|ಹರೀಶ್ ಬೇಲೂರುಬೆಂಗಳೂರು
ಭದ್ರತೆ ಇಲ್ಲದೆ ಬೇಕಾಬಿಟ್ಟಿ ಸಾಲ, ಮರುವಸೂಲಿ ನಿರ್ಲಕ್ಷ್ಯ, ಕಮಿಷನ್ ದಂಧೆಗಳಂತಹ ಸರಣಿ ಲೋಪಗಳಿಂದಾಗಿ ರಾಜ್ಯದ ನೂರಾರು ಕೋ-ಆಪರೇಟಿವ್ ಸೊಸೈಟಿಗಳು ದಿವಾಳಿಯಾಗಿರುವುದು ಒಂದೆಡೆಯಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ವ್ಯಾಪ್ತಿಗೆ ಒಳಪಡುವ 42 ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್​ಗಳೂ ನಷ್ಟದಲ್ಲಿರುವುದನ್ನು ರಾಜ್ಯ ಸರ್ಕಾರವೇ ಬಹಿರಂಗಪಡಿಸಿದೆ. ಸರ್ಕಾರ ಇಂತಹ ಬ್ಯಾಂಕ್​ಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಠೇವಣಿದಾರರಲ್ಲಿ ಆತಂಕ ಶುರುವಾಗಿದೆ.
ರಾಜ್ಯದಲ್ಲಿರುವ 284 ಪಟ್ಟಣ ಸಹಕಾರಿ ಬ್ಯಾಂಕ್​ಗಳ ಪೈಕಿ 242 ಬ್ಯಾಂಕ್​ಗಳು ಲಾಭದಲ್ಲಿದ್ದರೆ, 42 ಬ್ಯಾಂಕ್​ಗಳು ನಷ್ಟದಲ್ಲಿವೆ ಎಂದು ಸರ್ಕಾರ ತಿಳಿಸಿದೆ. ಆರ್​ಬಿಐ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಕಠಿಣ ನಿಯಮಗಳಿದ್ದರೂ ವರ್ಷದಿಂದ ವರ್ಷಕ್ಕೆ ಕೆಲ ಬ್ಯಾಂಕ್​ಗಳು ನಷ್ಟದತ್ತ ಮುಖ ಮಾಡುತ್ತಿವೆ.
ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ, ಹೊಸ ಮನೆ ಕಟ್ಟಲೆಂದೂ ಅಥವಾ ಚಿಕಿತ್ಸೆಗಾಗಿಯೋ ದುಡಿದಿಟ್ಟಿದ್ದ ಹಣವನ್ನೆಲ್ಲ ಅನೇಕರು ಠೇವಣಿ ಇಟ್ಟಿದ್ದಾರೆ. ನಿಶ್ಚಿತ ಠೇವಣಿ ಇಡಿಸಿಕೊಂಡಿರುವ ಸೊಸೈಟಿಗಳ ಪೈಕಿ ಕೆಲವು ವರ್ಷದಿಂದ ವರ್ಷಕ್ಕೆ ನಷ್ಟ, ನಿಷ್ಕಿ›ಯ ಅಥವಾ ದಿವಾಳಿಯಾಗಿವೆ.
ಈಗ ಬ್ಯಾಂಕ್​ಗಳೂ ನಷ್ಟದತ್ತ ಹೊರಟಿರುವುದರಿಂದ ನಮ್ಮ ಹಣ ಏನಾಗಲಿದೆಯೋ ಎಂಬ ಭಯ ಠೇವಣಿದಾರರನ್ನು ಕಾಡಿದೆ. ಹೀಗಾಗಿ, ಕೆಲವರು ಠೇವಣಿ ಹಿಂದಿರುಗಿಸುವಂತೆ ಸೊಸೈಟಿಗಳು ಹಾಗೂ ಬ್ಯಾಂಕ್​ಗಳಿಗೆ ದುಂಬಾಲು ಬೀಳುತ್ತಿದ್ದಾರೆ.
ವಿವರ ಕೇಳಿದ ಸಹಕಾರ ಇಲಾಖೆ:ಸೊಸೈಟಿಗಳು ಬೇಕಾಬಿಟ್ಟಿ ಸಾಲ ಕೊಟ್ಟು ನಿಯಮಾವಳಿ ಉಲ್ಲಂಘಿಸಿರುವುದನ್ನು ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈವರೆಗೆ ಎಷ್ಟು ಸಾಲ ಕೊಡಲಾಗಿದೆ ಮತ್ತು ಎಷ್ಟು ಸಾಲ ಮರುಪಾವತಿಯಾಗಿದೆ ಎಂಬುದರ ಬಗ್ಗೆ ವಿವರಗಳನ್ನು ನೀಡುವಂತೆ ರಾಜ್ಯದ ಎಲ್ಲ ಸೊಸೈಟಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಏನಾಗಬೇಕು?:ಆರ್​ಬಿಐ ವಾಪ್ತಿಗೆ ಬರುವ ಸಹಕಾರ ಬ್ಯಾಂಕ್​ಗಳಲ್ಲಿ ಸಮರ್ಪಕವಾಗಿ ಲೆಕ್ಕಪರಿಶೋಧನೆ ನಡೆಸಿದರೆ ಮುಂದೆ ಸಂಭವಿಸಬಹುದಾದ ನಷ್ಟ, ನಿಷ್ಕಿ›ಯ ಅಥವಾ ದಿವಾಳಿತನವನ್ನು ತಪ್ಪಿಸಬಹುದು. ಸಹಕಾರ ಬ್ಯಾಂಕಿನಲ್ಲಿ ನಡೆದಿರುವ ಲೋಪಗಳನ್ನು ಲೆಕ್ಕಪರಿಶೋಧನೆ ವರದಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಕೆಲವರು ನಕಲಿ ಚಿನ್ನ ಅಥವಾ ದಾಖಲೆ ಅಡಮಾನ ಇಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿರುವುದು ಇತ್ಯಾದಿ ಅಕ್ರಮಗಳನ್ನು ಮರೆಮಾಚಿ ನಾಮ್ ಕೇವಾಸ್ತೆ ಎಂಬಂತೆ ಆಡಿಟ್ ವರದಿ ತಯಾರಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
