ಬೆಂಗಳೂರು:ಮಕ್ಕಳ ತಪ್ಪಿಗೆ ಶಿಕ್ಷಕರು ಹೊಡೆದ ಪ್ರಕರಣಗಳು ಹಲವಾರಿವೆ. ಆದರೆ ಇಲ್ಲೊಬ್ಬರು ಶಿಕ್ಷಕರ ಹೊಡೆತಕ್ಕೆ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ರಾಜಧಾನಿ ಬೆಂಗಳೂರಿನಲ್ಲೇ ಇಂಥದ್ದೊಂದು ಪ್ರಕರಣ ಸಂಭವಿಸಿದೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ನಾಲ್ಕನೆಯ ತರಗಿಯಲ್ಲಿ ಅಭ್ಯಾಸ ಮಾಡುತ್ತಿದ್ದ ನಿಶಿತಾ ಸಾವಿಗೀಡಾದ ವಿದ್ಯಾರ್ಥಿನಿ. ಇಂದು ಮಧ್ಯಾಹ್ನ ಈ ಪ್ರಕರಣ ನಡೆದಿದೆ. ಶಿಕ್ಷಕರ ಹೊಡೆತಕ್ಕೆ ತರಗತಿಯಲ್ಲೇ ಎಚ್ಚರತಪ್ಪಿ ಬಿದ್ದ ವಿದ್ಯಾರ್ಥಿನಿ ಬಳಿಕ ಸಾವಿಗೀಡಾಗಿದ್ದಳು.
ಮೊದಲಿಗೆ ವಿದ್ಯಾರ್ಥಿನಿ ನಿಶಿತಾಗೆ ಶಿಕ್ಷಕರು ಒಂದು ಏಟು ಹೊಡೆದಿದ್ದಾರೆ. ನಂತರ ಮತ್ತೆ ಹೊಡೆಯುವ‌ ವೇಳೆ ಈಕೆ ತಪ್ಪಿಸಿಕೊಳ್ಳಲೆತ್ನಿಸಿದ್ದು, ನಂತರ ತರಗತಿಯಲ್ಲೇ ಮೂರ್ಛೆ ಹೋಗಿದ್ದಳು. ಬಳಿಕ ಅವಳನ್ನು ತಕ್ಷಣ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವಿಗೀಡಾದಳು. ಗಂಗಮ್ಮನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಂದ್ರು ಮತ್ತೆ ಬರಲ್ಲ, ಆದ್ರೆ ಸತ್ಯಾಂಶ ಹೊರಬರುತ್ತೆ: ಶಾಸಕ ರೇಣುಕಾಚಾರ್ಯ
ಹುಣಸೆಹಣ್ಣಿಗೆ ಆಸೆಪಟ್ಟು ಪ್ರಾಣ ಕಳೆದುಕೊಂಡ ಮಹಿಳೆ; ಹಣ್ಣು ಕೈಗೆ ಸಿಕ್ತು ಎನ್ನುವಷ್ಟರಲ್ಲೇ ಜೀವವೇ ಹೋಯ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 13 =
Remember me
