ಕೋಲಾರ:ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಭೇದಿಸಲು ನಾಲ್ಕು ವಿಶೇಷ ತಂಡ ರಚಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಬುಧವಾರ ರಾತ್ರಿ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಎಎಸ್ಪಿ ಜಾಹ್ನವಿ ಹಾಗೂ ಡಿವೈಎಸ್ಪಿ ಸುಹೇಲ್ ಬಾಗ್ ನೇತೃತ್ವದಲ್ಲಿ ಇಬ್ಬರು ಸಿಪಿಐ ಮತ್ತು ಐವರು ಎಸ್​ಐ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿದೆ. ನಯಾಜ್ ಹಾಗೂ ಕಾರು ಚಾಲಕ ಸುನೀಲ್ ವಿಚಾರಣೆ ಮಾಡಲಾಗಿದೆ. ಈಗಾಗಲೇ ಕೆಲವು ಸುಳಿವು ಲಭ್ಯವಾಗಿವೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.
ಹೆಚ್ಚುವರಿ ಎಸ್​ಪಿ ಜಾಹ್ನವಿ ಅಪಹರಣ ನಡೆದ ಸ್ಥಳವನ್ನು ಪೊಲೀಸರು ಬುಧವಾರವೇ ಮಹಜರು ಮಾಡಿ ಬೆಗ್ಲಿಹೊಸಹಳ್ಳಿಯಲ್ಲಿನ ಫಾರ್ಮ್​ ಹೌಸ್​ನಲ್ಲೇ ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ನಯಾಜ್ ವಿಚಾರಣೆ:ಅಪಹಣಕಾರರಿಂದ ಬಿಡಿಸಿಕೊಳ್ಳಲು ಆಪ್ತ ಹಾಗೂ ಹಸು ವ್ಯಾಪಾರಿ ನಯಾಜ್ ಪಾಷಾ ಮೂಲಕ 48 ಲಕ್ಷ ರೂ.ಗಳನ್ನು ಕೋಲಾರದ ನರಸಾಪುರದ ಕಾಫಿ ಡೇ ಬಳಿ ಅಪಹರಣಕಾರರಿಗೆ ನೀಡಿದ್ದಾಗಿ ವರ್ತೂರು ದೂರಿನಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ನಯಾಜ್​ನನ್ನು ಗೌಪ್ಯ ಸ್ಥಳದಲ್ಲಿ ಒಂದು ಸುತ್ತಿನ ವಿಚಾರಣೆ ನಡೆಸಲಾಗಿದೆ. ವರ್ತೂರು ಜತೆಗಿನ ವ್ಯವಹಾರ, ಹಣ ಪಡೆಯಲು ಬಂದಿದ್ದ ವ್ಯಕ್ತಿಗಳಚಹರೆ ಇನ್ನಿತರ ಅಂಶಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ.
ವರ್ತೂರು ಜತೆಗೆ ಅಪಹರಣಕ್ಕೀಡಾಗಿ ಹಲ್ಲೆಗೊಳಗಾಗಿದ್ದ ಕಾರು ಚಾಲಕ ಸುನಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿನಲ್ಲಿರುವ ಪ್ರಕಾಶ್ ನಿವಾಸದಲ್ಲಿ ಆಶ್ರಯ ಪಡೆದಿದ್ದ. ಆತನನ್ನು ಕೋಲಾರಕ್ಕೆ ಕರೆಸಿಕೊಂಡ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದ್ದಲ್ಲದೆ ಗುಪ್ತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಹಸುಗಳ ಮಾರಾಟದಿಂದ ಸಂಗ್ರಹಿಸಲಾಗಿದ್ದ ಹಣ:
ನಯಾಜ್ ಪಾಷಾಗೆ ಮಾಜಿ ಸಚಿವ ವರ್ತರು ಪ್ರಕಾಶ್ ಅವರು ಫೋನ್ ಮಾಡಿ ದಾಗ ನಾನೂ ಜತೆಗಿದ್ದೆ. ಅಂದು ನಮ್ಮ ಬಳಿ ಹಸುಗಳನ್ನು ಮಾರಾಟ ಮಾಡಿದ್ದ 48 ಲಕ್ಷ ರೂ. ಇತ್ತು. ಪ್ರಕಾಶ್ ನೀಡಿದ ಸೂಚನೆಯಂತೆ ನರಸಾಪುರದ ಕಾಫಿ ಡೇ ಬಳಿ ಬಂದ ಅಪರಿಚಿತ ವ್ಯಕ್ತಿಗೆ ಹಣ ನೀಡಿದ್ದೇವೆ ಎಂದು ನಯಾಜ್ ಸಹೋದರ ಸಿರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿರುದ್ಧ ಯಾರೂ ದೂರು ಕೊಟ್ಟಿಲ್ಲ: ಅರುಣ್​ ಸಿಂಗ್​ ಸ್ಪಷ್ಟೋಕ್ತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 4 =
Remember me
