ಬೆಂಗಳೂರು:ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಮಾನತೆ, ಆವಿಷ್ಕಾರದ ಫಲಗಳನ್ನು ಸರಿಸಮಾನ ಹಂಚಿಕೆ ದೃಷ್ಟಿಯಿಂದ ವರ್ಚುವಲ್ ಐಟಿ ಪಾರ್ಕ್ಗಳನ್ನು ಸ್ಥಾಪಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೇಂದ್ರದ ಕೌಶಲಾಭಿವೃದ್ಧಿ, ವಿದ್ಯುನ್ಮಾನ, ಮಾಹಿತಿ-ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 2ನೇ ಹಂತದ ನಗರಗಳಲ್ಲಿ ಐಟಿ ಪಾರ್ಕ್​ಗಳನ್ನು ಸ್ಥಾಪಿಸುವ ಪ್ರಯತ್ನ ನಿರೀಕ್ಷಿತ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಆವಿಷ್ಕಾರದ ಲಾಭ ಪಡೆದು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ವರ್ಚುವಲ್ ಐಟಿ ಪಾರ್ಕ್ ಗಳನ್ನು ನೆಲೆಗೊಳಿಸಲಿದ್ದು, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಬಳಕೆಗೆ ಉತ್ತಮ ವೇದಿಕೆಯಾಗಲಿದೆ ಎಂದರು.
ಡಿಜಿಟಲ್ ಗ್ರಾಮಗಳು:ಪಾರದರ್ಶಕ, ಭ್ರಷ್ಟಾಚಾರ ರಹಿತ ಜತೆಗೆ ಫಲಾನುಭವಿಗಳಿಗೆ ತ್ವರಿತ ಸೌಲಭ್ಯ ಒದಗಿಸುವಲ್ಲಿ ಮೋದಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ಇದಕ್ಕಾಗಿ ಅಂತರ್ಜಾಲ ವ್ಯವಸ್ಥೆ ಬಲಿಷ್ಠ ಗೊಳಿಸಲು ಕ್ರಮವಹಿಸಲಾಗಿದೆ. ಪ್ರಾಯೋಗಿಕವಾಗಿ ದೇಶದ 5,000 ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಊರುಗಳ ಪ್ರತಿ ಮನೆಯು ಇಂಟರ್​ನೆಟ್ ಸಂಪರ್ಕ ಹೊಂದಿ ಡಿಜಿಟಲ್ ಗ್ರಾಮಗಳಾಗಿ ಪರಿವರ್ತನೆಯಾಗಲಿವೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.
ಕೌಶಲಾಭಿವೃದ್ಧಿಗೆ ಗಮನ:ವಿಶ್ವದ ಅಗತ್ಯತೆ, ವಿಪುಲ ಅವಕಾಶಗಳ ಬಳಕೆ ದೃಷ್ಟಿಯಿಂದ ಯುವ ಜನರ ಕೌಶಲಾಭಿ ವೃದ್ಧಿಗೆ ವಿಶೇಷ ಗಮನಹರಿಸಿದ್ದು, ಈಗಾಗಲೇ ಸ್ಥಾಪಿಸಿದ 800 ಪ್ರಧಾನಿ ಕೌಶಲ ಕೇಂದ್ರಗಳು, 20,000 ಅಲ್ಪಾವಧಿ ತರಬೇತಿ ಸಂಸ್ಥೆಗಳು, 14,000 ಐಟಿಐಗಳು, 2000 ಜನ ಶಿಕ್ಷಣ ಸಂಸ್ಥಾನಗಳ ಮೂಲಕ ಎರಡು ಕೋಟಿ ಯುವಜನರಿಗೆ ತರಬೇತಿ ನೀಡಿ, ನುರಿತ ಯುವಶಕ್ತಿಯನ್ನಾಗಿ ರೂಪಿಸಲಾಗಿದೆ ಎಂದರು.
