ಬೆಳಗಾವಿ:ಪ್ರತನಿತ್ಯ ನಾವು ಪ್ರಪಂಚದಲ್ಲಿ ವಿಸ್ಮಯಕಾರಿ ಘಟನೆಗಳು ನೋಡುತ್ತಿರುತ್ತೇವೆ ಹಾಗೂ ಕೇಳುತ್ತಿರುತ್ತೇವೆ. ಏಕಕಾಲದಲ್ಲಿ ಹಸು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ಮೂರು ಕಣ್ಣುಗಳನ್ನು ಮೇಕೆ ಹೊಂದಿರುವುದು ಸೇರಿದಂತೆ ಪ್ರತಿನಿತ್ಯ ನಾವು ಒಂದಿಲ್ಲೊಂದು ಸುದ್ದಿ ಕೇಳುತ್ತಿರುತ್ತೇವೆ. ಆದರೆ, 45 ದಿನಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ಹಾಲು ಕೊಡುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸಂಬರಗಿ ಸಮೀಪದ ಕಲ್ಲೊತ್ತಿ ಗ್ರಾಮದ ಅಣ್ಣಪ್ಪ ಬಾಬು ನಾಯಿಕವಾಡಿ ಎಂಬುವವರಿಗೆ ಸೇರಿದ 45 ದಿನದ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿ ಹಾಕದೇ ಹಾಲು ಕೊಡುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.
ಸಾಮಾನ್ಯವಾಗಿ ಮೇಕೆಗಳು ಎರಡು ಮೊಲೆಗಳನ್ನು ಹೊಂದಿರುತ್ತವೆ. ಆದರೆ, ಈ ಮೇಕೆ 4 ಮೊಲೆಗಳನ್ನು ಹೊಂದಿರುವುದು ಮೊತ್ತೊಂದು ವಿಶೇಷವಾಗಿದೆ. ಮೇಕೆ ಮರಿಯು ಹಾಲು ಕೊಡುತ್ತಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಊರಿನವರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
