ದೊಡ್ಡಬಳ್ಳಾಪುರ:ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ ಸರ್ಧಾರ್ ವಲ್ಲಭಭಾಯ್ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿಎಂ
ಕೋಳಿ ಫಾರಂನಲ್ಲಿ ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಬೆಳಗ್ಗೆ ಶವವಾಗಿ ಪತ್ತೆಯಾದ ಸುದ್ದಿ ಕೇಳಿ ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದವರು ನೇಪಾಳ ಮೂಲದವರು ಎಂದು ಹೇಳಲಾಗಿದೆ.
ಕಾಲೆ ಸರೆರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40), ಮತ್ತು ಪೊಲ್ ಸರೇರಾ (16) ಮೃತ ದುರ್ದೈವಿಗಳು‌. ಕಳೆದ 8 ದಿನಗಳಿಂದಷ್ಟೆ ಕೆಲಸ ಹರಸಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಈ ಕುಟುಂಬ, ಇದೀಗ ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿದೆ.
ಇದನ್ನೂ ಓದಿ:ಸಂದರ್ಶನ ನೆಪದಲ್ಲಿ ಸೌದಿ ಮಹಿಳೆಯನ್ನು ಮಂಚಕ್ಕೆ ಕರೆದ ಖ್ಯಾತ ಯೂಟ್ಯೂಬರ್​! ಆತನ ಮಾತು ಕೇಳಿ ಸಂತ್ರಸ್ತೆ ಶಾಕ್​
ಕೋಳಿ ಫಾರಂ‌ನಲ್ಲಿ ಉದ್ಯೋಗ ಮಾಡಿ, ಜೀವನ ಸಾಗಿಸಲು ಬಂದಿದ್ದ ನಾಲ್ವರು, ಎಂದಿನಂತೆ ರಾತ್ರಿ ಶೆಡ್ ಬಾಗಿಲು ಮುಚ್ಚಿ ಮಲಗಿದ್ದರು. ಬೆಳಗ್ಗೆಯಾದರೂ ಹೊರಗೆ ಬಾರದ ಕಾರಣ, ಸ್ಥಳೀಯರು ಡೋರ್ ತೆರೆದು ನೋಡಿದಾಗ ಅವರೆಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲ್ವರ ಸಾವಿಗೆ ನಿಖರ ಕಾರಣವೇನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.
ಇದು ಮಾಸ್ಟರ್​ಪೀಸ್​!; ಸಿಂಪಲ್ ಸ್ಟಾರ್​ ಸಿನಿಮಾ ಹೊಗಳಿದ ನಟಿ ಸಮಂತಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
