ಬೆಂಗಳೂರು:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸುವ 11,71,558 ಮತದಾರರು ಸೇರಿ ಒಟ್ಟು 5,31,33,054 ಮತದಾರರಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್​ವಿುೕನಾ ಹೇಳಿದರು.
2,66,82,156 ಪುರುಷ, 2,63,9,483 ಮಹಿಳೆ, 4,927 ಇತರ ಸಾಮಾನ್ಯ ಮತದಾರರು ಹಾಗೂ 47,488 ಸೇವಾ ಮತದಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುರುಷ ಸೇವಾ ಮತದಾರರು 45,897, ಮಹಿಳಾ ಸೇವಾ ಮತದಾರರು 1,591 ಮಂದಿ ಇದ್ದಾರೆ. ಯುವ ಮತದಾರರು 11,71,558, ವಿಶೇಷ ಚೇತನ ಮತದಾರರು 5,71,281 ಮಂದಿ ಇದ್ದಾರೆ ಎಂದರು.
80 ವರ್ಷಕ್ಕೂ ಅಧಿಕ ವಯೋಮಾನದ 12,15,920 ಮತದಾರರು ಇದ್ದಾರೆ. ರಾಜ್ಯದಲ್ಲಿ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ವಿತರಣೆ ಕಾರ್ಯವು ಶೇ.100 ಆಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಒಟ್ಟು 58,545 ಮತದಾನ ಕೇಂದ್ರಗಳಿದ್ದು, 263 ಹೆಚ್ಚುವರಿ ಕೇಂದ್ರಗಳು ಸ್ಥಾಪಿಸಲಾಗಿದೆ. ಮನೆಯಿಂದಲೆ ಮತದಾನ ಮಾಡಲು 224 ವಿಧಾನಸಭಾ ಕ್ಷೇತ್ರಗಳಲ್ಲಿ 80 ವರ್ಷಕ್ಕೂ ಅಧಿಕ ವಯೋಮಾನದ 80,250, ಅಂಗವಿಕಲ 19,279, ಅಗತ್ಯ ಸೇವೆಯಲ್ಲಿರುವ 13,771, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ 1,78,523 ಮಂದಿ ತಮ್ಮ ಹಕ್ಕು ಚಲಾಯಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
3048 ಅನಿವಾಸಿ ಮತದಾರರು:2,172 ಪುರುಷ, 875 ಮಹಿಳೆಯರು ಸೇರಿ ಒಟ್ಟು 3,048 ಅನಿವಾಸಿ ಭಾರತೀಯ ಮತದಾರರಿದ್ದಾರೆ ಎಂದರು. ಈ ಚುನಾವಣೆಗೆ 1,15,709 ಬ್ಯಾಲೆಟ್ ಯುನಿಟ್, 82,543 ಕಂಟ್ರೋಲ್ ಯುನಿಟ್ ಹಾಗೂ 89,379 ವಿವಿಪ್ಯಾಟ್​ಗಳಿವೆ. ಒಟ್ಟು 3,59,253 ಮತದಾನ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದರು.
ಅತೀ ಕಡಿಮೆ ಅಭ್ಯರ್ಥಿಗಳು: ಒಟ್ಟು 224:ಕ್ಷೇತ್ರಗಳಲ್ಲಿ 2429 ಪುರುಷ, 185 ಮಹಿಳಾ ಹಾಗೂ 1 ಇತರ ಸೇರಿ ಒಟ್ಟು 2615 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಳ್ಳಾರಿ ನಗರ 24 ಅಭ್ಯರ್ಥಿ, ಹೊಸಕೋಟೆ 23, ಚಿತ್ರದುರ್ಗ 21, ಯಲಹಂಕ 20 ಅಭ್ಯರ್ಥಿಗಳಿದ್ದರೆ, ಅತೀ ಕಡಿಮೆ ಅಭ್ಯರ್ಥಿಗಳು ಅಂದರೆ 5 ಅಭ್ಯರ್ಥಿಗಳು ಯಮಕನ ಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರಗಳಲ್ಲಿದ್ದಾರೆ.
ಸೇವಾ ಮತದಾರರು:ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಸೇವಾ ಮತದಾರರಿದ್ದಾರೆ. ಇದು ಅತೀ ಹೆಚ್ಚು ಸೇವಾ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. ಜಯನಗರ ಕ್ಷೇತ್ರ 8 ಸೇವಾ ಮತದಾರರನ್ನು ಹೊಂದಿದ್ದು, ಅತೀ ಕಡಿಮೆ ಸೇವಾ ಮತದಾರರಿರುವ ಕ್ಷೇತ್ರವಾಗಿದೆ.
ಮನೆಯಲ್ಲೇ ಮತದಾನ, ಶಿರಾ ನಂ.1ಸ್ಥಾನ!:ಮನೆಯಲ್ಲೇ ಮತದಾನ ಮಾಡಲು ಅತಿ ಹೆಚ್ಚು ಮಂದಿ ನೋಂದಾಯಿಸಿಕೊಂಡಿರುವ ಕ್ಷೇತ್ರ ಶಿರಾ. ಇಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಮನೆಯಲ್ಲಿ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ.
