ಒಟ್ಟೂ ಬಜೆಟ್​ನಲ್ಲಿ ಈ ಬಾರಿ ಮಹಿಳೆಯರ ಪಾಲು ಶೇಕಡ 2. ವಿವಿಧ ಯೋಜನೆಗಳ ಅಡಿ ಒಟ್ಟು 4,650 ಕೋಟಿ ರೂ. ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಮೀನುಗಾರ ಮಹಿಳೆಯರು ಹಾಗೂ ಗಾರ್ಮೆಂಟ್ಸ್ ಉದ್ಯೋಗಿಗಳ ಕಡೆಗೂ ಚಿತ್ತ ಹರಿಸಲಾಗಿದೆ.
ಸುರಕ್ಷಾ ಆಪ್:ನಿರ್ಭಯಾ ಹಾಗೂ ದಿಶಾ ಅತ್ಯಾಚಾರ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಿರುವ ಬೆನ್ನಲ್ಲೇ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗಿ ‘ಸುರಕ್ಷಾ ಆಪ್’ ಜಾರಿಗೆ ತರಲಾಗಿತ್ತು. ಮಹಿಳೆಯರು ತಮಗೆ ತೊಂದರೆ ಎದುರಾದಾಗ ಅಥವಾ ಯಾವುದಾದರೂ ಅಪಾಯದ ಮುನ್ಸೂಚನೆ ಸಿಕ್ಕಾಗ ಈ ಆಪ್​ನಲ್ಲಿರುವ ಬಟನ್ ಒತ್ತುವ ಮೂಲಕ ಕೂಡಲೇ ಪೊಲೀಸರ ನೆರವು ಪಡೆಯುವ ತಂತ್ರಜ್ಞಾನವಿದು. ಈ ಆಪ್ ಅನ್ನು ಬೆಂಗಳೂರು ಒಂದರಲ್ಲಿಯೇ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ರಾಜ್ಯಾದ್ಯಂತ ಈ ಆಪ್ ವಿಸ್ತರಣೆ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನ:ಮೀನು ಮಾರಾಟ ಪ್ರಕ್ರಿಯೆಯಲ್ಲಿ ಮಹಿಳೆಯರ ಕೊಡುಗೆ ಪ್ರಮುಖವಾಗಿರುವುದನ್ನು ಮನಗಂಡಿರುವ ಸರ್ಕಾರ, ಬಜೆಟ್​ನಲ್ಲಿ ಈ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದೆ. ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1000 ಮೀನುಗಾರ ಮಹಿಳೆಯರಿಗೆ ‘ಮಹಿಳಾ ಮೀನುಗಾರ ಸಬಲೀಕರಣ ಯೋಜನೆ’ ಮೂಲಕ ದ್ವಿಚಕ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಐದು ಕೋಟಿ ರೂಪಾಯಿ ಮೀಸಲಿಡ ಲಾಗಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಸದ್ಯ ಯಾವುದೇ ರೀತಿಯಲ್ಲಿ ಮಾಹಿತಿ ನೀಡಲಾಗಿಲ್ಲ.
ಸ್ತ್ರೀಶಕ್ತಿ ಸಂಘಕ್ಕೆ ಸಹಾಯ
ರಾಜ್ಯದ ಅನೇಕ ಹಳ್ಳಿಗಳಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿವೆ. ಆದರೆ ಮಾರುಕಟ್ಟೆಯ ಸೂಕ್ತ ವ್ಯವಸ್ಥೆ ಇಲ್ಲದೆ ಸಂಘಗಳು ಸೊರಗುತ್ತಿವೆ. ಈ ಅಂಶವನ್ನು ಮನಗಂಡಿರುವ ಸರ್ಕಾರ, ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿ ಮಾಡುವ ಭರವಸೆಯನ್ನು ನೀಡಿದೆ.
ಶ್ರವಣದೋಷ ಮುಕ್ತ ರಾಜ್ಯ:ಕರ್ನಾಟಕವನ್ನು ಶ್ರವಣದೋಷ ಮುಕ್ತ ರಾಜ್ಯವನ್ನಾಗಿಸಲು ನಿರ್ಧರಿಸಿರುವ ಸರ್ಕಾರ, ನವಜಾತ ಶಿಶುಗಳ ಪೋಷಣೆ ಸುಧಾರಿಸಲು ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಘಟಕಗಳ ಸ್ಥಾಪನೆ ಮಾಡುವುದಾಗಿ ಹೇಳಿದೆ. ಜತೆಗೆ, ಎಲ್ಲ ನವಜಾತ ಶಿಶುಗಳಿಗೆ ಶ್ರವಣದೋಷ ಪರಿಶೀಲನೆಗೆ ಕ್ರಮ ತೆಗೆದುಕೊಳ್ಳಲಾಗುವುದು.
ವನಿತೆಯರಿಗೆ ಹಲವು ಕೊಡುಗೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಸುಧಾರಣಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಮಾಜದ ಶೋಷಿತ ವರ್ಗದವರಿಗೆ ಆಶ್ರಯ ನೀಡುವ ಈ ಸಂಸ್ಥೆಗಳನ್ನು ಒಂದು ಮಾಸ್ಟರ್ ಪ್ಲ್ಯಾನ್​ ತಯಾರಿಸಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ರೂ. 5 ಕೋಟಿ ಅನುದಾನ ಮೀಸಲು.
ಕರ್ನಾಟಕ ರಾಜ್ಯ ಟ್ರಾನ್ಸ್​ಜೆಂಡರ್ ನೀತಿಯನ್ನು 2017ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯಾದ್ಯಂತ ಟ್ರಾನ್ಸ್​ಜೆಂಡರ್​ಗಳ ಬೇಸ್ ಲೇನ್ ಸಮೀಕ್ಷೆಯನ್ನು 2020- 21ರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ರೂ.70 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿದೆ.
ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ -ಠಿ; 20 ಲಕ್ಷದವರೆಗೆ ಬಡ್ಡಿರಹಿತ ಕಿರು ಸಾಲ ಸೌಲಭ್ಯ. ಇದಕ್ಕಾಗಿ ರೂ.20 ಕೋಟಿ ಅನುದಾನ.
ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳನ್ನು ರಚಿಸಿ ಅವರಿಗೆ ಬೇಕಾದ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಸದರಿ ಕೇಂದ್ರಗಳನ್ನು ಆಧುನೀಕರಣ ಗೊಳಿಸಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ರೂ. 15 ಲಕ್ಷಗಳಿಂದ ರೂ. 20 ಲಕ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಕಿರುಸಾಲ ಯೋಜನೆಯಡಿ ನೀಡಲು ಪ್ರಸ್ತಾಪ. ಇದಕ್ಕಾಗಿ ರೂ. 20 ಕೋಟಿ ಅನುದಾನ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
