|ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕೇಂದ್ರ ಸರ್ಕಾರ ಎಲ್​ಐಸಿಯಲ್ಲಿ ಬಂಡವಾಳ ಹಿಂತೆಗೆದುಕೊಂಡು ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿರುವ ರೀತಿಯಲ್ಲೇ ರಾಜ್ಯ ಸರ್ಕಾರ ಕೂಡ ತನ್ನ ಐದು ನಿಗಮಗಳಲ್ಲಿ ಆಸ್ತಿ ನಗದೀಕರಣದ ಮೂಲಕ ಖಾಸಗಿ ವಲಯಕ್ಕೆ ಅವಕಾಶ ತೆರೆದಿಡಲು ಹಾಗೂ ಷೇರು ಮಾರುಕಟ್ಟೆ ಪ್ರವೇಶಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್​ನಲ್ಲಿ 2 ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳ ವಾಪಸ್​ ಪಡೆಯುವ ಘೋಷಣೆ ಮಾಡಿದ್ದರು. ಇದೀಗ ಐದು ನಿಗಮ, ಮಂಡಳಿಗಳನ್ನು ಗುರುತಿಸಿದ್ದು ಅದರಲ್ಲಿ ಮೊದಲ ಹಂತದಲ್ಲಿ ಎರಡನ್ನು ಆಯ್ಕೆ ಮಾಡಲು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಉದ್ದೇಶವೇನು?:ಸರ್ಕಾರಕ್ಕೆ ಅಗತ್ಯವಾದ ಆದಾಯ ಸಂಗ್ರಹಣೆ ಹಾಗೂ ನಿಗಮಗಳಿಂದ ಸರ್ಕಾರದ ಮೇಲಾಗುವ ಆರ್ಥಿಕ ಹೊರೆ ತಪ್ಪಿಸಿಕೊಳ್ಳುವುದು ಈ ನಿರ್ಧಾರದ ಪ್ರಮುಖ ಉದ್ದೇಶ. ರಾಜ್ಯದಲ್ಲಿ ಸೇವಾ ಕ್ಷೇತ್ರದ ನಿಗಮ ಮತ್ತು ಮಂಡಳಿ ಹೊರತುಪಡಿಸಿ 79 ನಿಗಮ ಮತ್ತು ಮಂಡಳಿಗಳಿವೆ. ಅವುಗಳಲ್ಲಿ 60 ಲಾಭದಲ್ಲಿವೆ. ಯಾವ ನಿಗಮ ಮತ್ತು ಮಂಡಳಿಗಳು ಲಾಭದಲ್ಲಿವೆಯೋ ಅವುಗಳಲ್ಲಿ ಖಾಸಗಿ ಬಂಡವಾಳಕ್ಕೆ ಅವಕಾಶ ಕಲ್ಪಿಸಲು, ಆಸ್ತಿ ನಗದೀಕರಣಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರ 2018-19ರ ಬಜೆಟ್​ನಲ್ಲಿ 3 ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತಕ್ಕೆ ನಿರ್ಧಾರ ಮಾಡಿತ್ತು. ಆದರೆ ಕರೊನಾ ಹಾಗೂ ಇತರ ಕಾರಣಗಳಿಂದ ಈ ಪ್ರಕ್ರಿಯೆ ನಡೆಯಲಿಲ್ಲ. ಇದೀಗ ಆ ಸಂಖ್ಯೆ ಎರಡಕ್ಕೆ ಇಳಿಸಲಾಗಿದೆ.
ಅಧ್ಯಯನ:ಎಲ್ಲ ನಿಗಮ ಮತ್ತು ಮಂಡಳಿಗಳಲ್ಲಿ ಒಮ್ಮೆಗೆ ಬಂಡವಾಳ ವಾಪಸ್​ ಸಾಧ್ಯವಿಲ್ಲ. ಆದ್ದರಿಂದಲೇ ಅಧ್ಯಯನ ಮಾಡಲು ದರಾಷ ಪೆ ಲಿಮಿಟೆಡ್​ ಎಂಬ ಸಂಸ್ಥೆಗೆ ವಹಿಸಲಾಗಿತ್ತು. ಆ ಸಂಸ್ಥೆ ಲಾಭದಲ್ಲಿರುವ 15 ಸಂಸ್ಥೆಗಳ ಅಧ್ಯಯನ ಮಾಡಿ ಮೊದಲ ಹಂತದಲ್ಲಿ 5 ಸಂಸ್ಥೆಗಳಲ್ಲಿ ಬಂಡವಾಳ ಹಿಂತೆಗೆತಕ್ಕೆ ಶಿಫಾರಸು ಮಾಡಿದೆ.