673 ಎಫ್​ಐಆರ್ ದಾಖಲು:ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಈಗಾಗಲೆ 673 ಎಫ್​ಐಆರ್​ಗಳನ್ನು ದಾಖಲು ಮಾಡಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 2,036 ಎಫ್​ಐಆರ್​ಗಳನ್ನು ದಾಖಲು ಮಾಡಿದ್ದಾರೆ. ಈವರೆಗೆ ಸುಮಾರು 265 ಕೋಟಿ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮನೋಜ್ ಕುಮಾರ್ ಮಿನಾ ಹೇಳಿದರು.
ಮನೆಯಿಂದಲೇ ಮತ ಚಲಾಯಿಸಲು ಅವಕಾಶ:ರಾಜ್ಯದಲ್ಲಿ 80 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಮತ್ತು ಅಂಗವಿಕಲ ಮತದಾರರ ಪೈಕಿ ಅಪೇಕ್ಷಿತರಿಗೆ ಏ.29 ರಿಂದ ಮೇ 6ರವರೆಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. 80 ವರ್ಷ ಮೇಲ್ಪಟ್ಟ್ಟರು 12,15,920 ಮತದಾರರಿದ್ದು, ಈ ಪೈಕಿ 80250 ಮಂದಿ ಮನೆಯಿಂದಲೇ ಮತ ಚಲಾಯಿಸಲು ಅಪೇಕ್ಷಿಸಿದ್ದಾರೆ. ಅದೇ ರೀತಿ 19,279 ಅಂಗವಿಕಲರು 13771 ಮಂದಿ ಅಗತ್ಯ ಸೇವೆಯಲ್ಲಿರುವವರು ಮನೆಯಿಂದ ಮತದಾನ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿ ಮತದಾರರ ಮನೆಗೆ ಎರಡು ಬಾರಿ ಚುನಾವಣಾ ಸಿಬ್ಬಂದಿ ಭೇಟಿ ನೀಡಲಿದ್ದಾರೆ. ಎರಡೂ ಬಾರಿ ಮನೆಯಲ್ಲಿ ಇರದೇ ಇದ್ದರೆ ಅಂತಹವರಿಗೆ ಪುನಃ ಮತದಾನಕ್ಕೆ ಅವಕಾಶವಿಲ್ಲ. ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡವರಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶವಿಲ್ಲ ಎಂದು ಸಿಇಒ ಮನೋಜ್​ಕುಮಾರ್ ಮೀನಾ ಸ್ಪಷ್ಟಪಡಿಸಿದರು.
ಪೂರ್ವ ಯೂರೋಪ್​ನಲ್ಲಿ ರಾಜ್ಯದ ಮತದಾರರ ಮಾಹಿತಿ!:ಚಿಲುಮೆ ಟ್ರಸ್ಟ್ ಸಂಗ್ರಹಿಸಿದ್ದ ಮತದಾರರ ಮಾಹಿತಿಯನ್ನು ವಿದೇಶದ ಸರ್ವರ್​ನಲ್ಲಿ ಇರಿಸಿದ್ದ ಆರೋ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೆ ಈ ಪ್ರಕರಣದಲ್ಲಿ ತನಿಖೆ ಕೈಗೆತ್ತಿಕೊಳ್ಳಲಾಗಿದ್ದು, ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೂಡ ಆಗಿದೆ. ಯಾವ ದೇಶದ ಸರ್ವರ್​ನಲ್ಲಿ ಎಷ್ಟು ಡೇಟಾ ಇದೆ ಗೊತ್ತಾಗಿಲ್ಲ. ಪೂರ್ವ ಯೂರೋಪ್ ದೇಶದ ಸರ್ವರ್​ನಲ್ಲಿ ಇರಬಹುದೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.
ಸೋಮಣ್ಣ ಅವರದ್ದು ಎನ್ನಲಾದ ಆಡಿಯೋ ತನಿಖೆ:ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಅದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕಣದಿಂದ ಹಿಂದೆ ಸರಿಯಲು ಆಮಿಷ ಒಡ್ಡಿರುವ ಆರೋಪ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್​ಕುಮಾರ್ ಮೀನಾ ಹೇಳಿದರು. ಸೋಮಣ್ಣ ಜೆಡಿಎಸ್ ಅಭ್ಯರ್ಥಿಗೆ ಆಮಿಷ ಒಡ್ಡಿರುವ ಪ್ರಕರಣ ತಮ್ಮ ಗಮನಕ್ಕೆ ಬಂದಿದೆ. ದೂರವಾಣಿ ಕರೆಯ ಆಡಿಯೋ ತುಣುಕಿನ ಸತ್ಯಾಸತ್ಯತೆ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!

ಶೆಟ್ಟರ್ ಅವರನ್ನು ಮನೆಗೆ ಕಳಿಸುವುದೇ ನನ್ನ ಉದ್ದೇಶ; ಸೋತ ಅವರ ಸಮ್ಮುಖದಲ್ಲೇ ವಿಜಯೋತ್ಸವ ಮಾಡೋಣ: ಬಿಎಸ್​ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
