ಆಲೂರು:ಕೆರೆಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ನಾಲ್ವರು ಬಾಲಕರು ಈಜಲಾಗದೆ, ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪತ್ರ ಬರೆದ ಮಾಜಿ ಪ್ರಧಾನಿ ಎಚ್​ಡಿಡಿ; ಪತ್ರದಲ್ಲೇನಿದೆ?
ಗ್ರಾಮದ ಜೀವನ್(13), ಸಾತ್ವಿಕ್(11), ವಿಶ್ವ ಹಾಗೂ ಪೃಥ್ವಿ (12) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕರು. ಘಟನೆಯಲ್ಲಿ ಮತ್ತೊಬ್ಬ ಬಾಲಕ ಚಿರಾಗ್ (10) ಕೂಡ ಇಳಿದಿದ್ದು, ಅದೃಷ್ಟದಂತೆ ಸಾವಿನಿಂದ ಪಾರಾಗಿದ್ದಾನೆ. ಸದ್ಯ ಆತನಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ.
ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ, ಕೆರೆಯಲ್ಲಿ ಈಜಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸುವ ಯತ್ನದಲ್ಲಿ ಮುಳುಗಿ, ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದು, ಶವಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಆಗಮಿಸಿ ಶವ ಹುಡುಕಾಟ ಕಾರ್ಯವನ್ನು ಚುರುಕಾಗಿ ನಡೆಸಲು ಸೂಚಿಸಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದಾರೆ.
ಈ ವಿಷಯಕ್ಕೆ ಜಡೇಜಾಗೂ ತುಂಬ ನೋವಾಗಿತ್ತು! ಆದ್ರೆ, ಏನೂ ಮಾಡಕ್ಕಾಗಲ್ಲ; ರಾಯಡು ಬಿಚ್ಚಿಟ್ಟ ಅಸಲಿ ಸಂಗತಿಯಿದು

ನನ್ನ ಕ್ಯಾಪ್ಟನ್ಸಿಯಲ್ಲಿ ಈತನ ಪ್ರತಿಭೆ ಅಂದೇ ಗುರುತಿಸಬೇಕಿತ್ತು! ತಪ್ಪು ಮಾಡಿದೆ; ಗೌತಮ್ ಗಂಭೀರ್​ ಪಶ್ಚಾತಾಪ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:4 + 11 =
Remember me
