ಬೆಂಗಳೂರು:ನಾವು ಮೈತ್ರಿ ಸರ್ಕಾರ‌ ಕೆಡವಿ ಬಿಜೆಪಿ ಸರ್ಕಾರ ರಚಿಸಿದ್ದೀವಿ ಅನ್ನೋ ಕೋಪ ಹಲವರಲ್ಲಿ ಇದೆ. ಹೀಗಾಗಿ ನಮ್ಮ ವಿರುದ್ಧ ತೇಜೋವಧೆ ಯತ್ನ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಎಸ್​.ಡಿ. ಸೋಮಶೇಖರ್ ಗಂಭೀರ ಆರೋಪ ಮಾಡಿದರು.
ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ಕೋರಿ ಕೋರ್ಟ್​ ಮೆಟ್ಟಿಲೇರಿರುವ ಆರು ಸಚಿವರ ಪೈಕಿ ಸೋಮಶೇಖರ್​ ಕೂಡ ಒಬ್ಬರು. ಈ ಕುರಿತು ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್​, ವಿಡಿಯೋ ಪ್ರಕರಣ ನಮಗೆ ಭೀತಿ ತಂದಿಲ್ಲ. ಆ ಥರ ನಾವು ಯೋಚನೆಯನ್ನೂ ಮಾಡಿಲ್ಲ ಎಂದರು.
ಸದ್ಯಕ್ಕೆ ಆರು ಜನ ಸಚಿವರು ಸಿಕ್ಕಿದ್ರು. ನಾವೆಲ್ಲರೂ ನಮ್ಮ ವಿರುದ್ಧವಾದ ಸುದ್ದಿಯನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್​ಗೆ ಅರ್ಜಿ ಹಾಕಿದ್ದೀವಿ. ಉಳಿದ ಸಚಿವರೂ ಕೋರ್ಟ್​ಗೆ ಅರ್ಜಿ ಹಾಕುತ್ತಾರೆ. ಇಂದು ಅಥವಾ ನಾಡಿದ್ದು(ಸೋಮವಾರ) ಉಳಿದ ಸಚಿವರು ಅರ್ಜಿ ಹಾಕಲಿದ್ದಾರೆ ಎಂದಯ ಎಸ್​.ಟಿ. ಸೋಮಶೇಖರ್ ತಿಳಿಸಿದರು.
ಕೆಲ ಮಾಧ್ಯಮಗಳಲ್ಲಿ ಇರೋಬರೋದೆಲ್ಲ ಹಾಕಿ ಅವಮಾನ ಮಾಡ್ತಾರೆ. ಒಳ್ಳೇದು-ಕೆಟ್ಟದು ಅಂತ ನೋಡಲ್ಲ. ಅದಕ್ಕಾಗಿ ನಾವು ಕೋರ್ಟ್​ಗೆ ಮೊರೆ ಹೋಗಿದ್ದೀವಿ ಎಂದರು.
ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

ಬಿಜೆಪಿ ಶಾಸಕನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರ! ಹಿಂದು ದೇವರ ಪೋಟೋ ನೋಡಿ ಮನೆ ತೊರೆದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 12 =
Remember me
