ಬೆಂಗಳೂರು :ರಾಜ್ಯ ಸರ್ಕಾರದ ಖಜಾನೆಗೆ ಅಧಿಕ ಆದಾಯ ತರುತ್ತಿರುವ ಅಬಕಾರಿ ಇಲಾಖೆ, ಕಳೆದ 5 ವರ್ಷಗಳಲ್ಲಿ ಹೊಸದಾಗಿ 586 ಹೋಟೆಲ್ ಮತ್ತು ವಸತಿಗೃಹ (ಸಿಎಲ್7) ಹಾಗೂ 2 ವರ್ಷದಲ್ಲಿ 109 ಹೊಸ ಪಬ್‌ಗಳಿಗೆ ಲೈಸೆನ್ಸ್ ನೀಡಿದೆ.
2015-16ರಲ್ಲಿ 94, 2016-17ರಲ್ಲಿ 81, 2017-18ರಲ್ಲಿ 9, 2018-19ರಲ್ಲಿ 255 ಮತ್ತು 2019-20ರಲ್ಲಿ 147 ಹೊಸ ಪರವಾನಗಿ ನೀಡಿರುವ ಇಲಾಖೆ, 2019-20ರಲ್ಲಿ 88 ಹಾಗೂ 2020-21ರಲ್ಲಿ 21 ಸೇರಿ ಒಟ್ಟು 109 ಪಬ್‌ಗಳನ್ನು ಆರಂಭಿಸಲು ಲೈಸೆನ್ಸ್ ನೀಡಿದೆ.
ಯಾವ ಮಾದರಿ ಲೈಸೆನ್ಸ್ ಸಿಗುತ್ತೆ?ರಾಜ್ಯದಲ್ಲಿ ಸದ್ಯ 10,410 ಮದ್ಯದಂಗಡಿಗಳಿದ್ದು, ಬೆಂಗಳೂರಲ್ಲೇ ಅತಿ ಹೆಚ್ಚು ಶೇ.45 ಮದ್ಯದಂಗಡಿಗಳಿವೆ. ವೈನ್‌ಶಾಪ್(ಸಿಎಲ್2), ಕ್ಲಬ್ (ಸಿಎಲ್4), ಸಾಂಧರ್ಭಿಕ ಸನ್ನದು(ಸಿಎಲ್5), ಸ್ಟಾರ್ ಹೋಟೆಲ್ ( ಸಿಎಲ್6ಎ), ಹೋಟೆಲ್ ಮತ್ತು ವಸತಿಗೃಹ (ಸಿಎಲ್7), ಟೂರಿಸ್ಟ್ ಹೋಟೆಲ್ (ಸಿಎಲ್7ಎ), ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), ಬಾಂಡೆಡ್ ವೇರ್ ಹೌಸ್(ಸಿಎಲ್8ಎ), ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), ಎಂಎಸ್‌ಐಎಲ್(ಸಿಎಲ್11ಸಿ) ಮತ್ತಿತರರ ಮಾದರಿಯ ಮದ್ಯದಂಗಡಿಗಳಿವೆ. ಸಿಎಲ್2 ಹಾಗೂ ಸಿಎಲ್9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿ ಆರಂಭಿಸುವುದಕ್ಕೆ ಇಲಾಖೆ ಹೊಸ ಲೈಸೆನ್ಸ್ ನೀಡುತ್ತಿದೆ.
1,406 ಸಿಎಲ್7 ಮದ್ಯದಂಗಡಿ: ರಾಜ್ಯದಲ್ಲಿ ಒಟ್ಟು 1,406 ಸಿಎಲ್ 7 ಮದ್ಯದಂಗಡಿ ಹಾಗೂ 1,532 ಪಬ್‌ಗಳಿವೆ. ಇದರಲ್ಲಿ ಶೇ. 90 ಪಬ್‌ಗಳು ಬೆಂಗಳೂರಿನಲ್ಲಿದ್ದರೆ, ಕೆಲ ಜಿಲ್ಲೆಗಳಲ್ಲಿ ಒಂದೂ ಪಬ್‌ಗಳಿಲ್ಲ.
ಸಿಎಲ್7 ಲೈಸೆನ್ಸ್ ಮಾನದಂಡ?ಅಬಕಾರಿ ನಿಯಮಾವಳಿಯಂತೆ ವಸತಿ ಗೃಹದಲ್ಲಿ ತಂಗುವ ಗ್ರಾಹಕರಿಗೆ ಹಾಗೂ ಅವರ ಸಂದರ್ಶಕರಿಗೆ ಮದ್ಯ ಸರಬರಾಜು ಮಾಡಲು ಅವಕಾಶವಿರುತ್ತದೆ. ಆದ್ದರಿಂದ, ಮಹಾನಗರ ಪಾಲಿಕೆ ವ್ಯಾಪ್ತಿಯ ವಸತಿ ಗೃಹದಲ್ಲಿ ಕನಿಷ್ಠ 15 ಡಬಲ್ ರೂಂ, ಇತರೆ ಪ್ರದೇಶಗಳಲ್ಲಿನ ವಸತಿ ಗೃಹದಲ್ಲಿ ಕನಿಷ್ಠ 10 ಡಬಲ್ ರೂಂ, ಹಾಲ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಇರಬೇಕು. ನಿಗದಿತ ಸನ್ನದು ಶುಲ್ಕ ಸಂದಾಯ ಮಾಡಿ ಯಾರು ಬೇಕಾದರೂ ಲೈಸೆನ್ಸ್ ಪಡೆಯಬಹುದು.
ಒಂದು ದಿನದ ಲೈಸೆನ್ಸ್‌ಗಳೂ ಲಭ್ಯ:ಹೊಸ ವರ್ಷ, ಕ್ರಿಸ್‌ಮಸ್ ಸಂದರ್ಭದಲ್ಲಿ ಇಲಾಖೆಯಿಂದ ಒಂದು ದಿನಕ್ಕೆ ಸೀಮಿತ ಲೈಸೆನ್ಸ್‌ಗಳೂ ಸಿಗುತ್ತದೆ. ಆಯಾ ಜಿಲ್ಲಾ ವ್ಯಾಪ್ತಿಯ ಇಲಾಖೆ ಕಚೇರಿಯಲ್ಲಿ ಅರ್ಜಿಗಳು ವಿಲೇವಾರಿ ಆಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three − 2 =
Remember me
