ಬೆಂಗಳೂರು:ರಾಜ್ಯದಲ್ಲಿ ಕರೊನಾ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಸಮಾಧಾನದ ನಡುವೆಯೇ ಸಾವಿನ ಸಂಖ್ಯೆ ಇಳಿಯದಿರುವುದು ಹಾಗೂ ಗುಣಮುಖರಲ್ಲಿ ‘ಬ್ಲ್ಯಾಕ್​ ಫಂಗಸ್’ ಸೋಂಕು ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಅದರಲ್ಲೂ ರಾಜ್ಯದಲ್ಲಿ ಪ್ರತೀ ವಾರ ಸರಾಸರಿ 400ಕ್ಕೂ ಅಧಿಕ ಜನರು ‘ಕಪ್ಪು ಶಿಲೀಂಧ್ರ’ ಸೋಂಕಿಗೆ ಸಿಲುಕುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಸೋಮವಾರ ಹೈಕೋರ್ಟ್​ಗೆ ಸಲ್ಲಿಸಿರುವ ಲಿಖಿತ ಹೇಳಿಕೆ ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿದೆ.
ರಾಜ್ಯದಲ್ಲಿ ಈವರೆಗೆ 12 ಜನ ಬ್ಲಾ್ಯಕ್ ಫಂಗಸ್​ಗೆ ಬಲಿಯಾಗಿದ್ದಾರೆ. 446 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಮುಂಬರುವ ದಿನಗಳಲ್ಲಿ ವಾರಕ್ಕೆ 400ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುವ ಅಂದಾಜಿದೆ. ಚಿಕಿತ್ಸೆಗೆ ಅಗತ್ಯವಿರುವ ‘ಲೈಪೊಸೋಮಲ್ ಆಂಫೋಟೆರಿಸಿನ್ ಬಿ’ ಚುಚ್ಚುಮದ್ದಿನ 20 ಸಾವಿರ ವಯಲ್​ಗಳನ್ನು ಪೂರೈಸುವಂತೆ ಮೇ 12ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಕೋವಿಡ್ ಚಿಕಿತ್ಸೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಪ್ರತಿಯಾಗಿ ಸರ್ಕಾರ ನ್ಯಾಯಪೀಠಕ್ಕೆ ಉತ್ತರ ನೀಡಿದೆ.
10ರಿಂದ 12 ದಿನದ ಚಿಕಿತ್ಸೆ:ಬ್ಲಾ್ಯಕ್ ಫಂಗಸ್ ರೋಗಕ್ಕೆ ತುತ್ತಾದವರಿಗೆ 10 ರಿಂದ 12 ದಿನಗಳವರೆಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಚಿಕಿತ್ಸಾ ಅವಧಿಯಲ್ಲಿ ಪ್ರತಿದಿನ 4 ವಯಲ್​ಗಳಂತೆ ಪ್ರತಿ ರೋಗಿಗೆ ಒಟ್ಟು 50 ವಯಲ್​ಗಳ ಇಂಜೆಕ್ಷನ್ ನೀಡುವ ಅಗತ್ಯವಿರುತ್ತದೆ. ಈ ಅಧಾರದಲ್ಲಿ 20 ಸಾವಿರ ವಯಲ್​ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜತೆಗೆ, ಖಾಸಗಿ ಔಷಧ ತಯಾರಿಕಾ ಸಂಸ್ಥೆಗಳಿಂದ ಒಟ್ಟು 1,050 ವಯಲ್​ಗಳನ್ನು ರಾಜ್ಯ ಔಷಧ ಪೂರೈಕೆ ನಿಗಮದ ಮುಖಾಂತರ ಖರೀದಿಗೆ ಮುಂದಾಗಿದ್ದು, ಮೇ 17ಕ್ಕೆ ಅನುಗುಣವಾಗಿ ಒಟ್ಟು 450 ವಯಲ್​ಗಳು ಲಭ್ಯವಾಗಿದೆ. ಈ ಚುಚ್ಚುಮದ್ದನ್ನು ಕೋವಿಡ್ ಚಿಕಿತ್ಸೆಗೆ ಬಳಸುವ ‘ಟೊಸಿಲಿಜುಮಾಬ್’ ಚುಚ್ಚುಮದ್ದು ಪೂರೈಸುವ ಮಾದರಿಯಲ್ಲಿಯೇ ಹಂಚಿಕೆ ಮಾಡಲಾಗುತ್ತಿದ್ದು, ರಾಜ್ಯ ವಾರ್ ರೂಂನಲ್ಲಿ ಇದರ ಹಂಚಿಕೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಮಧುಮೇಹಿಗಳಿಗೆ ಡೇಂಜರ್:ಕರೊನಾ ಸೋಂಕಿನ ಚಿಕಿತ್ಸೆಗೆ ಸ್ಟಿರಾಯ್್ಡ ಬಳಸಲಾಗುತ್ತಿದೆ. ಹೆಚ್ಚು ಮಧುಮೇಹ ಹೊಂದಿರುವ ರೋಗಿಗಳಲ್ಲಿ ಸ್ಟಿರಾಯ್್ಡ ಬಳಕೆಯಿಂದ ಸಕ್ಕರೆ ಅಂಶ ಹೆಚ್ಚಾಗುವುದರಿಂದ ಫಂಗಸ್ ಬೆಳವಣಿಗೆ ಹೆಚ್ಚಾಗುತ್ತದೆ. ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಸ್ಟಿರಾಯ್್ಡ ಹಾಗೂ ಪ್ರಬಲ ಆಂಟಿಬಯಾಟಿಕ್​ಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಕೆಲವು ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬ್ಲಾ್ಯಕ್ ಫಂಗಸ್ ಉಂಟಾಗುತ್ತದೆ. ಆಕ್ಸಿಜನ್ ಹ್ಯೂಮಿಡಿಫೈಯರ್​ನಲ್ಲಿ ಬಳಸುವ ನೀರನ್ನು ಸ್ಟೆರಲೈಸ್ ಮಾಡದೇ ಇದ್ದ ಸಂದರ್ಭದಲ್ಲೂ ಈ ಫಂಗಸ್ ಬರುವ ಸಾಧ್ಯತೆ ಇರುತ್ತದೆ.
