ಬಳ್ಳಾರಿ:ಐದು ವರ್ಷದ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕರೊನಾ ಸೋಂಕಿತ ತಂದೆ ಜತೆಯಲ್ಲೇ ಆಂಬುಲೆನ್ಸ್​ನಲ್ಲಿ ಕೋವಿಡ್​ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಗುವನ್ನು ಕರೆದೊಯ್ದಿದ್ದು, ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹೊರಗಡೆ ಕಳುಹಿಸಬಾರದು ಎಂದು ವೈದ್ಯಲೋಕ ಹೇಳುತ್ತಿದೆ. ಆದರೂ, ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಕರೊನಾ ಸೋಂಕಿತ ವ್ಯಕ್ತಿಯೊಂದಿಗೆ ಆತನ ಮಗುವನ್ನು ಮಂಗಳವಾರ ರಾತ್ರಿ ಕರೆದೊಯ್ಯಲಾಗಿದೆ.ಇದನ್ನೂ ಓದಿರಿವಿಧಾನಸೌಧ ಬಳಿ ಅಪಘಾತ, ಎಎಸ್ಐ ಸೇರಿ ನಾಲ್ವರಿಗೆ ಗಾಯ
ಐದು ವರ್ಷದ ಮಗುವಿಗೆ ಪಿಪಿಇ ಕಿಟ್​ ನಮ್ಮ ಬಳಿಯಿಲ್ಲ. ಆ ಮಗುವಿಗೆ ತಂದೆ ಮತ್ತು ತಾಯಿ ಬಿಟ್ಟು ಬೇರೆ ಯಾರೂ ಇರದ ಕಾರಣ ಪಾಲಕರ ಒಪ್ಪಿಗೆ ಮೇರೆಗೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯಲಾಗಿದೆ. ಮಗುವಿಗೆ ಕೋವಿಡ್​ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್​.ಎಸ್​. ನಕುಲ್​ ಹೇಳಿದ್ದಾರೆ.
ಸೋಂಕಿತನನ್ನು ಮನೆಯಿಂದ ಕರೆದೊಯ್ಯಲು ಬಂದ ಆರೋಗ್ಯ ಇಲಾಖೆ ಸಿಬ್ಬಂದಿ, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮಗುವನ್ನು ಕರೆದೊಯ್ದಿದ್ದಾರೆ. ಹೀಗಾದರೆ ಮಗುವಿಗೂ ಸೋಂಕು ಬರದೆ ಇರುತ್ತಾ? ಎಂದು ಸಾರ್ವಜನಿಕಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಂಕಿತ ಮತ್ತು ಆತನ ಪತ್ನಿಗೆ ಮಾತ್ರ ಪಿಪಿಇ ಕಿಟ್​ ಹಾಕಿಸಿ ಆಂಬುಲೆನ್ಸ್​ ಹತ್ತಿಸಿಕೊಂಡು ಹೋಗುವ ವಿಡಿಯೋ ವೈರಲ್​ ಆಗಿದೆ.
ಇತ್ತೀಚಿಗೆ ಕರೊನಾದಿಂದ ಮೃತಪಟ್ಟ 9 ಜನರ ಶವಗಳನ್ನು ಒಂದೇ ಗುಂಡಿಗೆ ಎಸೆದು ಮಣ್ಣುಮುಚ್ಚಿದ್ದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಯಡವಟ್ಟು ಸಂಭವಿಸಿದೆ.
ಒಂದೇ ಗುಂಡಿಗೆ 9 ಶವ ಎಸೆದು ಅಂತ್ಯಸಂಸ್ಕಾರ ಮಾಡಿದ್ದವರಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 3 =
Remember me
