ಬೆಂಗಳೂರು:ಮಾಲೀಕರು ಇಲ್ಲದೆ ಇದ್ದಾಗ ಮನೆಗೆ ನುಗ್ಗಿರುವ ಕಳ್ಳರು ವಿವಿಧ ಬಗೆಯ ಚಿನ್ನಾಭರಣ, 4.5 ಲಕ್ಷ ರೂ. ನಗದು ಸೇರಿದಂತೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾರೆ.
ಹಲಸೂರಿನ ಮರ್ಫಿಟೌನ್‌ನ ನಿವಾಸಿ ರಜೀನಾ ಲೂಯೀಸ್ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಕೊಟ್ಟ ದೂರಿನ ಮೇರೆಗೆ ಹಲಸೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.
ಇದನ್ನೂ ಓದಿ:ರಭಸದ ಗಾಳಿ; 2022ರಲ್ಲಿ ಉದ್ಘಾಟನೆಗೊಂಡ ಸಪ್ತಋಷಿಗಳ ವಿಗ್ರಹ ಧರೆಗೆ
ಲೂಯೀಸ್ ತನ್ನ ಪತಿ ಮತ್ತು ಮಕ್ಕಳ ಜತೆಗೆ ನೆಲೆಸಿದ್ದಾರೆ. ದಂಪತಿ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾರೆ. ಮನೆ ಖರೀದಿ ಮಾಡುವ ಉದ್ದೇಶಕ್ಕೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಅಡಮಾನವಿಡಲು ಬಿಡಿಸಿಕೊಂಡು ಮನೆಗೆ ತಂದಿದ್ದರು.
ಇದನ್ನೂ ಓದಿ:ಊರೆಲ್ಲ ಜಾತ್ರೆಯ ಸಂಭ್ರಮದಲ್ಲಿರುವಾಗ ಮಗನ ಜತೆ ಸೇರಿ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ
ಮೇ 26ರಂದು ಎಂದಿನಂತೆ ಮಕ್ಕಳು ತರಗತಿಗೆ ಹೋಗಿದ್ದು, ದಂಪತಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಒಡೆದು ಒಳ ನುಗ್ಗಿ ವಿವಿಧ ಬಗೆಯ ಚಿನ್ನಾಭರಣ ಮತ್ತು 4.5 ಲಕ್ಷ ರೂ. ನಗದು ಸೇರಿದಂತೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.
ಇದನ್ನೂ ಓದಿ:VIDEO| ಚಲಿಸುತ್ತಿರುವ ಮೆಟ್ರೋ ಬಾಗಿಲು ತೆರೆದು ಜಿಗಿದೇ ಬಿಟ್ಟ! ಮುಂದೆ ನಡೆದದ್ದು ಭೀಕರ…
ಮಧ್ಯಾಹ್ನ 3.45ರಲ್ಲಿ ಮಗಳು ತರಗತಿ ಮುಗಿಸಿಕೊಂಡು ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಮಾಲೀಕರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಹಲಸೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರವಚನ ಕೇಳಿ ಮತಾಂತರವಾದ ಮುಸ್ಲಿಂ ಯುವತಿ ಹಿಂದು ಹುಡುಗನನ್ನು ಮದುವೆಯಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 4 =
Remember me
