ಧಾರವಾಡ: ಕರೊನಾ ನಿಯಂತ್ರಣದ ವ್ಯಾಕ್ಸಿನೇಷನ್ ನಿರ್ವಹಣೆಗಾಗಿಯೇ ಕಾಶಿ ಜಗದ್ಗುರು ಪೀಠದಿಂದ ಪಿಎಂ ಕೇರ್ಸ್ ಫಂಡ್​ಗೆ 5 ಲಕ್ಷ ರೂ. ದೇಣಿಗೆಯನ್ನು ವಾರಣಾಸಿ ವಿಭಾಗಾಧಿಕಾರಿ ದೀಪಕ್ ಅಗರ್​ವಾಲ್ ಮೂಲಕ ಭಾನುವಾರ ಸಮರ್ಪಿಸಲಾಯಿತು.
ನಂತರ ಮಾತನಾಡಿದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕರೊನಾದಿಂದ ಆಗಿರುವ ಸಾವು-ನೋವುಗಳ ಸಂಖ್ಯೆ ಅಧಿಕಗೊಂಡು ಜನರು ಭಯಭೀತಗೊಂಡಿದ್ದಾರೆ. ಸರ್ವರನ್ನು ರಕ್ಷಿಸುವ ವೈಜ್ಞಾನಿಕ ರಕ್ಷಾಕವಚ ಅಂದರೆ ಅದು ವ್ಯಾಕ್ಸಿನೇಷನ್ ಮಾತ್ರ. ಲಸಿಕೆಯ ರಕ್ಷಾಕವಚ ಭಾರತೀಯರಿಗೆ ದೊರೆಯಲೆಂಬ ಉದ್ದೇಶದಿಂದ ಕಾಶಿ ಪೀಠವು ತನ್ನ ಪಾಲಿನ ದೇಣಿಗೆಯನ್ನು ಕೊಡಮಾಡಿದೆ. ಅಲಕ್ಷ್ಯ ವಹಿಸದೆ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
‘ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಪೀಠವು ಕೋವಿಡ್ ಕೇರ್ ಸೆಂಟರ್ ತೆರೆಯುವುದರೊಂದಿಗೆ, ಕೊರೋನಾದಿಂದ ಅನಾಥರಾದ ಮಕ್ಕಳಿಗೆ ಉಚಿತ ಆಶ್ರಯ, ಊಟ ಹಾಗೂ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿರುವುದು ಆದರ್ಶಪ್ರಾಯವಾದ ಸಾಮಾಜಿಕ ಸೇವೆ’ ಎಂದು ದೀಪಕ್ ಅಗರ್​ವಾಲ್ ಪ್ರಶಂಶಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + thirteen =
Remember me
