| ಆರ್.ತುಳಸಿಕುಮಾರ್ ಬೆಂಗಳೂರು
ದೇಶದಲ್ಲೇ ಅತಿ ಹೆಚ್ಚಿನ ಆನೆಗಳಿರುವ ಕರ್ನಾಟಕದಲ್ಲಿ ದಿನೇದಿನೆ ಗಜ ಸಂತತಿ ಹೆಚ್ಚುತ್ತಿದೆ. ಒಟ್ಟಾರೆ ಸಂಖ್ಯೆಯಲ್ಲಿ ಶೇ.58 ಆನೆಗಳು ರಾಜ್ಯದ 5 ಅಭಯಾರಣ್ಯಗಳಲ್ಲೇ ನೆಲೆ ಕಂಡುಕೊಂಡಿವೆ ಎಂಬುದು ಅಚ್ಚರಿ. ರಾಜ್ಯದ 32 ಅರಣ್ಯ ವಿಭಾಗಗಳ ಪೈಕಿ 23ರಲ್ಲಿ ಆನೆಗಳು ವಾಸಿಸುತ್ತಿವೆ. ಆದರೂ, ಈ ಹಿಂದೆ ಆನೆ ಇರುವಿಕೆ ಇದ್ದ ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯಿಂದ ಅವುಗಳು ಹೊರಬಂದು ಅನ್ಯ ಆವಾಸ ಸ್ಥಾನ ಸೇರಿಕೊಂಡಿವೆ.
ರಾಜ್ಯದಲ್ಲಿರುವ 23 ಅರಣ್ಯ ವಿಭಾಗಗಳು 49,733.11 ಚದರ ಕಿ.ಮೀ.ವಿಸ್ತೀರ್ಣ ಹೊಂದಿವೆ. ಈ ಪೈಕಿ 29,209.52 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆನೆಗಳ ಓಡಾಟಕ್ಕೆ ಅವಕಾಶ ಇದ್ದರೂ 18,975.43 ಚದರ ಕಿ.ಮೀ. ಪ್ರದೇಶದಲ್ಲಿ ಆನೆಗಳ ಹೆಜ್ಜೆಗುರುತು ಕಂಡಿವೆ. ಒಟ್ಟಾರೆ ಆನೆಗಳ ಸಂತತಿ ಪೈಕಿ ಶೇ.48.48 ಪ್ರೌಢಾವಸ್ಥೆ ಆನೆಗಳಾಗಿವೆ. ಶೇ.31.96 ಅರೆ ಪ್ರೌಢ, ಶೇ.13.48 ವಯಸ್ಕ ಹಾಗೂ ಶೇ.6.08 ಮರಿಯಾನೆಗಳು ಇವೆ. 2023ರ ಆರಂಭದಲ್ಲಿ ಗಣತಿ ನಡೆದರೂ, ಈ ವರ್ಷದ ಮೇ 23ರಿಂದ 25ರವರೆಗೆ ಜಂಟಿಯಾಗಿ ನಡೆದ ದಕ್ಷಿಣ ಭಾರತ ರಾಜ್ಯಗಳ ಆನೆ ಅಂದಾಜು ಮಾಡುವ ಕಾರ್ಯದ ಬಳಿಕ ಕರ್ನಾಟಕದ ಆನೆಗಳ ಸಂಖ್ಯೆ 6,395ಕ್ಕೆ ಏರಿಕೆ ಆಗಿದೆ. 2017ರ ಗಣತಿಯಲ್ಲಿ 6,049 ಆನೆಗಳಿದ್ದವು. ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿರುವ ಮಾನವ-ಆನೆ ಸಂಘರ್ಷ ನಿರ್ವಹಣೆಯ ಜಾಗತಿಕ ಸಮ್ಮೇಳನದಲ್ಲಿ ಕರ್ನಾಟಕದಲ್ಲಿರುವ ಆನೆ ಸಂತತಿ ಅಂದಾಜಿನ ವರದಿ -2024 ಬಿಡುಗಡೆ ಮಾಡಲಾಗಿದೆ.
ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಎಂ.ಎಂ.ಹಿಲ್ಸ್, ಭದ್ರಾ ಅಭಯಾರಣ್ಯಗಳಲ್ಲೇ ಶೇ.58 (3,737) ಆನೆಗಳು ಕಾಣಿಸಿಕೊಂಡಿವೆ. ಭದ್ರಾವತಿ ವಿಭಾಗ (8), ಕೋಲಾರ (13), ಕುದುರೆಮುಖ (5), ಶಿರಸಿ-ಯಲ್ಲಾಪುರದಲ್ಲಿ (2) ಕಡಿಮೆ ಸಂಖ್ಯೆಯ ಆನೆಗಳ ಓಡಾಟ ದೃಢಪಡಿಸಿಕೊಳ್ಳಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 127 ಗಜಗಳು ವಾಸವಿವೆ.
ಕೊಡಗಲ್ಲಿ ಇಳಿಕೆ: ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ಆನೆಗಳ ಸಂಖ್ಯೆ ಪ್ರತೀ ಚದರ ಕಿ.ಮೀ.ಗೆ ಶೇ.0.27ರಿಂದ ಶೇ. 0.32ಕ್ಕೆ ಏರಿಕೆಯಾಗಿದೆ. ಕಾವೇರಿ ವನ್ಯಧಾಮದಲ್ಲಿ ಶೇ. 0.21ರಿಂದ ಶೇ. 0.38ಕ್ಕೆ ಹೆಚ್ಚಿದೆ. ಎಂ.ಎಂ.ಹಿಲ್ಸ್ ಅಭಯಾರಣ್ಯದಲ್ಲಿ ಆನೆಗಳ ಸಂಖ್ಯೆ ಸ್ಥಿರವಾಗಿವೆ. ನಾಗರಹೊಳೆಯಲ್ಲಿ ಶೇ.0.93ರಿಂದ ಶೇ.0.88ಕ್ಕೆ ಇಳಿಕೆ ಕಂಡಿದೆ. ವೀರಾಜಪೇಟೆ ಅರಣ್ಯ ವಿಭಾಗದಲ್ಲೂ ಶೇ. 0.13ರಿಂದ ಶೇ. 0.05ಕ್ಕೆ ಕ್ಷೀಣಿಸಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೊರಗೂ ಸಂಚಾರ: ಕಾಫಿ ಎಸ್ಟೇಟ್​ಸಹಿತ ಖಾಸಗಿ ಜಾಗಗಳಲ್ಲೂ ಆನೆ (161) ಇರುವಿಕೆ ಪತ್ತೆಯಾಗಿದೆ. ಅಲ್ಲದೆ ಮೀಸಲು ಅರಣ್ಯ ಪ್ರದೇಶದ ಹೊರಗೆ 792 ಹಾಗೂ ಸಂರಕ್ಷಿತ ಪ್ರದೇಶದ ಹೊರಗೆ 953 ಆನೆಗಳು ಸಂಚರಿಸುತ್ತಿದ್ದನ್ನು ದೃಢಪಡಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ ಆನೆ ಸಂತತಿ ಹೆಚ್ಚಿರುವುದು ಖುಷಿ ವಿಚಾರ. ಆನೆಗಳಿಂದ ಉಂಟಾಗುವ ಸಮಸ್ಯೆ ನಿವಾರಿಸಲು ಇಲಾಖೆ ಜಾಗೃತಿ ಮೂಡಿಸುತ್ತಿದೆ. ಹೊಸ ಮಾದರಿ ತಾಂತ್ರಿಕತೆ ಅಳವಡಿಸಿ ಕೊಳ್ಳಲಾಗುತ್ತಿದೆ. ಮಾನವ-ಆನೆ ಸಂಘರ್ಷ ತಡೆ ಸರ್ಕಾರದ ಪ್ರಥಮ ಆದ್ಯತೆ.
| ಈಶ್ವರ್ ಖಂಡ್ರೆ ಅರಣ್ಯ ಸಚಿವ
ದಿಲ್ಲಿಯ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ಪ್ರಧಾನಿ ಮೋದಿಯಿಂದ ರಾಷ್ಟ್ರಧ್ವಜಾರೋಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
