ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದಿದ್ದ 40 ಪರ್ಸೆಂಟ್ ಕಮೀಷನ್ ವಿಚಾರದ ಪತ್ರವು ವಿಧಾನಸಭೆಯಲ್ಲಿ ಬುಧವಾರ ಸದ್ದು ಮಾಡಿತು. ಕಂಟ್ರಾಕ್ಟರ್ ಅಸೋಸಿಯೇಷನ್​ನವರು ಎಂದಾದರೂ ಪ್ರಧಾನಿಗೆ ಪತ್ರ ಬರೆದಿದ್ರಾ? ರಾಜ್ಯದ ತೆರಿಗೆ ಹಣ ಲೂಟಿಯಾಗುತ್ತಿದೆ. ರಾಜ್ಯದ ಜನರಿಗೆ ಇದು ಗೊತ್ತಾಗಬೇಕು. ಭ್ರಷ್ಟಾಚಾರ ಕಂಡ್ರೆ ನಾವು ನೋಡ್ತಾ ಕೂತಿರಬೇಕಾ? ಇದು ಜನರು ಬೆವರು ಸುರಿಸಿದ ಹಣ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಈ ವೇಳೆ ಸಿಎಂ, ಮಾಜಿ ಸಿಎಂ ನಡುವೆ ಮಾತಿನ ಸಮರ ಏರ್ಪಟ್ಟಿತು. ಭ್ರಷ್ಟಾಚಾರ ವಿಷಯದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ನಿಮ್ಮ ಕಾಲದಲ್ಲಿ ಏನಾಗಿದೆ ನಮ್ಮ ಕಾಲದಲ್ಲಿ ಏನು ಆಗಿದೆ. ಇದೆಲ್ಲದರ ಬಗ್ಗೆ ಚರ್ಚೆ ಮಾಡೋಕೆ ನಾವು ಸಿದ್ಧರಿದ್ದೇವೆ. ಅಸೋಸಿಯೇಷನ್ ಪತ್ರ ಬರೆದಿದೆ ಅಂದರೆ ಆಧಾರವಿದೆಯಾ? ದಾಖಲೆಗಳಿಲ್ಲದೆ ಹೇಗೆ ಚರ್ಚೆ ಮಾಡೋಕೆ ಸಾಧ್ಯ? ನಾವೇನು ನಾಟಕ ಮಾಡುತ್ತಿದ್ದೇವಾ? ಈ ವಿಚಾರದಲ್ಲಿ ಮುಕ್ತಚರ್ಚೆಗೆ ನಾವು ಸಿದ್ಧರಿದ್ದೇವೆ. ಗುತ್ತಿಗೆದಾರರು ಪತ್ರ ಏಕೆ ಬರೆದರು, ಯಾರ ಚಿತಾವಣೆಯಲ್ಲಿ ಬರೆದರು? ಎಂಬ ಬಗ್ಗೆ ತನಿಖೆ ನಡೆಯಬೇಕು. ಅದು ಆಧಾರರಹಿತ ಪತ್ರವಾಗಿದೆ. ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಚರ್ಚೆ ಮಾಡಲು ಯಾವುದೇ ತಕರಾರಿಲ್ಲ. ಅದರ ಬಗ್ಗೆ ಮುಕ್ತ ಚರ್ಚೆ ಮಾಡೋಣ ಎಂದು ಬೊಮ್ಮಾಯಿ ತಿರುಗೇಟು ಕೊಟ್ಟರು.
ನಿಲುವಳಿ ಸೂಚನೆಯಡಿ ಚರ್ಚೆಗೆ ಪಟ್ಟು:ಕಮೀಷನ್ ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆ ಅಡಿ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯ ಮಾಡಿದ ಸಿದ್ದರಾಮಯ್ಯ, ನಾನು ಬೆಳಗಾವಿಯಲ್ಲೂ ಕೇಳಿದ್ದೆ. ಅಲ್ಲೂ ಪ್ರಸ್ತಾಪ ಮಾಡೋಕೆ ನೀವು ಅವಕಾಶ ಕೊಡಲಿಲ್ಲ. ಗುತ್ತಿಗೆದಾರರು ಯಾವ ಕಾಲದಲ್ಲೂ ಶೇ.40 ಕಮೀಷನ್ ಬಗ್ಗೆ ಪತ್ರ ಬರೆದಿರಲಿಲ್ಲ. ಇದು ದಿನಾ ನಡೆಯುವ ಅವ್ಯವಹಾರವಾಗಿದೆ. ಆದರೆ, ಇದನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಿಲುವಳಿ ಸೂಚನೆ ಅಡಿ ಚರ್ಚೆಗೆ ಅವಕಾಶ ಕೊಡಲಾಗದು. ಬೇರೆ ಯಾವುದಾದರೂ ನಿಯಮಾವಳಿ ಅಡಿ ಚರ್ಚೆ ಮಾಡಿ ಅಥವಾ ಇಲಾಖಾವಾರು ಬೇಡಿಕೆಗಳ ಮೇಲೆ ಈ ಬಗ್ಗೆ ಮಾತನಾಡಿ ಎಂದು ಸ್ಪೀಕರ್ ಸಲಹೆಕೊಟ್ಟರು. ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಈಗಾಗಲೆ ಸಭಾಧ್ಯಕ್ಷರು ಈ ವಿಷಯದ ಬಗ್ಗೆ ಚರ್ಚೆಗೆ ನಿರಾಕರಿಸಿದ್ದಾರೆ. ಬೇರೆ ನಿಯಮಗಳಲ್ಲಿ ಬೇಕಾದರೆ ಮಾತನಾಡಬಹುದು ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯರೇ ತಮಗೂ ಅನುಭವ ಇದೆ. ಸ್ಪೀಕರ್ ಬರುವುದಿಲ್ಲ ಎಂದ ಬಳಿಕ ಅದನ್ನು ಅದೇ ನಿಯಮಾವಳಿಯಲ್ಲೇ ಚರ್ಚೆಗೆ ಅವಕಾಶ ಕೊಡಿ ಎಂದು ಹಠ ಹಿಡಿಯುವುದು ಸರಿಯಲ್ಲ. ಬೇರೆ ನಿಯಮದಡಿ ಈ ವಿಷಯವನ್ನು ನೀವು ಚರ್ಚೆಗೆ ತೆಗೆದುಕೊಳ್ಳಿ. ನಿಮ್ಮ ಕಾಲದಲ್ಲಿ ಏನೇನಾಯ್ತು. ನಮ್ಮ ಅವಧಿಯಲ್ಲಿ ಏನೇನಾಯ್ತು. ಇದೆಲ್ಲದನ್ನೂ ಚರ್ಚೆ ಮಾಡೋಣ.
|ಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 80 ಪೈಸೆ, ಗ್ಯಾಸ್ ಮೇಲೆ 50 ಏರಿಕೆ ರೂ. ಮಾಡಲಾಗಿದೆ. ಈಗಾಗಲೆ ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿ ದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಮೇಲೆ ಬೆಲೆ ನಿಯಂತ್ರಣ ಮಾಡುವುದರಲ್ಲಿ ವಿಫಲವಾಗಿದ್ದಾರೆ.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 15 =
Remember me