ಬೆಂಗಳೂರಲ್ಲೇ 10 ಸಾವು:ಬ್ಲಾ್ಯಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಎರಡೂ ಆಸ್ಪತ್ರೆಗಳಲ್ಲಿ ಸದ್ಯ 94 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಬೆಂಗಳೂರಲ್ಲೇ 10 ಜನ ಕಪ್ಪು ಶಿಲೀಂದ್ರ ಸೋಂಕಿಗೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೂ ದಾಖಲಾಗಿದ್ದ 68 ಮಂದಿಯಲ್ಲಿ 9 ಮಂದಿ ಸಾವನ್ನಪ್ಪಿದ್ದು, 7 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಸದ್ಯ 58 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಒಟ್ಟು 41 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗುಣಮುಖರಾಗಿದ್ದು, 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಯೆಲ್ಲೋ ಫಂಗಸ್ ಎನ್ನುವುದು ಫಂಗಸ್​ನ ವರ್ಣ ವ್ಯತ್ಯಾಸವಷ್ಟೆ. ಇವು ದೇಹದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ವರ್ಣದಲ್ಲಿ ಇರುತ್ತವಷ್ಟೆ. ಹಾಗಂತ ಬೇರೊಂದು ಶಿಲೀಂಧ್ರಕ್ಕಿಂತ ಯೆಲ್ಲೋ ಫಂಗಸ್ ಮಾರಕ ಎಂದು ಜನರನ್ನು ದಾರಿತಪ್ಪಿಸಬಾರದು. ಶಿಲೀಂಧ್ರಗಳಲ್ಲಿ ಮೂರು ಬಗೆ. ಮ್ಯೂಕೊರ್​ವೆುೖಕೊಸಿಸ್, ಕ್ಯಾಂಡಿಡಾ, ಆರ್ಸ³ಲೊಸಿಸ್. ಕೋವಿಡ್ ನಂತರ ಕಾಣಿಸುವುದು ಮ್ಯೂಕೊರ್​ವೆುೖಕೊಸಿಸ್. ಆರ್ಸ³ಲೊಸಿಸ್ ಶ್ವಾಸಕೋಶದ ಮೇಲೆ ಕಾಣಿಸುವಂತಹದ್ದು.