ಉಡುಪಿ:ಕೇಂದ್ರ ಸರ್ಕಾರದ ಕೃಷಿ ಅರಣ್ಯ ಯೋಜನೆಗೆ ಪೂರಕವಾಗಿ ರೈತರು ತೋಟಗಳಲ್ಲಿ ಬೆಳೆದ ಮರಗಳನ್ನು ಕಡಿಯಲು, ಮಾರಾಟ ಮತ್ತು ಸಾಗಾಟಕ್ಕೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಮಾತ್ರ ಇಂತಹ ಕಠಿಣ ಕಾನೂನು ಇದ್ದು, ಶೀಘ್ರ ತಿದ್ದುಪಡಿ ತರಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಗುರುವಾರ ಪುರಭವನದಲ್ಲಿ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ ಅವರು, ಶ್ರೀಗಂಧ ಸಹಿತ ಯಾವುದೇ ಮರಗಳನ್ನು ಬೆಳೆಸಿ ಕಡಿಯಲು, ಮಾರಾಟ ಮಾಡಲು ಸರಳ ಕಾನೂನು ಜಾರಿಗೆ ತರಬೇಕು. ಈ ಬಗ್ಗೆ ರಾಜ್ಯದ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಬಳ್ಳಾರಿ:ಏಳು ವರ್ಷಗಳಲ್ಲಿ ಕೇಂದ್ರದ ದಿಟ್ಟ ನಿರ್ಧಾರಗಳಿಂದ ಪ್ರಧಾನಿ ನರೇಂದ್ರ ಮೋದಿ ಪ್ರಪಂಚದ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶದ ದೀನರು, ದಲಿತರು, ಯುವಕರು ಸೇರಿ 80 ಕೋಟಿ ಜನರು ಕೇಂದ್ರದ ಒಂದಲ್ಲ ಒಂದು ಯೋಜನೆ ಲಾಭ ಪಡೆಯುತ್ತಿದ್ದಾರೆ. ಕಟ್ಟಕಡೆ ವ್ಯಕ್ತಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಈವರೆಗೆ ಯಾರೂ ನೀಡದ 136 ಯೋಜನೆಗಳನ್ನು ಮೋದಿ ಸರ್ಕಾರ ನೀಡಿದೆ. ರೈತರ ಹಿತಕ್ಕಾಗಿ ಕೃಷಿ ಕಾನೂನು ಜಾರಿಗೊಳಿಸಲಾಗಿದೆ. ಆದರೆ ಕಾಂಗ್ರೆಸ್​ನವರು, ವಿಪಕ್ಷಗಳು ಢೋಂಗಿ ರೈತರನ್ನು ಹೋರಾಟಕ್ಕಿಳಿಸಿದ್ದು, ನಿಜವಾದ ಕೃಷಿಕರಿಗೆ ಭ್ರಮೆ ಮೂಡಿಸಲು ಪ್ರಯತ್ನಿಸುತ್ತಿದೆ ಎಂದರು.
ದೇಶದ ನಿಜವಾದ ಗುತ್ತಿಗೆದಾರರು ಕಾಂಗ್ರೆಸ್​ನವರು. ಆದ್ದರಿಂದ 2014-19ರಲ್ಲಿ ಕಾಂಗ್ರೆಸ್​ನ್ನು ಮಣಿಸಿ 135 ಕೋಟಿ ಜನರ ಆಶೀರ್ವಾದದಿಂದ ಬಿಜೆಪಿ ಆಡಳಿತಕ್ಕೆ ಬಂದಿದೆ ಎಂದರು. ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬೇರೆ ರಾಷ್ಟ್ರಗಳಿಂದ ರಸಗೊಬ್ಬರ ತರಿಸಿಕೊಳ್ಳಲಾಗುತ್ತಿದ್ದು, ಆದಷ್ಟು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಡಿಎಪಿ ಗೊಬ್ಬರದ ದರದ ಭಾರ ಇಳಿಸಲು 25 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ರೈತರಿಗೆ 1200 ರೂ. ಬೆಲೆಯಲ್ಲಿ ತಲುಪಿಸುತ್ತಿದ್ದೇವೆ. ಡಿಎಪಿ ಜಾಗದಲ್ಲಿ ಸ್ವದೇಶಿ ಎಸ್​ಎಸ್​ವಿ ರಸಗೊಬ್ಬರ ತಯಾರಾದರೆ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತದೆ. ಸದ್ಯ ಯಾವುದೇ ಹೊಸ ಯೋಜನೆಗಳಿಲ್ಲ. ಇರುವವನ್ನೇ ಮುಂದುವರಿಸಿಕೊಂಡು ಹೋದರೆ ಕೃಷಿ ವಲಯ ಸಾಕಷ್ಟು ಪ್ರಗತಿ ಕಾಣಲಿದೆ ಎಂದು ಖೂಬಾ ಹೇಳಿದರು.
ಘಟನೆ ಬಗ್ಗೆ ಮಾಹಿತಿ ಇಲ್ವಂತೆ!:ಯಾದಗಿರಿಯಲ್ಲಿ ಜನಾಶೀರ್ವಾದ ಯಾತ್ರೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಭಗವಂತ ಖೂಬಾ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
