ಯಳಂದೂರು:ತಾಲೂಕಿನ ಹೊನ್ನೂರು ಗ್ರಾಮದಲ್ಲಿ ದಲಿತರ ಬೀದಿಗೆ ಉತ್ಸವ ಮೂರ್ತಿ ತರಬೇಕು ಎಂದು ಹೇಳಿದರೆಂಬ ಕಾರಣಕ್ಕೆ ಕೂಲಿಕಾರ್ವಿುಕನಿಂದ ಗ್ರಾಮದ ಯಜಮಾನರು ಬರೋಬ್ಬರಿ 50,000 ರೂ. ದಂಡ ವಸೂಲಿ ಮಾಡಿರುವ ಅಮಾನವೀಯ ಪ್ರಸಂಗ ಜರುಗಿದೆ.
ಗ್ರಾಮದ ದಲಿತರ ಬೀದಿಯ ನಿವಾಸಿ ನಿಂಗರಾಜು ದಂಡ ಪಾವತಿಸಿದವರು. ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲ ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಇಲ್ಲಿ ಪ್ರತಿ ವರ್ಷ ನವರಾತ್ರಿ ಉತ್ಸವ ನಡೆಯುತ್ತದೆ. ಈ ಸಂಬಂಧ ಇತ್ತೀಚೆಗೆ ತಹಸೀಲ್ದಾರ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿತ್ತು.
ಈ ವೇಳೆ ನಿಂಗರಾಜು ‘ಇದು ಸರ್ಕಾರಕ್ಕೆ ಸೇರಿರುವ ದೇಗುಲ. ಉತ್ಸವ ಮೂರ್ತಿ ಕೇವಲ ಸವರ್ಣೀಯರ ಬೀದಿಗೆ ಹೊರಡುತ್ತದೆ. ಇದನ್ನು ದಲಿತರ ಬೀದಿಗೂ ತರಬೇಕು’ ಎಂದು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದ್ದರು.
ಇದನ್ನು ತಿಳಿದ ಗ್ರಾಮದ 13 ಕೋಮಿನ ಯಜಮಾನರು ಹಾಗೂ ಮುಖಂಡರು ಗುರುವಾರ ಸಭೆ ನಡೆಸಿ ನಿಂಗರಾಜು ಅವರಿಗೆ ‘ಗ್ರಾಮದಲ್ಲಿ ಇಲ್ಲದ ನಿಯಮಗಳನ್ನು ಮಾಡಿ ಎಂದು ನೀನು ತಹಸೀಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದ್ದೀಯಾ’ ಎಂದು 50,000 ರೂ. ದಂಡ ವಿಧಿಸಿದ್ದರು. ಇದರಿಂದ ನೊಂದ ನಿಂಗರಾಜು, ತಮ್ಮ ಪತ್ನಿ ಮಹಾದೇವಮ್ಮ ಅವಳಿ ಬಳಿ ಇದ್ದ ಒಡವೆಗಳನ್ನು ಅಡವಿಟ್ಟು, ಸಾಲ ಮಾಡಿ ದಂಡ ಪಾವತಿಸಿದ್ದಾರೆ. ಶನಿವಾರ ತಹಸೀಲ್ದಾರ್ ಬಳಿ ತೆರಳಿದ ದಂಪತಿ ತಮಗಾಗಿರುವ ಅನ್ಯಾಯದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿ ತಹಸೀಲ್ದಾರ್ ಸುದರ್ಶನ್, ಈ ಸಂಬಂಧ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − two =
Remember me
