| ಕೇಶವಮೂರ್ತಿ ವಿ.ಬಿ. ಹಾವೇರಿಮುಂಗಾರು ಪೂರ್ವ ಮಳೆ ವೈಫಲ್ಯ, ಸಾಲಬಾಧೆ ಮತ್ತಿತರ ಕಾರಣಕ್ಕೆ ಮೇ ಮತ್ತು ಜೂನ್​ನಲ್ಲಿ ರಾಜ್ಯದ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಹಾವೇರಿ ಜಿಲ್ಲೆಯ 18 ರೈತರು ಸೇರಿದ್ದು, ಈ ಪೈಕಿ ಒಬ್ಬರಿಗೆ ಮಾತ್ರ ಪರಿಹಾರ ವಿತರಿಸಲಾಗಿದೆ. ಬೆಳೆ ಸಾಲ ತೀರಿಸಲಾಗದೇ, ಸಾಲದ ಸುಳಿಯಲ್ಲಿ ಸಿಲುಕಿ ನೊಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕುಟುಂಬಕ್ಕೆ ಪರಿಹಾರ ಸಿಗಬೇಕೆಂದರೆ ಆತನ ಕುಟುಂಬದವರೇ ಅರ್ಜಿ ಸಲ್ಲಿಸಬೇಕು. ಮೂರು ತಿಂಗಳೊಳಗಾದರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ, ಆರು ತಿಂಗಳವರೆಗೆ ಡಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ಬಂದ ಅರ್ಜಿ ಸ್ವೀಕರಿಸುವುದಿಲ್ಲ ಎಂಬ ನಿಯಮವಿದೆ. ಸರ್ಕಾರದ ಈ ನಿಯಮ ಅನ್ನದಾತರ ಪಾಲಿಗೆ ಮುಳುವಾಗಿದೆ.
ಕುಟುಂಬದ ಆಧಾರ ಸ್ತಂಭವನ್ನೇ ಕಳೆದುಕೊಂಡು ದುಃಖದಲ್ಲಿರುವ ಅನೇಕ ಕುಟುಂಬಗಳು ಅರ್ಜಿ ಸಲ್ಲಿಸಲು ವಿಳಂಬವಾಗುತ್ತದೆ. ಕೆಲ ಪ್ರಕರಣದಲ್ಲಿ ಎಫ್​ಎಸ್​ಎಲ್ ವರದಿ, ಮರಣೋತ್ತರ ವರದಿ ಬಂದ ಬಳಿಕ ಅರ್ಜಿ ಸಲ್ಲಿಸಲಾಗುತ್ತದೆ. ಕೆಲ ಅನಕ್ಷರಸ್ಥ ಕುಟುಂಬದವರಿಗೆ ಅರ್ಜಿ ಸಲ್ಲಿಸುವ ಮಾಹಿತಿಯೇ ಗೊತ್ತಿರುವುದಿಲ್ಲ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ಕೂಡಲೇ ಪರಿಹಾರ ಸಿಗುವಂತೆ ಮಾಡಬೇಕಿದೆ. ಜನವರಿಯಿಂದ ಜೂನ್ 30ರವರೆಗೆ ಹಾವೇರಿ ಜಿಲ್ಲೆಯ 64 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ವಿವಿಧ ಠಾಣೆಗಳಲ್ಲಿ ಎಫ್​ಆರ್ ಕೂಡ ದಾಖಲಾಗಿದೆ. ಮೇ, ಜೂನ್ ಈ ಎರಡು ತಿಂಗಳಿನಲ್ಲಿಯೇ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಕೃಷಿ ಇಲಾಖೆಗೆ ಕೇವಲ ಆರು ಕುಟುಂಬಗಳು ಅರ್ಜಿ ಸಲ್ಲಿಸಿವೆ. ಅದರಲ್ಲಿ ಒಂದು ಕುಟುಂಬ ಮಾತ್ರ ಪರಿಹಾರ ಪಡೆದಿದ್ದು, ಉಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಸರ್ಕಾರ ಅಧಿನಿಯಮ ಹೊರಡಿಸಲಿ:ಸಾಲದ ಸುಳಿಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಸಂದರ್ಭದಲ್ಲಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಹಲವರಿಗೆ ಆಗದು. ಹಾಗಾಗಿ, ಕೃಷಿ ಇಲಾಖೆಯೇ ಸಂಬಂಧಪಟ್ಟ ಠಾಣೆಗಳಿಂದ ಆಗಾಗ ಎಫ್​ಐಆರ್ ಮಾಹಿತಿ ತರಿಸಿಕೊಂಡು ಅರ್ಜಿ ದಾಖಲಿಸಿಕೊಳ್ಳಬೇಕು. ಅವರ ಮನೆಗೆ ತೆರಳಿ ಪರಿಶೀಲಿಸಿ ಪರಿಹಾರ ಕೊಡುವಂತೆ ಸರ್ಕಾರ ಅಧಿನಿಯಮ ಹೊರಡಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸುತ್ತಾರೆ.
ರೈತ ಆತ್ಮಹತ್ಯೆ ಎಂದು ಎಫ್​ಐಆರ್ ದಾಖಲಾದ ಕೂಡಲೇ ಕುಟುಂಬದವರು ಅರ್ಜಿ ಸಲ್ಲಿಸುವುದಿಲ್ಲ. ಕೆಲವೊಮ್ಮೆ ವಿಳಂಬವಾಗುತ್ತದೆ. ಕೆಲವರು ಅರ್ಜಿಯನ್ನೇ ಸಲ್ಲಿಸುವುದಿಲ್ಲ. ಹಾಗಾಗಿ, ಎಫ್​ಐಆರ್​ಗೂ ಕೃಷಿ ಇಲಾಖೆಯ ಅಂಕಿ-ಸಂಖ್ಯೆಗೂ ವ್ಯತ್ಯಾಸವಾಗುತ್ತದೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಆರು ತಿಂಗಳವರೆಗೆ ಅವಕಾಶವಿರುತ್ತದೆ.
| ಮಂಜುನಾಥ ಅಂತರವಳ್ಳಿ ಜೆ.ಡಿ., ಕೃಷಿ ಇಲಾಖೆ
ಎಸಿ ಸಮಿತಿ ನಿರ್ಧಾರ:ರೈತ ಆತ್ಮಹತ್ಯೆ ಎಂದು ಎಫ್​ಐಆರ್​ನಲ್ಲಿ ದಾಖಲಾದ ಕೂಡಲೇ ಅದನ್ನು ರೈತ ಆತ್ಮಹತ್ಯೆ ಎಂದು ಘೊಷಿಸಲಾಗದು. ಅವರ ಕುಟುಂಬದವರು ಅರ್ಜಿ ಸಲ್ಲಿಸಿದ ಬಳಿಕ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ಸಮಿತಿ ಪರಿಶೀಲಿಸಿ, ನಿರ್ಧರಿಸಿದ ಬಳಿಕ ರೈತ ಆತ್ಮಹತ್ಯೆ ಎಂದು ಘೊಷಿಸಿ, ಪರಿಹಾರ ನೀಡಲಾಗುತ್ತದೆ.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
