ಬೆಂಗಳೂರು:ಜಾಗತಿಕ ಆರ್ಥಿಕ ಕುಸಿತದ ಗುಸುಗುಸು, ನೆರೆ ರಾಜ್ಯಗಳ ಪೈಪೋಟಿ, ಹಣದುಬ್ಬರದ ಅಬ್ಬರ ಹೀಗೆ ಹತ್ತು ಹಲವು ಸವಾಲುಗಳ ನಡುವೆ ರಾಜ್ಯ ಸರ್ಕಾರವು ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದ್ದು, ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದೆ.
ಹೂಡಿಕೆಗೆ ಪೂರಕವಾದ ವಾತಾವರಣ, ನಿಯಮಗಳ ಸಡಿಲಿಕೆ, ಪ್ರೋತ್ಸಾಹಕ ಯೋಜನೆಗಳು, ಅಗತ್ಯ ಭೂಮಿ, ನಿರಂತರ ಫಾಲೋಅಪ್​ಗೆ ಅಧಿಕಾರಿಗಳ ನೇಮಕ ಸೇರಿ ವಿವಿಧ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ, ಬುಧವಾರದಿಂದ ಮೂರು ದಿನ ‘ಬಿಲ್ಡ್ ಫಾರ್ ದಿ ವರ್ಲ್ಡ್’ ಪರಿಕಲ್ಪನೆಯ ಸಮಾವೇಶದ ಮೂಲಕ ಹೂಡಿಕೆದಾರರನ್ನು ಎದುರುಗೊಳ್ಳಲು ಸನ್ನದ್ಧವಾಗಿದೆ.
ಬುಧವಾರ (ನ.2) ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿ ಭಾಷಣ ಮಾಡಲಿದ್ದಾರೆ. ಅಂದಾಜು 6 ಲಕ್ಷ ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದ್ದು, ಜಗತ್ತಿನ ಖ್ಯಾತನಾಮ ಉದ್ಯಮಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಕೆಲವು ಜಾಗತಿಕ ಹೂಡಿಕೆದಾರರು ಅಚ್ಚರಿ ಸುದ್ದಿ ನೀಡುವುದಾಗಿ ಸರ್ಕಾರವನ್ನೂ ಸಹ ತುದಿಗಾಲಲ್ಲಿ ನಿಲ್ಲಿಸಿದ್ದಾರೆ.
ವಿಶ್ವದ ಉದ್ದಿಮೆಗಳು ಹೂಡಿಕೆ ಮಾಡಲು ಬೆಂಗಳೂರೇ ಗಮ್ಯವಾಗಿದೆ. ಎಲ್ಲ ಜಾಗತಿಕ ಉದ್ದಿಮೆಗಳ ಹಾದಿಗಳು ಬೆಂಗಳೂರಿಗೆ ಬಂದು ಸೇರುತ್ತಿವೆ. ಮುಂದಿನ 5 ವರ್ಷಗಳ ರಾಜ್ಯದ ಬೆಳವಣಿಗೆಗೆ ಹೂಡಿಕೆದಾರರ ಸಮಾವೇಶ ಭದ್ರ ಬುನಾದಿಯನ್ನು ಹಾಕಲಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಈಗಾಗಲೆ 3.45 ಲಕ್ಷ ಕೋಟಿ ರೂ.ಗಳಷ್ಟು ಹೂಡಿಕೆಗೆ ಪೂರ್ವಾನá-ಮತಿ ಸಿಕ್ಕಿದೆ. ಇನ್ನೂ 2 ಲಕ್ಷ ಕೋಟಿ ಯಷ್ಟು ಹೂಡಿಕೆ ಬರುವ ನಿರೀಕ್ಷೆ ಇದೆ. ಒಟ್ಟಾರೆ 6 ಲಕ್ಷ ಕೋಟಿಗಿಂತ ಹೆಚ್ಚು ಹೂಡಿಕೆಯಾಗುತ್ತದೆ. ಐದಾರು ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಈ ಹೂಡಿಕೆಯಿಂದ ಸೃಷ್ಟಿಯಾಗಲಿವೆ.
|ಮುರುಗೇಶ ನಿರಾಣಿಕೈಗಾರಿಕೆ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − six =
Remember me
