ಬೆಂಗಳೂರು:ರಿಯಲ್​ ಎಸ್ಟೇಟ್​ ಉದ್ಯಮಿ ಆಗಿರುವ ಮಾವನನ್ನು ಅಳಿಯನೇ ಅಪಹರಣ ಮಾಡಿಸಿದ್ದು, ಇದೀಗ ಅಳಿಯನ ಸಹಿತ ಐವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಳಿಯ ಪವನ ವಾಜಪೇಯಿ ಅಪಹರಣದ ಪ್ರಮುಖ ಸೂತ್ರಧಾರಿಯಾಗಿದ್ದು, ಆತನ ಸೂಚನೆ ಮೇರೆಗೆ ಅಪಹರಣ ಮಾಡಿದ್ದ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ.
ಪವನ ವಾಜಪೇಯಿ, ಆಸೀಫ್, ಸಮೀರ, ಮಂಜುನಾಥ, ಖಲೀಲ ಅಪಹರಣ ಮಾಡಿದ್ದ ಆರೋಪಿಗಳು. ಶ್ರೀನಿವಾಸ ನಾಯ್ಡು ಅಪಹರಣಕ್ಕೆ ಒಳಗಾಗಿದ್ದ ಉದ್ಯಮಿ. ಈ ಅಪಹರಣ ಪ್ರಕರಣ ನಿನ್ನೆ ಶ್ರೀನಿವಾಸ ನಾಯ್ಡು ಅವರು ಅಳಿಯನೊಂದಿಗೆ ಜಮೀನು ನೋಡಲು ಹೋಗಿದ್ದಾಗ ಧಾರವಾಡದಲ್ಲಿ ನಡೆದಿತ್ತು.
ಇದನ್ನೂ ಓದಿ:ರಸ್ತೆ ಬದಿಯ ಮುಳ್ಳುಕಂಟಿಯಲ್ಲಿ ಪತ್ತೆಯಾಯಿತು ನವಜಾತ ಶಿಶು!
ಅಪಹರಣ ನಡೆದ ಬಳಿಕ ಅಳಿಯನೇ ಪೊಲೀಸರಿಗೆ ಮಾಹಿತಿ ನೀಡಿ ಮಾವನ ಕಿಡ್ನ್ಯಾಪ್ ಆಗಿದೆ ಎಂದು ದೂರು ನೀಡಿದ್ದ. ಆ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಅಪಹರಣಕಾರರು ಇರುವ ಸ್ಥಳ ಪತ್ತೆ ಮಾಡಿ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಅಪಹರಣಕಾರರು ಪರಾರಿಯಾಗಿದ್ದು, ಪೊಲೀಸರು ಉದ್ಯಮಿಯನ್ನು ರಕ್ಷಿಸಿ ಠಾಣೆಗೆ ಕರೆ ತಂದಿದ್ದರು.
ಆರಂಭದಿಂದಲೇ ಅಳಿಯನ ಬಗ್ಗೆ ಅನುಮಾನ ಹೊಂದಿದ್ದ ಪೊಲೀಸರು ತನಿಖೆ ನಡೆಸಿದಾಗ ಆತನೇ ಅಪಹರಣದ ಕಿಂಗ್​ಪಿನ್​ ಆಗಿರುವುದು ತಿಳಿದು ಬಂದಿದೆ. ಇಂದು ವಿದ್ಯಾಗಿರಿ ಠಾಣಾ ಪೊಲೀಸರು ಅಳಿಯ ಸೇರಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಯಾವ ಕಾರಣಕ್ಕೆ ಅಪಹರಣ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿ ಕುರಿತು ತನಿಖೆ ಮುಂದುವರಿಸಿದ್ದಾರೆ.
ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯ ಅಪಹರಣ; ಆಮೇಲಾಗಿದ್ದು ರೋಚಕ ಕಾರ್ಯಾಚರಣೆ
ಮೊದಲು ನೀವು ಮಠಗಳಿಗೆ ಬರೋದನ್ನು ಬಿಡಿ: ಯತ್ನಾಳ್ ವಿರುದ್ಧ ಸ್ವಾಮೀಜಿ ಆಕ್ರೋಶ..
‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 11 =
Remember me
