ಬೆಂಗಳೂರು:ಕರ್ನಾಟಕ ಹಾಗೂ ಕೇರಳದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಂದ ಸುಮಾರು 402 ಕೋಟಿ ರೂಪಾಯಿ ತೆರಿಗೆ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ. ಆದಾಯ ತೆರಿಗೆ ಅಧಿಕಾರಿಗಳಿಂದ ಸಿನಿಮೀಯ ರೀತಿಯಲ್ಲಿ ನಡೆದ ಬೃಹತ್ ದಾಳಿಯಿಂದಾಗಿ ಈ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನಡೆಸಿರುವ ದೊಡ್ಡ ಪ್ರಮಾಣದ ತೆರಿಗೆ ವಂಚನೆ ಬಹಿರಂಗಗೊಂಡಿದೆ. ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯೇ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಆನ್​ಲೈನ್​ ಮೂಲಕ ವಂಚಿಸಿ ಹಣವನ್ನು ಪಡೆದಿದ್ದ ಶಿಕ್ಷಣ ಸಂಸ್ಥೆಗಳು ಸುಮಾರು 402 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ದಾಳಿಯಿಂದಾಗಿ ಮೇಲ್ನೋಟಕ್ಕೆ ಪತ್ತೆಯಾಗಿದೆ. ದಾಳಿ ವೇಳೆ 15 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, 30 ಕೋಟಿ ರೂಪಾಯಿ ಮೊತ್ತದ 81 ಕೆ.ಜಿ. ಚಿನ್ನಾಭರಣವನ್ನೂ ಪತ್ತೆ ಮಾಡಲಾಗಿದೆ. ಅಲ್ಲದೆ 40 ಕೆ.ಜಿ. ಬೆಳ್ಳಿಯ ಜತೆಗೆ ವಜ್ರ ಕೂಡ ಕಂಡುಬಂದಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಕಚೇರಿ ಹಾಗೂ ಸಂಬಂಧಿತರ ಮನೆಗಳ‌ ಮೇಲೆ ದಾಳಿ ವೇಳೆ ಸಾಕಷ್ಟು ದಾಖಲೆಗಳು ಪತ್ತೆಯಾಗಿದ್ದು, ದಾಖಲೆ ಇಲ್ಲದ ಸುಮಾರು 2.9 ಕೋಟಿ ರೂ. ಕೂಡ ಕಂಡುಬಂದಿದೆ. ಜತೆಗೆ ದುಬಾರಿ ಬೆಲೆಯ 35 ಕಾರುಗಳು ಬೇನಾಮಿ ಹೆಸರಿನಲ್ಲಿ ಇರುವುದನ್ನೂ ಪತ್ತೆ ಹಚ್ಚಲಾಗಿದೆ. ಅಲ್ಲದೆ ವಿದೇಶಗಳಲ್ಲಿಯೂ ಕೋಟ್ಯಂತರ ಆಸ್ತಿ ಅಕ್ರಮವಾಗಿ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮದುವೆಯಾಗಿ ಮೂರೇ ತಿಂಗಳಲ್ಲಿ ಹೆಂಡತಿಯನ್ನು ಕೊಂದು, ತಾನೂ ಸತ್ತ! ಪ್ರಕರಣದಲ್ಲಿ ಕೇಳಿಬಂತು ಗಂಡ ಬಿಟ್ಟ ಸಹೋದರಿಯ ಹೆಸರು…
ಕರ್ನಾಟಕ ಮತ್ತು ಕೇರಳದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ನಿನ್ನೆ ಸಿನಿಮೀಯ ರೀತಿಯಲ್ಲಿ 56 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು‌ ನಡೆಸುವ ನೀಟ್ ಪರೀಕ್ಷೆಯಲ್ಲಿ ಕಡಿಮೆ ಶ್ರೇಣಿಯಲ್ಲಿ ಪಾಸಾದವರಿಗೂ ಸೀಟು ನೀಡಲು ಏಜೆಂಟ್​ ಹಾಗೂ ಮಧ್ಯವರ್ತಿಗಳ ಮೂಲಕ ಹಣ ಪಡೆದು ಈ ರೀತಿ ಅಕ್ರಮ ಸಂಪಾದನೆ ಮಾಡಲಾಗಿದೆ ಎನ್ನಲಾಗಿದೆ. ಹೆಚ್ಚುವರಿ ಡೊನೇಷನ್ ಪಡೆದು ಸೀಟು ಹಂಚಿಕೆ, ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಪ್ರವೇಶ ಪಡೆದವರನ್ನು ಉತ್ತೀರ್ಣಗೊಳಿಸುವುದು ಮುಂತಾದವುಗಳ ಮೂಲಕ ಈ ಅಕ್ರಮ ಸಂಪಾದನೆ ಮಾಡಲಾಗಿರುವ ಕುರಿತು ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆಯ ಅಧಿಕಾರಿಗಳು ದಾಳಿಯನ್ನು ನಡೆಸಿದ್ದರು.
ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಖಾಸಗಿ ಆಸ್ಪತ್ರೆಗಳು, ಮೆಡಿಕಲ್​ ಕಾಲೇಜುಗಳ ಮೇಲೆ ಐಟಿ ದಾಳಿ

ಮದುವೆಯಾಗಲು ಇಷ್ಟವಿಲ್ಲದ್ದಕ್ಕೆ ನೇಣು ಹಾಕಿಕೊಂಡಳು; ಐಒಸಿ ಇಂಜಿನಿಯರ್ ಆತ್ಮಹತ್ಯೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × four =
Remember me
