲೆ ಭೀತಿ ಏಕೆ?:ಕರೊನಾ ರೂಪಾಂತರದ 3ನೇ ಅಲೆ ಅಕ್ಟೋಬರ್​ನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸರ್ಕಾರ ತಿಳಿಸುತ್ತಿದೆ. ಆದರೆ, ಕೋವಿಡ್​ ತಾಂತ್ರಿಕ ಸಲಹಾ ಸಮಿತಿ ತಜ್ಞರು 6 ತಿಂಗಳಲ್ಲಿ ಸೋಂಕು ರೂಪಾಂತರ ಹೊಂದಲಿದೆ ಎನ್ನುತ್ತಾರೆ. ಜತೆಗೆ, ಈವರೆಗೆ ಸೋಂಕು ಕಾಣಿಸಿಕೊಳ್ಳದ ಮತ್ತು ಲಸಿಕೆ ಪಡೆಯದ ಮಕ್ಕಳಿಗೆ ಹೆಚ್ಚಿನ ಪರಿಣಾಮ ಬೀರುವ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ರಾಜ್ಯಕ್ಕೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವವರಿಗೆ ಯಾವುದೇ ರ್ನಿಬಂಧ ಹೇರಿಲ್ಲ. ಇಲ್ಲಿ ಸೋಂಕು ಕಡಿಮೆಯಿದ್ದರೂ, ಹೊರಗಿನಿಂದ ಬಂದವರಿಂದ ಸೋಂಕು ಹರಡುವ ಸಾಧ್ಯತೆಯಿದೆ. ಜತೆಗೆ, ಮಹಾರಾಷ್ಟ್ರದಲ್ಲಿ 3ನೇ ಅಲೆಯ ಸೋಂಕು ಪತ್ತೆಯಾಗುತ್ತಿವೆ ಎಂಬ ವರದಿ ಬರುತ್ತಿದ್ದು, ಇಲ್ಲಿಗೂ ಕಾಲಿಸುವ ಸಾಧ್ಯತೆಯಿದೆ.
ಇಂದು ಲಾಕ್​ಡೌನ್​ ಸಡಿಲಿಕೆ ನಿರ್ಧಾರಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದ ಬಹುತೇಕ ಜಿಲ್ಲೆಗಳು ಅನ್​ಲಾಕ್​ ಆಗಲಿವೆ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೋಂಕು ತೀವ್ರ ಇಳಿಮುಖ ಕಾಣುತ್ತಿರುವುದರಿಂದ ಲಾಕ್​ಡೌನ್​ ಭಾಗಶ@ ಸಡಿಲಿಕೆಯಾಗಿದೆ. ಕರೊನಾ ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತಷ್ಟು ಕಠಿಣ ನಿಯಮ ಮುಂದುವರಿಸುವ ಕುರಿತು ತಜ್ಞರು ಹಾಗೂ ಉನ್ನತಾಧಿಕಾರಿಗಳ ಮಟ್ಟದಲ್ಲಿ ಗಂಭೀರ ಚರ್ಚೆಯಾಗಲಿದೆ. ಅನ್​ಲಾಕ್​ ಸಂಬಂಧ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಶನಿವಾರ ಸಚಿವರು ಹಾಗೂ ಉನ್ನತಾಧಿಕಾರಿಗಳ ಸಭೆ ನಡೆಸಲಿದ್ದಾರೆ.ಯಾವುದಕ್ಕೆ ವಿನಾಯಿತಿ?:* ಅನ್​ಲಾಕ್​ ಜಾರಿಗೊಳ್ಳುವ ಜಿಲ್ಲೆಗಳಲ್ಲಿ ದಿನಸಿ ಅಂಗಡಿಗಳು, ಹಣ್ಣು&ತರಕಾರಿ, ಬೀದಿಬದಿ ವ್ಯಾಪಾರ, ಮದ್ಯ ಪಾರ್ಸೆಲ್​ ಅವಧಿಯನ್ನು ಸಂಜೆಯವರೆಗೆ ವಿಸ್ತರಿಸುವ ಸಾಧ್ಯತೆ* ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಓಡಾಡುವ ನಿಯಮ ಮತ್ತಷ್ಟು ದಿನ ಮುಂದುವರಿಸಬಹುದು.* ರಾತ್ರಿ 7 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕ್ಯೂರ್ ಮತ್ತಷ್ಟು ದಿನ ಮುಂದುವರಿಯಬಹುದು.* ಕೈಗಾರಿಕೆಗಳು ಶೇ. 100, ಸಿದ್ಧ ಉಡುಪು ಕಾರ್ಖಾನೆಗಳು ಶೇ.50 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬಹುದು.* ಜಿಮ್​ ತೆರೆಯಲು ಅವಕಾಶ ನೀಡುವ ಸಾಧ್ಯತೆ* ನಗರ ಹಾಗೂ ಹೊರ ಊರುಗಳ ಬಸ್​ ಪ್ರಯಾಣಕ್ಕೆ ಶೇ.50 ಸೀಟಿನೊಂದಿಗೆ ಅನುಮತಿ ನೀಡುವ ಸಾಧ್ಯತೆಮರುವಲಸಿಗರ ಬಗ್ಗೆ ಚಿಂತನೆ:ಬೆಂಗಳೂರಿಗೆ ಮರುವಲಸೆ ಶುರುವಾಗಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ಶನಿವಾರದ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
