ಚಿಕ್ಕಬಳ್ಳಾಪುರ:ಚಿಕ್ಕಪ್ಪಾ… ಎನ್ನುತ್ತಾ ಎರಡೂ ಕೈಗಳನ್ನು ಚಾಚಿಕೊಂಡು ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ ಪುಟ್ಟಕಂದಮ್ಮನನ್ನೇ ನಿರ್ದಯಿಯಾಗಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಮುಗ್ಧ ಮಗುವನ್ನು ಕೊಲೆ ಮಾಡಿದ ಆರೋಪಿ ವ್ಯಾಪಾರಿ ಶಂಕರ್ (32). ಹೂವಿನ ವ್ಯಾಪಾರಿಯಾದ ಈತ ತನ್ನ ಅಣ್ಣನ ಮಗಳು ಚಾರ್ವಿತಾ(5)ಳನ್ನು ಕೊಲೆ ಮಾಡಿದ್ದಾನೆ.ಇದನ್ನೂ ಓದಿರಿಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ
ಚಾರ್ವಿತಾ ಅಂಗವಿಕಲೆ. ಇದೇ ಕಾರಣಕ್ಕೆ ಚಾರ್ವಿತಾ ಹುಟ್ಟಿದಾಗಿನಿಂದಲೂ ದರಿದ್ರ ವಕ್ಕರಿಸಿಕೊಂಡಿದೆ ಎಂದು ಆಕೆಯ ಮುಖ ಕಂಡಾಗಲೆಲ್ಲ ಆರೋಪಿ ಶಂಕರ್​ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಕುಟುಂಬಸ್ಥರು ಹಲವು ಬಾರಿ ಬುದ್ಧಿ ಹೇಳಿದ್ದರೂ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಂಡಿರಲಿಲ್ಲ. ಈ ಮಗುವಿನ ವಿಚಾರಕ್ಕೆ ಕೋಪಗೊಂಡು ಈ ಹಿಂದೆ ಮನೆಯನ್ನೂ ಬಿಟ್ಟು ಹೋಗಿದ್ದ.
ಇತ್ತೀಚಿಗೆ ವಾಪಸ್​ ಬಂದಿದ್ದ ಶಂಕರ್​, ಚಾರ್ವಿತಾಳ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ಮಂಗಳವಾರ ಸಂಜೆ ಮನೆಗೆ ಬಂದ ಚಿಕ್ಕಪ್ಪನನ್ನು ತಬ್ಬಿಸಿಕೊಳ್ಳಲು ಚಾರ್ವಿತಾ ಮುಂದಾಗಿದ್ದಾಳೆ. ಇದೇ ವೇಳೆ ಜೇಬಿನಲ್ಲಿದ್ದ ಚಾಕು ತೆಗೆದು ಮಗಳ ಕತ್ತು ಕೊಯ್ದು ಕೊಂದಿದ್ದಾನೆ. ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಅಣ್ಣ-ತಮ್ಮನಿಂದ ನಿರಂತರ ಅತ್ಯಾಚಾರ: ಲವ್ ಜಿಹಾದ್​ಗೆ ಸಿಲುಕಿ ನರಳಾಡುತ್ತಿದ್ದಾಳೆ ಬೆಂಗಳೂರಿನ ಯುವತಿ

ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಗೌಡರ ಕಣ್ಣಲ್ಲಿ ಮಾತ್ರ ನೀರು ಬತ್ತಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
