ವಿಜಯಪುರ :ಮತ್ತೆ ನಮ್ಮ ರಾಜ್ಯ ದೇಶದಲ್ಲಿ ನಂ.1 ಆಗಿ ರಾಜ್ಯದ ಗತವೈಭವ ಮರುಕಳಿಸಬೇಕಾದರೆ, ಶೇ.40 ಭ್ರಷ್ಟ ಸರ್ಕಾರ ತೊಲಗಬೇಕು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಸಂಘದ ಪ್ರಕಾರ ಬಹುತೇಕ ಬಿಜೆಪಿ ಸಚಿವರು ಎಲ್ಲ ಇಲಾಖೆಗಳಲ್ಲಿ ಶೇ.40 ಲಂಚ ತೆಗೆದುಕೊಳ್ಳುವುದರಲ್ಲಿ ಭಾಗಿ ಇದ್ದಾರೆ. ಬಿಜೆಪಿಯವರು ಆಡಳಿತ ವ್ಯವಸ್ಥೆ ಹಾಳು ಮಾಡಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ನಮಗೆ ಎರಡು ವರ್ಷಬೇಕು. ಆದಷ್ಟು ಬೇಗ ಈ ಭ್ರಷ್ಟ ಸರ್ಕಾರ ತೊಲಗಬೇಕು. ಭವ್ಯ ಸಂಸ್ಕೃತಿ, ಇತಿಹಾಸ ನಮ್ಮ ರಾಜ್ಯ ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗಲು ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಜನಸಾಗರವನ್ನು ನೀವೆಲ್ಲ ನೋಡಿದ್ದಿರಿ. ಆದರೆ ಬಿಜೆಪಿ ಸಂಕಲ್ಪಯಾತ್ರೆಯಲ್ಲಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಸ್ಮತಿ ಇರಾನಿ ಮಾತನಾಡುವಾಗ ಖಾಲಿ ಕುರ್ಚಿಗಳಿದ್ದವು. ಖಾಲಿ ಕುರ್ಚಿಗಳನ್ನು ತೋರಿಸಿ ಲಕ್ಷಾಂತರ ಜನ ಎಂದು ತೋರಿಸಿದ್ದಾರೆ. ಬೇಕಿದ್ದರೆ ಖಾಲಿ ಕುರ್ಚಿಗಳ ವಿಡಿಯೋ ಸಾಕ್ಷಿ ಕೊಡುತ್ತೇನೆ ಎಂದು ಕುಟುಕಿದರು.
ಪಿಎಸ್‌ಐ ಅಕ್ರಮ ಪ್ರಕರಣ; ತಪ್ಪಿತಸ್ಥರಿಗೆ ಶಿಕ್ಷೆ ಆಗಲಿಪಿಎಸ್‌ಐ ಅಕ್ರಮ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಎರಡು-ಮೂರು ತಿಂಗಳಲ್ಲಿ ನಿಷ್ಪಕ್ಷಪಾತವಾದ ತನಿಖೆ ಮಾಡಿ ನಿರಪರಾಧಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಎಂ.ಬಿ.ಪಾಟೀಲ ತಿಳಿಸಿದರು. ಪಿಎಸ್‌ಸೈ ಒಂದೇ ಅಲ್ಲ ಇನ್ನೂ ಬೇರೆ ಬೇರೆ ಹಗರಣಗಳು ಹೊರಬರುತ್ತಿವೆ. ತಪ್ಪಿತಸ್ಥರನ್ನು ತೆಗೆದು ಹಾಕಿ ಕಷ್ಟಪಟ್ಟು ಹಗಲು ರಾತ್ರಿ ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
