ಬೆಂಗಳೂರು:ಹಣ ದ್ವಿಗುಣ ಮಾಡಿಕೊಡುವುದಾಗಿ ವ್ಯಕ್ತಿಗೆ ನಂಬಿಸಿ ಸ್ನೇಹಿತೆಯೇ 20 ಲಕ್ಷ ರೂ. ಪಡೆದು ವಂಚಿಸಿದ್ದಾಳೆ. ಕೆಂಗೇರಿಯ ಮೇಗಲ ಬೀದಿ ನಿವಾಸಿ ಮಂಜುನಾಥ್ ವಂಚನೆಗೆ ಒಳಗಾದವರು. ಕೃತ್ಯ ಎಸಗಿ ಪರಾರಿಯಾಗಿರುವ ರಮ್ಯಾ ಹಾಗೂ ಆಕೆಯ ಸಹಚರರ ಬಂಧನಕ್ಕೆ ಕೆಂಗೇರಿ ಠಾಣೆ ಪೊಲೀಸರು ಬಲೆಬೀಸಿದ್ದಾರೆ.
3 ವರ್ಷದ ಹಿಂದೆ ನನಗೆ ಸ್ನೇಹಿತ ಪ್ರಸನ್ನ ಎಂಬಾತನ ಮೂಲಕ ರಮ್ಯಾಳ ಪರಿಚಯವಾಯಿತು. ಇತ್ತೀಚೆಗೆ ಕರೆ ಮಾಡಿದ್ದ ಆಕೆ, ನಿಮ್ಮ ಬಳಿ ಇರುವ ಹಣವನ್ನು ಕೊಟ್ಟರೆ ನಾವು ಅದಕ್ಕೆ ಎರಡು ಪಟ್ಟು ಮರಳಿಸುತ್ತೇವೆ ಎಂದು ತಿಳಿಸಿದಳು. ಅದನ್ನು ನಂಬಿ ಜೂ.27 ರಂದು ಬೆಳಗ್ಗೆ 8 ಗಂಟೆಗೆ ರಮ್ಯಾಳ ಜತೆ 20 ಲಕ್ಷ ರೂ. ಸಮೇತ ಉತ್ತರಹಳ್ಳಿ ರಸ್ತೆಗೆ ಹೋದೆ. ಅಲ್ಲಾಗಲೇ ಮತ್ತೊಂದು ಕಾರಿನಲ್ಲಿ ಅಪರಿಚಿತರು ಕುಳಿತಿದ್ದರು. ತಕ್ಷಣವೇ ನನ್ನ ಕಾರಿನಿಂದ ಹಣ ತೆಗೆದುಕೊಂಡ ಇಳಿದ ರಮ್ಯಾ, ನಿಮಗೆ ಕರೆ ಮಾಡುವುದಾಗಿ ಹೇಳಿ ಆ ಕಾರಿನಲ್ಲಿ ಹೊರಟಳು. ಆದರೆ ಆಕೆಯಿಂದ ಯಾವುದೇ ಕರೆ ಬರಲಿಲ್ಲ. ನಾನು ಕರೆ ಮಾಡಿದಾಗ ಆಕೆಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು ಎಂದು ಮಂಜುನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:4ರಿಂದ ಕರ್ನಾಟಕ-ಕೇರಳ ಗಡಿ ಬಂದ್: ಕೇರಳ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಕೆಂಗೇರಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕರೊನಾ ಸೋಂಕು ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಸೀಲ್​ಡೌನ್ ಆಗಿ ಸಿಬ್ಬಂದಿ ಕ್ವಾರಂಟೈನ್​ಗೊಳಗಾಗಿದ್ದರು. ಹೀಗಾಗಿ ತನಿಖೆಗೆ ಆಡಚರಣೆಯಾಗಿತ್ತು. ಠಾಣೆ ಮತ್ತೆ ಕಾರ್ಯಾರಂಭಿಸಿದ ಕೂಡಲೇ ವಂಚಕರನ್ನು ಪತ್ತೆಹಚ್ಚಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಕೋವಿಡ್ ಸಂಕಷ್ಟ – ವಿವಿಧ ಇಲಾಖೆ ಅಧಿಕಾರಿಗಳಿಗೂ ಹೊಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 9 =
Remember me
