ಬೆಂಗಳೂರು:ರಾಜಧಾನಿಯ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದರು! ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಗರುಡ ಕಮಾಂಡೋ ಪಡೆ ಕೇವಲ ಎರಡೇ ಗಂಟೆಯಲ್ಲಿ ಉಗ್ರರನ್ನು ಸದೆ ಬಡಿಯಿತು. ಇದನ್ನು ಕಂಡು ಒಂದು ಕ್ಷಣ ಬೆಚ್ಚಿ ಬಿದ್ದ ಬೆಂಗಳೂರಿಗರು, ಬಳಿಕ ನಿಜ ಸಂಗತಿ ತಿಳಿದು ನಿರಾಳರಾದರು.
ಆಂತರಿಕ ಭದ್ರತಾ ವಿಭಾಗ (ಐಎಸ್​ಡಿ) ಮತ್ತು ಸಿಸಿಟಿ ಗರುಡ ಪಡೆ ವತಿಯಿಂದ ಬುಧವಾರ ವರ್ಲ್ಡ್ ಟ್ರೇಡ್ ಸೆಂಟರ್, ಶೆರ್ಟನ್ ಗ್ರಾ್ಯಂಡ್ ಹೋಟೆಲ್, ಡಾ.ರಾಜ್​ಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್​ನಲ್ಲಿ ಕಲ್ಪಿತ ಪ್ರದರ್ಶನ ಆಯೋಜಿಸಲಾಗಿತ್ತು.
ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಮೇಲೆ ಉಗ್ರರ ಕಣ್ಣು ಬಿದ್ದಿದೆ. ನಗರದ ಅತ್ಯಂತ ಎತ್ತರದ ಮತ್ತು ಹೆಚ್ಚು ಮಲ್ಟಿ ನ್ಯಾಷನಲ್ ಕಂಪನಿಗಳಿರುವ ಕಟ್ಟಡ ಉಗ್ರರ ಟಾರ್ಗೆಟ್ ಆಗಿತ್ತು. ಶ್ರೀಲಂಕಾ, ಮುಂಬೈ, ಅಮೆರಿಕದಲ್ಲಿ ನಡೆದ ದಾಳಿ ಮಾದರಿಯಲ್ಲೇ ಬುಧವಾರ ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಆರು ಜನ ಉಗ್ರರು ನೀಲಿ ಬಣ್ಣದ ಕಾರಿನಲ್ಲಿ ಬಂದು ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಕಟ್ಟಡದೊಳಗೆ ನುಗ್ಗಿದರು. ಕಟ್ಟಡದ ಒಳಗಿದ್ದ ಉದ್ಯಮಿಗಳಿಗೆ ಗನ್ ತೋರಿಸಿ ವಶದಲ್ಲಿರಿಸಿಕೊಂಡರು. ಈ ಬಗ್ಗೆ ಸ್ಥಳೀಯ ಪೊಲೀಸರು ಕಮಾಂಡೋ ಪಡೆಗೆ ಮಾಹಿತಿ ರವಾನಿಸಿದರು.
ಕೂಡಲೇ ವಿಶೇಷ ವಾಹನದಲ್ಲಿ ಬಂದ ಸಿಸಿಟಿ ಗರುಡ ಪಡೆ ಶಸ್ತ್ರಾಸ್ತ್ರ, ಬುಲೆಟ್ ಫ್ರೂಫ್ ಸಾಮಗ್ರಿಗಳನ್ನು ಹಿಡಿದು ವರ್ಲ್ಡ್ ಟ್ರೇಡ್ ಸೆಂಟರ್, ಶೆರ್ಟನ್ ಗ್ರಾ್ಯಂಡ್ ಹೋಟೆಲ್, ಒರಾಯನ್ ಮಾಲ್​ಗಳನ್ನು ಸುತ್ತುವರಿಯಿತು. ನಂತರ ಬಿಲ್ಡಿಂಗ್ ನೀಲಿನಕ್ಷೆ ತೆಗೆದುಕೊಂಡು ಆಗಮನ ಮತ್ತು ನಿರ್ಗಮನದ ಯೋಜನೆ ರೂಪಿಸಿಕೊಂಡ 150 ಜನರ ಗರುಡ ಕಮಾಂಡೋ ಪಡೆ, ಕಾರ್ಯಾಚರಣೆಗೆ ಇಳಿಯಿತು. ಗರುಡ ಪಡೆಗೆ ಬಾಂಬ್ ಸ್ಕಾ್ವಡ್, ಶ್ವಾನದಳ , ಅಗ್ನಿಶಾಮಕ ದಳ ಸಾಥ್ ನೀಡಿದವು.
ಗುಪ್ತ ಮಾರ್ಗ ಮೂಲಕ ನುಗ್ಗಿದರು
ಕಟ್ಟಡದ ಒಳಗಿದ್ದ ಉಗ್ರರು ಒಳದಾರಿಯ ಮೂಲಕ ಒರಾಯನ್ ಥಿಯೇಟರ್​ಗೆ ಬಂದು ಉದ್ಯಮಿಗಳನ್ನು ಒತ್ತೆಯಾಳಾಗಿಸಿ ಇರಿಸಿಕೊಂಡಿದ್ದರು. ಗರುಡಾ ಪಡೆಗೆ ಇದರ ಸುಳಿವು ಸಿಕ್ಕಿದ ತಕ್ಷಣ ಕಟ್ಟಡದ ಗುಪ್ತ ಮಾರ್ಗದ ಮೂಲಕ ಒರಾಯನ್ ಮಾಲ್ ಥಿಯೇಟರ್ ಒಳಗೆ ಬಂದು ದಾಳಿ ನಡೆಸಿತು. ಸತತ ಎರಡು ಗಂಟೆ ನಡೆದ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಸದೆ ಬಡಿದು ಒತ್ತೆಯಾಳಾಗಿದ್ದ ಉದ್ಯಮಿಗಳನ್ನು ರಕ್ಷಣೆ ಮಾಡಿದ ಗರುಡ ಪಡೆ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + six =
Remember me
