ಮಂಗಳೂರು:ಕರಾವಳಿಯಲ್ಲಿ ಭಾನುವಾರ 5 ಪೊಲೀಸ್ ಠಾಣೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ಕೋವಿಡ್-19 ಚೆಕ್​ಪೋಸ್ಟ್, ಹೈವೇ ಪ್ಯಾಟ್ರೋಲ್, ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸಿದ್ದ ಕಾನ್​ಸ್ಟೆಬಲ್​ಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಒಂದೇ ಕಟ್ಟಡದಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಸಹಿತ ಗ್ರಾಮಾಂತರ ಮತ್ತು ನಗರ ಠಾಣೆ, ಅಜೆಕಾರು, ಬ್ರಹ್ಮಾವರ ಠಾಣೆಯನ್ನು 48 ಗಂಟೆಗಳ ಕಾಲ ಸೀಲ್​ಡೌನ್ ಮಾಡಲಾಗಿದೆ. ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿರುವ ಕಾರಣ ವಿಟ್ಲ ಠಾಣೆಯನ್ನೂ ಸೀಲ್​ಡೌನ್ ಮಾಡಲಾಗಿದೆ.
ಮೊಬೈಲ್​ನಿಂದ ಹರಡಿತೇ?
ಮುಂಬೈನಿಂದ ಸೋಂಕಿತ ಯುವಕ ಮೇ 14ರಂದು ವಿಟ್ಲಕ್ಕೆ ಬಂದಿದ್ದ. ಹೆಡ್​ಕಾನ್​ಸ್ಟೆಬಲ್ ಒಬ್ಬರು ಆತನ ಆಧಾರ್ ಪಡೆದಿದ್ದರು. ಆ ಬಳಿಕ ಸದ್ಯ ಸೋಂಕಿಗೆ ಒಳಗಾಗಿರುವ ಕಾನ್​ಸ್ಟೆಬಲ್​ನಿಂದ ಹೆಡ್ ಕಾನ್​ಸ್ಟೆಬಲ್ ಮೊಬೈಲ್ ಪಡೆದುಕೊಂಡಿದ್ದು, ಆಧಾರ್ ಮುಟ್ಟಿದ ಕೈನಲ್ಲೇ ಅದನ್ನೂ ಮುಟ್ಟಿದ್ದರು. ಆ ಬಳಿಕ ತಮ್ಮ ಮೊಬೈಲ್ ಬಳಕೆ ಮಾಡಿದ್ದ ಪೇದೆಗೆ ಸೋಂಕು ತಗುಲಿದೆ. ನೇರ ಸಂಪರ್ಕ ಹೊಂದಿದ್ದ ಸಿಬ್ಬಂದಿಯ ವರದಿ ನೆಗೆಟಿವ್ ಆಗಿದೆ.
ಮಾಸ್ಕ್​ ಧರಿಸದೆ ಹೊರ ಬಂದ ತಹಸೀಲ್ದಾರ್​ಗೆ ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
