| ಕೀರ್ತಿನಾರಾಯಣ ಸಿ. ಬೆಂಗಳೂರು
ಕರೊನಾ ತಂದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿರುವ ಸರ್ಕಾರದ ಖಜಾನೆಗೆ, ಫೈನಾನ್ಸ್ ಸಂಸ್ಥೆಗಳಿಂದ ಜಪ್ತಿಯಾಗಿರುವ ಖಾಸಗಿ ಬಸ್​ಗಳಿಂದ ಬರಬೇಕಾದ ಕೋಟ್ಯಂತರ ರೂ. ತೆರಿಗೆ ಹಣವನ್ನು ಭರ್ತಿ ಮಾಡಲು ನಿರ್ಧರಿಸಿರುವ ಸಾರಿಗೆ ಇಲಾಖೆ ಇದಕ್ಕಾಗಿ ವಿಶೇಷ ಕಾರ್ಯಾಚರಣೆಗೆ ಮುಂದಾಗಿದೆ.
ಬೆಂಗಳೂರಿನ ಕುಂಬಳಗೋಡು ಸಮೀಪದ ಗೋಣಿಪುರ ಹಾಗೂ ತಾವರೆಕೆರೆ ಬಳಿಯ 2 ಯಾರ್ಡ್​ಗಳಲ್ಲೇ 20 ಬಸ್ ಪತ್ತೆಯಾಗಿದ್ದು, 1.70 ಕೋಟಿ ರೂ. ತೆರಿಗೆ ಬಾಕಿ ಇದೆ. ಇದೇ ರೀತಿ ಕೆಲ ಬ್ಯಾಂಕ್​ಗಳು ಹಾಗೂ ಫೈನಾನ್ಸ್ ಸಂಸ್ಥೆಗಳು ಜಪ್ತಿ ಮಾಡಿರುವ ಬಸ್ ನಿಲ್ಲಿಸುವುದಕ್ಕಾಗಿಯೇ ರಾಜಧಾನಿಯಲ್ಲಿ 40 ಯಾರ್ಡ್​ಗಳಿರುವ ವಿಚಾರ ಆರ್​ಟಿಒ ಅಧಿಕಾರಿಗಳ ಪರಿಶೀಲನೆಯಲ್ಲಿ ಗೊತ್ತಾಗಿದೆ. ಇದೇ ರೀತಿ ರಾಜ್ಯಾದ್ಯಂತ ಸಾವಿರಾರು ಬಸ್​ಗಳಿದ್ದು, ಅವುಗಳಿಂದ ಕೋಟ್ಯಂತರ ರೂ. ತೆರಿಗೆ ಪಾವತಿ ಆಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್​ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿ, ರೂಪುರೇಷೆ ಸಿದ್ಧಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಸಂಬಂಧ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರಕುಮಾರ್ ಮಂಗಳವಾರ ಆರ್​ಟಿಒ ಅಧಿಕಾರಿಗಳ ಸಭೆ ಕರೆದಿದ್ದಾರೆ.‘
ಇದನ್ನೂ ಓದಿ:‘ಕರೊನಾ ಮತ್ ರೋನಾ’ ಹಾಡು ಬಿಡುಗಡೆ ಮಾಡಿದ ಭಾಸ್ಕರ್​ರಾವ್
ಫೈನಾನ್ಸ್ ಸಂಸ್ಥೆಗಳು ಕಾರ್ಯಾಚರಣೆಗೆ ಅಡ್ಡಿಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳ ನೆರವು ಪಡೆಯಲು ತೀರ್ವನಿಸಲಾಗಿದೆ.
