ಧಾರವಾಡ: ನೆಲದೊಳಗೆ ಫಲ ನೀಡುವ ಶೇಂಗಾ ಸಾಮಾನ್ಯವಾಗಿ 2 ಅಡಿಯಷ್ಟು ಎತ್ತರಕ್ಕೆ ಬರುವಂತಹ ಬೆಳೆ. ಈ ವರ್ಷ ಸಾಕಷ್ಟು ಮಳೆಯಾಗಿರುವ ಕಾರಣ ಕೆಲವೆಡೆ ಎರಡೂವರೆ ಅಡಿ ಬಂದಿದೆ. ಆದರೆ, ಧಾರವಾಡ ಹೊರವಲಯದ ಕಮಲಾಪುರದ ರೈತರೊಬ್ಬರ ಜಮೀನಿನಲ್ಲಿ ಶೇಂಗಾ ಎದೆಯೆತ್ತರಕ್ಕೆ ಬೆಳೆದಿದ್ದು ಅಚ್ಚರಿ ಮೂಡಿಸಿದೆ.
ಕಮಲಾಪುರದ ಪತ್ರೆಪ್ಪಜ್ಜನ ಮಠದ ಬಳಿಯ ಶಿವನಪ್ಪ ಬೆಳ್ಳಕ್ಕಿ ಎಂಬುವರ ಜಮೀನಿನಲ್ಲಿ ಶೇಂಗಾ 4 ಅಡಿಗೂ ಹೆಚ್ಚು ಎತ್ತರ ಬೆಳೆದಿದೆ. ಶಿವನಪ್ಪ, ಜಿಪಿಬಿಡಿ 4 ತಳಿಯ ಶೇಂಗಾವನ್ನು ತಮ್ಮ 2 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಸುರಿಯುತ್ತಲೇ ಇದ್ದ ಕಾರಣ ರಸಗೊಬ್ಬರ ಸೇರಿದಂತೆ ಯಾವುದೇ ಪೋಷಣೆಯನ್ನೂ ಮಾಡಿರಲಿಲ್ಲ. ಆದರೂ ಇಷ್ಟು ಎತ್ತರಕ್ಕೆ ಶೇಂಗಾ ಬೆಳೆದು ನಿಂತು ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.
ಈ ಸಲ ಮಳೆ ಹೆಚ್ಚಾಗಿ ಸುರಿದಿರುವ ಕಾರಣ ಎಲ್ಲ ತಳಿಯ ಶೇಂಗಾ ಬೆಳೆಯೂ 2 ಅಡಿಗಿಂತ ಹೆಚ್ಚಾಗಿಯೇ ಇದೆಯಾದರೂ ಎಲ್ಲಿಯೂ ಎರಡೂವರೆ ಅಡಿ ಮೀರಿ ಬೆಳೆದಿಲ್ಲ. ಆದರೆ, ಶಿವನಪ್ಪ ಬೆಳ್ಳಕ್ಕಿಯವರ ಹೊಲದಲ್ಲಿ ಮಾತ್ರ ಶೇಂಗಾ ಇಷ್ಟೊಂದು ಎತ್ತರಕ್ಕೆ ಬೆಳೆದಿದೆಯಲ್ಲದೆ ಕಾಯಿ ಕೈಗೆ ಬರುವ ಹಂತದಲ್ಲಿಯೇ, ಎತ್ತರ ತಡೆದುಕೊಳ್ಳದೇ ನೆಲಕ್ಕೊರಗಿ ಹಾನಿಯೂ ಆಗಿದೆ. 4 ಅಡಿಗಿಂತ ಹೆಚ್ಚು ಬೆಳದ ಕಾರಣ ಬೆಳೆಯನ್ನು ಕೀಳಲು ಈ ರೈತ ಹರಸಾಹಸ ಪಟ್ಟಿದ್ದಾರೆ. ಕೃಷಿ ಕಾರ್ವಿುಕರು ಶೇಂಗಾ ಕೀಳಲು ಪರದಾಡಿದ್ದಾರೆ. ಬೆಳೆ ಕೀಳಲು ಸರಿಯಾಗಿ ಹಿಡಿತ ಸಿಗದಿರುವ ಕಾರಣ ಶೇಂಗಾ ಕಾಯಿಗಳು ಭೂಮಿಯೊಳಗೇ ಉಳಿದು ಹಾನಿಯಾಗಿದೆ.</
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − nine =
Remember me