ಸಮಿತಿ ರಚನೆ:ದರಾಷ ಸಂಸ್ಥೆಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ಶಿಾರಸು ಮಾಡಲು ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಅದರಲ್ಲಿ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಯೋಜನಾ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ತೋಟಗಾರಿಕೆ ಮತ್ತು ಗಣಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ. ಸಾರ್ವಜನಿಕ ಉದ್ದಿಮೆ ಗಳ ಇಲಾಖೆ ಕಾರ್ಯ ದರ್ಶಿ ಸದಸ್ಯ ಕಾರ್ಯದರ್ಶಿ-ಯಾಗಿ-ದ್ದಾರೆ. ದರಾಷದ ವರದಿ ಪರಿಶೀಲಿಸಿ 5ರಲ್ಲಿ 2 ಉದ್ದಿಮೆ ಗುರುತಿಸಬೇಕು. ಉದ್ದಿಮೆಗಳ ಆಡಳಿತ ಮಂಡಳಿ ಒಪ್ಪಿಗೆ ಪಡೆದು, ನಂತರ ಸಂಪುಟದ ಒಪ್ಪಿಗೆ ಪಡೆಯಬೇಕು.
ಷೇರು ಮಾರುಕಟ್ಟೆಗೆ:ಬಂಡವಾಳ ಹಿಂತೆಗೆತ ಆಗುವ ಉದ್ದಿಮೆಗಳು ಷೇರು ಮಾರುಕಟ್ಟೆ ಪ್ರವೇಶಿಸಲಿವೆ. ಎನ್​ಎಸ್​ಇ ಮತ್ತು ಬಿಎಸ್​ಇಗಳಲ್ಲಿ ಕಂಪನಿಗಳ ಪಟ್ಟಿಗೆ ಸೇರಿಸಲಾಗುತ್ತದೆ. ಅದರ ಮೂಲಕ ಷೇರು ಮಾರಾಟ ವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಗಳ ಪರಿಸ್ಥಿತಿ?ಕೆಎಸ್​ಡಿಎಲ್​ಗೆ 100 ವರ್ಷದ ಇತಿಹಾಸ ಇದೆ. ವಾರ್ಷಿಕ 12 ಲಕ್ಷ ಮೆಟ್ರಿಕ್​ ಟನ್​ತನಕ ಸಾಬೂನು ಉತ್ಪಾದನೆ ಮಾಡುತ್ತದೆ. ಮೈಸೂರು, ಬೆಂಗಳೂರು, ಶಿವಮೊಗ್ಗದಲ್ಲಿ ಆಸ್ತಿ ಇದೆ. ಕಳೆದ ವರ್ಷ 900 ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸಿ 100 ಕೋಟಿ ರೂ.ಗಳಿಗೂ ಅಧಿಕ ಲಾಭ ಪಡೆದಿದೆ. ಹಟ್ಟಿ ಚಿನ್ನದ ಗಣಿ 1947ರಲ್ಲಿ ಆರಂಭವಾಗಿದೆ. ರಾಯಚೂರು ಜಿಲ್ಲೆಯ ಹಟ್ಟಿ, ಮಾನ್ವಿ ತಾಲೂಕಿನ ಹೀರಾಬುದ್ದಿನಿ, ದೇವದುರ್ಗ ತಾಲೂಕಿನ ಊಟಿ, ಚಿತ್ರದುರ್ಗದಲ್ಲಿ ಗಣಿಗಾರಿಕೆ ನಡೆಸಿದೆ. ವರ್ಷಕ್ಕೆ 1700 ಕೆಜಿ ಚಿನ್ನದ ಉತ್ಪಾದನೆ ಮಾಡುತ್ತದೆ. ಇದನ್ನು 5 ಸಾವಿರ ಕೆಜಿಗೆ ಹೆಚ್ಚಿಸುವ ಉದ್ದೇಶ ಇದೆ. ವಾರ್ಷಿಕ ಸುಮಾರು 200 ಕೋಟಿ ರೂ.