ಅಧಿಕಾರಿಗಳಿಗೆ ಹಲ್ಲೆ ಭಯ:ಆರ್​ಟಿಒ ಅಧಿಕಾರಿಗಳಿಗೆ ಕೇಸ್ ದಾಖಲಿಸುವ ಅಥವಾ ತಪ್ಪಿತಸ್ಥರ ವಿಚಾರಣೆ ನಡೆಸುವ ಅಧಿಕಾರವಿಲ್ಲ. ಫೈನಾನ್ಸ್ ಸಂಸ್ಥೆಗಳು ಬಸ್​ಗಳ ಜಪ್ತಿ ಜವಾಬ್ದಾರಿಯನ್ನು ಏಜೆನ್ಸಿಗಳಿಗೆ
ಕೊಟ್ಟಿರುತ್ತವೆ. ಈ ಏಜೆನ್ಸಿಗಳು ಸ್ಥಳೀಯ ಯುವಕರನ್ನು ನೇಮಿಸಿಕೊಂಡು ಜಪ್ತಿ ಕಾರ್ಯಾಚರಣೆ ನಡೆಸುವುದರಿಂದ ಪರಿಶೀಲನೆಗೆ ಹೋಗುವ ಅಧಿಕಾರಿಗಳಿಗೆ ಹಲ್ಲೆಗೊಳಗಾಗುವ ಭೀತಿ ಕಾಡಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳ ನೆರವು ಪಡೆದು ಕಾರ್ಯಾಚರಣೆ ನಡೆಸುವುದು ಸೂಕ್ತ ಎಂದು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಐಪಿಎಸ್ ಅಧಿಕಾರಿ ಸಾರಿಗೆ ಇಲಾಖೆ ಕಮಿಷನರ್:ಸಾರಿಗೆ ಇಲಾಖೆ ಕಮಿಷನರ್ ಶಿವಕುಮಾರ್ ಐಪಿಎಸ್ ಅಧಿಕಾರಿಯೂ ಆಗಿರುವುದರಿಂದ ಆರ್​ಟಿಒ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಎದುರಾಗಬಹುದಾದ ಸವಾಲು, ಅಪಾಯದ ಬಗ್ಗೆ ಮಾಹಿತಿ ಇದೆ. ನಗರ ಪೊಲೀಸ್ ಆಯುಕ್ತರ ಮುಖೇನ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಬೇಕು. ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಫೈನಾನ್ಸ್ ಸಂಸ್ಥೆಗಳು ಜಪ್ತಿ ಮಾಡಿರುವ ಖಾಸಗಿ ಬಸ್​ಗಳಿಂದ ಕೋಟ್ಯಂತರ ರೂ. ತೆರಿಗೆ ಬರಬೇಕಿದೆ. ಇದು ಬಂದರೆ ಸರ್ಕಾರಕ್ಕೂ ಅನುಕೂಲ. ಹೀಗಾಗಿ ಜಪ್ತಿ ಬಸ್​ಗಳ ಮಾಹಿತಿ ಸಂಗ್ರಹಿಸುವುದಕ್ಕಾಗಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ರ್ಚಚಿಸಲು ಮಂಗಳವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ. ಯಾವುದೇ ಕಾರಣಕ್ಕೂ ತೆರಿಗೆ ವಂಚಿಸಲು ಬಿಡುವುದಿಲ್ಲ.
| ಜೆ.ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ
ಸಾಲ ಕಟ್ಟದೆ ಸೀಜ್ ಮಾಡಿರುವ ಪ್ರತಿ ಬಸ್​ನಿಂದ ಸರಾಸರಿ 4 ರಿಂದ 8 ಲಕ್ಷ ರೂ. ತೆರಿಗೆ ಬಾಕಿ ಇದೆ. ವಾಹನ ಜಪ್ತಿ ಮಾಡಿದ ಬಳಿಕ ಆರ್​ಟಿಒ ಗಮನಕ್ಕೆ ತಾರದೆ ಫೈನಾನ್ಸ್ ಸಂಸ್ಥೆಗಳು ಮಧ್ಯವರ್ತಿಗಳ ಮುಖಾಂತರ ಕಳ್ಳದಾರಿಯಲ್ಲಿ ಬಸ್​ಗಳ ಮಾರಾಟ ಮಾಡುತ್ತಿರುವ ವಿಚಾರ ಈಗಾಗಲೇ ದೃಢಪಟ್ಟಿದೆ. ಈ ಬೆಳವಣಿಗೆ ತೆರಿಗೆ ನಷ್ಟ ತರುವ ಜತೆಗೆ ಜನರ ಜೀವಕ್ಕೂ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
