ಬೆಂಗಳೂರು:ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 400ರ ಗಡಿ ದಾಟಿದ್ದು, ಸೋಂಕಿತರಲ್ಲಿ ಶೇ.50 ಯುವಜನರು. ಮತ್ತೊಂದೆಡೆ ಈವರೆಗೆ ಮೃತಪಟ್ಟಿರುವ 17 ಜನರಲ್ಲಿ 42 ವರ್ಷದ ವ್ಯಕ್ತಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ವೃದ್ಧರು.
ರಾಜ್ಯದಲ್ಲಿ ಮಾ. 8ರಿಂದ ಏ.21ರವರೆಗೆ 418 ಕರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 209 ಸೋಂಕಿತರು 18-40 ವರ್ಷ ವಯಸ್ಸಿನವರು. ಉಳಿದಂತೆ 0-18 ವಯಸ್ಸಿನ 38, 40-60 ವಯಸ್ಸಿನ 99 ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ 69 ಮಂದಿಯಲ್ಲಿ ಸೋಂಕು ಕಾಣಿಸಿದೆ.
ದೇಶದ ಒಟ್ಟಾರೆ ಕರೊನಾ ವೈರಸ್ ಸೋಂಕಿತರಲ್ಲಿ ಶೇ. 40 ಯುವಜನರಿದ್ದಾರೆ ಎಂದು ಕೇಂದ್ರ ಸರ್ಕಾರ ಈಗಾಗಲೇ ತಿಳಿಸಿದೆ. ಅದರಂತೆ ರಾಜ್ಯದಲ್ಲಿನ ಪ್ರಕರಣಗಳನ್ನು ಗಮನಿಸಿದಾಗ ಶೇ.50 ಯುವಜನರಿದ್ದಾರೆ. ವಿದೇಶ ಪ್ರವಾಸ ಮಾಡಿ ಬಂದವರು ಸೇರಿ ಕೆಲಸ ಮತ್ತಿತರೆ ಕಾರಣಗಳಿಂದ ಮನೆಯಿಂದ ಹೊರಗೆ ಹೆಚ್ಚು ಇರುವವರು 18-40 ವರ್ಷ ವಯೋಮಾನದವರು. ಪ್ರಥಮ, ದ್ವಿತೀಯ ಸಂಪರ್ಕ ಹೊಂದಿದ ಕುಟುಂಬದ ಸದಸ್ಯರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರ ಸೋಂಕಿಗೆ ಒಳಗಾಗಿದ್ದಾರೆ. 293 ಪುರುಷರು ಹಾಗೂ 122 ಮಹಿಳೆಯರು ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 80 ವರ್ಷ ಮೇಲ್ಪಟ್ಟ ಮೂವರು, 70 ವರ್ಷ ಮೇಲ್ಪಟ್ಟ ನಾಲ್ವರು, 60 ಮೇಲ್ಪಟ್ಟ ಏಳು ಮಂದಿ, 50 ವರ್ಷ ಮೇಲ್ಪಟ್ಟ ಇಬ್ಬರು ಹಾಗೂ 42 ವರ್ಷದ ಒಬ್ಬ ವ್ಯಕ್ತಿ ಸೇರಿ ರಾಜ್ಯದಲ್ಲಿ 17 ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಸೋಂಕಿನ ಸಾಧ್ಯತೆ ವಿವರ
ವಿದೇಶ ಪ್ರಯಾಣ ಹಿನ್ನೆಲೆ- 102
ತಬ್ಲಿಘಿ ಸಮಾವೇಶದಲ್ಲಿ ಭಾಗಿ- 79
ನಂಜನಗೂಡು ಕಂಪನಿ- 68
ದೆಹಲಿ ಪ್ರಯಾಣ ಹಿನ್ನೆಲೆ- 48
ಕಾರಣ ತಿಳಿಯದ
ಪ್ರಕರಣ- 118
ಸಮುದಾಯಕ್ಕೆ ಸೋಂಕು?:ರಾಜ್ಯದಲ್ಲಿನ ಒಟ್ಟು ಸೋಂಕಿತರ ಪೈಕಿ 118 ಮಂದಿಯಲ್ಲಿ ಸೋಂಕು ಹರಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಇವರಲ್ಲಿ ಯಾರೂ ವಿದೇಶ ಪ್ರಯಾಣ ಮಾಡಿಲ್ಲ, ಮಾಡಿದವರ ಸಂಪರ್ಕಕ್ಕೂ ಬಂದಿಲ್ಲ, ಆದರೂ ಸೋಂಕು ಹರಡಿದೆ. ಕೆಲವರು ತೀವ್ರ ಉಸಿರಾಟದ ಸಮಸ್ಯೆಯಿಂದ, ಮತ್ತೆ ಕೆಲವರು ಇನ್​ಫ್ಲೂಯೆಂಜ ಲೈಕ್ ಇಲ್​ನೆಸ್ (ಐಎಲ್​ಐ)ನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ ವೇಳೆ ಸೋಂಕು ದೃಢಪಟ್ಟಿದೆ. ಹೀಗಾಗಿ ಈ ಪ್ರಕರಣಗಳಿಂದ ಸೋಂಕು ಸಮುದಾಯಕ್ಕೆ ಅಂದರೆ 3ನೇ ಹಂತ ತಲುಪಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.
| ಪಂಕಜ ಕೆ.ಎಂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
