ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಕರೊನಾ ಅಬ್ಬರದಿಂದಾಗಿ ಆಕ್ಸಿಜನ್​ಗೆ ದೇಶದೆಲ್ಲೆಡೆ ಹಾಹಾಕಾರ ಉಂಟಾಗುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಮಟ್ಟಿಗೆ ಕೊಂಚ ನಿರಾಳ ತರುವಂಥ ಸುದ್ದಿ ಇಲ್ಲಿದೆ.
ಅಂದಾಜು 34 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕದ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದರಂತೆ ಪಿಎಸ್​ಎ ಮಾದರಿ 40 ಆಕ್ಸಿಜನ್ ಉತ್ಪಾದನಾ ಘಟಕಗಳ ಆರಂಭಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಸಿರು ನಿಶಾನೆ ತೋರಿಸಿದೆ.
390 ಎಲ್​ಪಿಎಂ (ಲೀಟರ್ ಪರ್ ಮಿನಿಟ್ ಉತ್ಪಾದನಾ) ಸಾಮರ್ಥ್ಯದ 30 ಘಟಕಗಳು ಹಾಗೂ 500 ಎಲ್​ಪಿಎಂನ 30 ಘಟಕಗಳನ್ನು ಸ್ಥಾಪಿಸುವಂತೆ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದೆ. 390 ಎಲ್​ಪಿಎಂ ಸಾಮರ್ಥ್ಯದ 30 ಘಟಕಗಳ ಪೈಕಿ 11ನ್ನು ಮೇ 15 ಹಾಗೂ ಇನ್ನುಳಿದ ಎಲ್ಲ ಘಟಕಗಳನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕೆಂದು ತಾತ್ಕಾಲಿಕ ಗಡುವು ವಿಧಿಸಿದೆ. ಆದರೆ ಮೂಲಗಳ ಪ್ರಕಾರ ಪ್ರೊಡಕ್ಷನ್ ಪ್ಲಾಂಟ್ ಸಿದ್ಧವಾಗುತ್ತಿರುವುದು ತಿಂಗಳಿಗೆ ಕನಿಷ್ಠವೆಂದರೆ ನಾಲ್ಕೈದು. ಮೇ 5 ರಂದು ಆದೇಶ ಹೊರ ಬಿದ್ದಿದೆ.
ತಕ್ಷಣಕ್ಕೆ ಈ ಪ್ರಮಾಣದಲ್ಲಿ ಪ್ಲಾಂಟ್​ಗಳನ್ನು ಪೂರೈಸಲು ಪೂರೈಕೆದಾರರಿಗೆ ಸಾಧ್ಯವಾಗದೇ ಹೋಗಬಹುದು. ಆದರೂ ಈ ಎಲ್ಲ ಘಟಕಗಳ ನಿರ್ಮಾಣ ಕಾಮಗಾರಿ ಜೂನ್ 30 ರೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಹೇಳುತ್ತಿವೆ. ತಲಾ ಒಂದು ಘಟಕ ಸ್ಥಾಪನೆಗೆ ಪ್ಲಾಂಟ್, ಸಿವಿಲ್ ಹಾಗೂ ಎಲೆಕ್ಟ್ರಿಕಲ್ ಕಾಮಗಾರಿ ಸಹಿತ ಅಂದಾಜು 82 ಲಕ್ಷ ರೂ. ಅಧಿಕ ವೆಚ್ಚವನ್ನು ನಿರೀಕ್ಷಿಸಲಾಗಿದೆ.
ಉದ್ದೇಶಿತ ಪಿಎಸ್​ಎ ಟೈಪ್ ಆಫ್ ಪ್ಲಾಂಟ್​ಗಳನ್ನು ರಾಜ್ಯದ ಹಲವು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ. ಈ ಪ್ಲಾಂಟ್​ನಲ್ಲಿ ಉತ್ಪಾದನೆಯಾಗುವ ಆಕ್ಸಿಜನ್​ನನ್ನು ಕನಿಷ್ಠವೆಂದರೂ ನೂರು ರೋಗಿಗಳಿಗೆ ನೇರ ಪೂರೈಸಲು ಸಾಧ್ಯವಾಗಲಿದೆ. ಈ ಘಟಕ ವಾತಾವರಣದಲ್ಲಿರುವ ಗಾಳಿ ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಉತ್ಪಾದಿಸುತ್ತದೆ.
| ಎಸ್.ರಮೇಶ್ ಎಇಇ ಇಂಜಿನಿಯರ್ ಆ ಮತ್ತು ಕು.ಇಲಾಖೆ ಇಂಜಿನಿಯರಿಂಗ್ ವಿಭಾಗ ತುಮಕೂರು
ಜಿಲ್ಲಾಧಿಕಾರಿ ಪತ್ರ
ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಈಗಿರುವ 6 ಕೆಎಲ್ ಸಾಮರ್ಥ್ಯದ ಮತ್ತೊಂದು ಆಕ್ಸಿಜನ್ ಸ್ಟಾಕ್ ಯೂನಿಟ್ ಸ್ಥಾಪನೆಗೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಇನ್ನು ಹೆಚ್ಚುವರಿಯಾಗಿ 230 ಆಕ್ಸಿನೇಟೆಡ್ ಬೆಡ್​ಗಳನ್ನು ಸ್ಥಾಪಿಸುವ ಕಾಮಗಾರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆಡಳಿತಾತ್ಮಕ ಅನುಮೋದನೆ ನೀಡಿ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