ಗಳ ತನಕ ಲಾಭ ಗಳಿಸುತ್ತದೆ. ಕೆಆರ್​ಐಡಿಎಲ್​ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ಸೃಜನೆಯ ಜತೆಗೆ ಉದ್ಯೋಗದ ಅವಕಾಶಗಳನ್ನು ನೀಡುತ್ತದೆ. ಬೆಂಗಳೂರಿನಲ್ಲಿ ಸ್ವಂತ ಆಸ್ತಿ ಹೊಂದಿದೆ. ಕಳೆದ ವರ್ಷ 3,500 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸಿತ್ತು. 250 ಕೋಟಿ ರೂ.ಗಳಿಗೂ ಅಧಿಕ ಲಾಭದಲ್ಲಿರುವ ಸಂಸ್ಥೆಯಾಗಿದೆ. ಕೆಎಸ್​ಐಸಿ ಮೈಸೂರು ಸಿಲ್ಕ್​ ಸೀರೆಗಳ ಉತ್ಪಾದನೆಯಲ್ಲಿ ವಿಶ್ವ ಪ್ರಸಿದ್ಧಿ. 1912ರಲ್ಲಿ ಆರಂಭವಾದ ಸಂಸ್ಥೆ. ಚನ್ನಪಟ್ಟಣ, ಮೈಸೂರು, ಟೀ. ನರಸೀಪುರದಲ್ಲಿ ನೂಲು ಟಕಗಳಿವೆ. ವಾರ್ಷಿಕ ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುತ್ತದೆ. ಸುಮಾರು 30 ಕೋಟಿ ರೂ.ಗಳಿಗೂ ಹೆಚ್ಚಿನ ಲಾಭ ಗಳಿಸುತ್ತದೆ. ಎಂಎಸ್​ಐಎಲ್​ ಚಿಟ್​, ಮದ್ಯ ಮಾರಾಟ, ವಿದ್ಯಾ ನೋಟ್​ಬುಕ್​ಗಳಿಗೆ ಹೆಸರುವಾಸಿಯಾಗಿದೆ. ವಾರ್ಷಿಕ 2000 ಕೋಟಿ ರೂ. ವಹಿವಾಟು ನಡೆಸುವ ಸಂಸ್ಥೆಯಾಗಿದೆ. ಇದರ ಲಾಭ 100 ಕೋಟಿ ರೂ.ಗಳಿಗೂ ಹೆಚ್ಚಿದೆ. ಮುಂಬೈನಲ್ಲಿಯೂ ಆಸ್ತಿ ಇದೆ.
ಐದು ನಿಗಮಗಳುಕೆಎಸ್​ಡಿಎಲ್​(ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ), ಕೆಎಸ್​ಐಡಿ (ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ) ಕೆಆರ್​ಐಡಿಎಲ್​ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ), (ಎಂಎಸ್​ಐಎಲ್​) ಮೈಸೂರು ಸೇಲ್ಸ್​ ಇಂಟರ್​ನ್ಯಾಷನಲ್​ ಲಿಮಿಟೆಡ್​, ಹಟ್ಟಿ ಚಿನ್ನದ ಗಣಿ ಲಿಮಿಟೆಡ್​.
ಖಾಸಗೀಕರಣವೇಕೆ?* ಉದ್ದಿಮೆಯಲ್ಲಿರುವ ಜಡತ್ವ ಹೋಗಲಾಡಿಸುವುದು* ನೌಕರರ ಕಾರ್ಯಕ್ಷಮತೆ ಹೆಚ್ಚಳ ಮಾಡುವುದು* ಖಾಸಗಿಯವರ ಮೂಲಕ ಹೊಸ ಹೊಸ ಯೋಜನೆ ರೂಪಿಸುವುದು* ಬಂಡವಾಳ ಸಂಗ್ರಹ ಮಾಡುವುದು* ಉದ್ಯೋಗದ ಅವಕಾಶಗಳನ್ನು ಹೆಚ್ಚಳ ಮಾಡುವುದು
ಹಿಂತೆಗೆತ ಸಾಧ್ಯತೆ?ಉದ್ದಿಮೆಗಳ ಬಂಡವಾಳದಲ್ಲಿ ಶೇ.24 ಬಂಡವಾಳ ಹಿಂತೆಗೆದು ಕೊಳ್ಳಲಾಗುತ್ತದೆ. ಸಂಸ್ಥೆಯ ಒಡೆತನ ಸರ್ಕಾರದಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