|ಡಾ. ರಣದೀಪ್ ಗುಲೇರಿಯಾಏಮ್ಸ್​ ನಿರ್ದೇಶಕ
ಬ್ಲ್ಯಾಕ್​ ಫಂಗಸ್ ಹಾಗೂ ವೈಟ್ ಫಂಗಸ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೇಶ ಹೆಣಗುತ್ತಿರುವಾಗಲೇ ಹಳದಿ ಫಂಗಸ್​ನ ಪ್ರಭೇದ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಹಳದಿ ಶಿಲೀಂಧ್ರದ ಮೊದಲ ಪ್ರಕರಣ ಪತ್ತೆಯಾಗಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗದಿದ್ದರೂ ಅದು ಬ್ಲಾ್ಯಕ್ ಮತ್ತು ವೈಟ್ ಫಂಗಸ್​ಗಳಿಗಿಂತ ಹೆಚ್ಚು ಮಾರಕ ಎನ್ನಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಹಳದಿ ಶಿಲೀಂಧ್ರದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲೈಪೊಸೋಮಲ್ ಆಂಫೋಟೆರಿಸಿನ್ ಬಿ ಇಂಜೆಕ್ಷನ್ ಕೊರತೆಯಿರುವುದು ನಿಜ. ಹೀಗಾಗಿ 1,000 ವೈಯಲ್ಸ್ ಔಷಧಿ ತಕ್ಷಣ ಪೂರೈಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ರಾಜ್ಯದ ತಜ್ಞರು ಹಾಗೂ ಪ್ರತಿ ಜಿಲ್ಲೆಯ ಬಹುಶಿಸ್ತೀಯ ಸಮಿತಿ ಜತೆಗೆ ರ್ಚಚಿಸಿ, ಬ್ಲಾ್ಯಕ್ ಫಂಗಸ್ ಸೋಂಕಿತರಿಗೆ ಏಕರೂಪದ ಚಿಕಿತ್ಸೆ ನೀಡುವ ಕುರಿತು ಮಾರ್ಗಸೂಚಿ ಶೀಘ್ರವೇ ಹೊರಡಿಸಲಾಗುವುದು ಎಂದರು. ತಜ್ಞರ ಸಮಿತಿ ನೀಡಿದ ಪ್ರಾಥಮಿಕ ವರದಿಯನ್ವಯ ರೋಗದ ಮೂಲಗಳ ಬಗ್ಗೆ ಎಲ್ಲ ಜಿಲ್ಲೆಗಳಿಗೆ ಮಾಹಿತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಗಿದೆ. ಅಂತಿಮ ವರದಿ ಸಲ್ಲಿಸಿದ ಬಳಿಕ ಬ್ಲಾ್ಯಕ್ ಫಂಗಸ್ ಗೆ ನಿಖರ ಕಾರಣಗಳು, ಪರಿಹಾರದ ಮಾಗೋಪಾಯ ಸ್ಪಷ್ಟವಾಗಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.
ಹುಬ್ಬಳ್ಳಿ:ಇಲ್ಲಿನ ಕಿಮ್ಸ್​ಗೆ ರಾಜ್ಯ ಸರ್ಕಾರ ಕಳುಹಿಸಿದ ‘ಲೈಪೊಸೋಮಲ್ ಆಂಫೋಟೆರಿಸಿನ್ ಬಿ’ ಔಷಧದ 100 ವೈಯಲ್ಸ್ ಒಂದೇ ದಿನಕ್ಕೆ ಖಾಲಿಯಾಗಿದೆ. ಹೀಗಾಗಿ, ಬ್ಲ್ಯಾಕ್ ಫಂಗಸ್ ರೋಗಿಗಳು ಅಪಾಯಕ್ಕೆ ಸಿಲುಕಿದ್ದಾರೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆ ನೀಡಲು ಕಿಮ್್ಸ ಅನ್ನು ರಾಜ್ಯ ಸರ್ಕಾರವು ಪ್ರಾದೇಶಿಕ ಕೇಂದ್ರವನ್ನಾಗಿ ಘೊಷಿಸಿದೆ. ಹಾಗಾಗಿಯೇ ರಾಜ್ಯದ ವಿವಿಧ ಜಿಲ್ಲೆ ಹಾಗೂ ಬೇರೆ ರಾಜ್ಯದಿಂದ ಬ್ಲ್ಯಾಕ್ ಫಂಗಸ್ ಆದವರನ್ನು ಚಿಕಿತ್ಸೆಗೆ ದಾಖಲಿಸಲಾಗುತ್ತಿದೆ. ಮೊದಲು 2 ಇದ್ದ ಪ್ರಕರಣಗಳು, 17 ದಿನದಲ್ಲಿ 103 ಆಗಿವೆ. ಇಲ್ಲಿ 41 ಪ್ರಕರಣಗಳಿದ್ದ ಸಂದರ್ಭದಲ್ಲಿ ಜಿಲ್ಲಾಡಳಿತವು 2 ಸಾವಿರ ವೈಯಲ್ಸ್ ಬೇಕೆಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಶತಕ ದಾಟಿದೆ. ವೈಯಲ್ಸ್ ಗಳ ಬೇಡಿಕೆಯೂ ಹೆಚ್ಚಿದೆ. ಆದರೆ, ಮೊದಲು ಕೇಳಿದಷ್ಟೂ ಪೂರೈಕೆಯಾಗಿಲ್ಲ. ಹೀಗಾಗಿ ಸರ್ಕಾರ ತುರ್ತಾಗಿ ಗಮನ ಹರಿಸುವುದು ಅನಿವಾರ್ಯವಾಗಿದೆ.
ರಾಜ್ಯದಲ್ಲಿ ಇಂದು ಕರೊನಾ ಸೋಂಕಿತರಿಗಿಂತ ಗುಣವಾದವರ ಸಂಖ್ಯೆ ದುಪ್ಪಟ್ಟಿಗೂ ಅಧಿಕ!

ಅಶ್ಲೀಲ ಸಿಡಿ ಕೇಸ್‌ಗೆ ಬಿಗ್ ಟ್ವಿಸ್ಟ್​! ವಿಡಿಯೋದಲ್ಲಿ ಇರುವುದು ನಾನೇ, ಸಹಮತದಿಂದ ಒಟ್ಟಿಗೆ ಇದ್ದೆವೆಂದ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + seventeen =
Remember me
