| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಚಿನ್ನಾಭರಣ, ವಾಹನ, ನಗದು ಸೇರಿ ಬೆಲೆ ಬಾಳುವ ವಸ್ತುಗಳು ಕಳ್ಳರ ಪಾಲಾದರೇ ಮತ್ತೆ ಹಿಂದಿರುಗುವುದಿಲ್ಲ ಎಚ್ಚರ. ಕಳ್ಳರ ಕೈ ಸೇರಿದ ವಸ್ತುಗಳ ಪೈಕಿ ಶೇ.40 ಮಾತ್ರ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ. ಉಳಿದ ಶೇ.60 ಪತ್ತೆಯಾಗುತ್ತಿಲ್ಲ.
2019ರಲ್ಲಿ ಮನೆಗಳವು, ವಾಹನ ಕಳವು, ಕನ್ನ ಕಳವು, ದರೋಡೆ, ಸರಗಳವು, ಬ್ಯಾಗ್, ಮೊಬೈಲ್ ಕಳವು ಸೇರಿ ರಾಜ್ಯದಲ್ಲಿ 26,281 ಪ್ರಕರಣಗಳು ದಾಖಲಾಗಿವೆ. ಐಪಿಸಿ ಅಡಿ ದಾಖಲಾಗುವ ಅಪರಾಧ ಪ್ರಕರಣಗಳ ಪೈಕಿ ಬೆಲೆಬಾಳುವ ವಸ್ತುಗಳ ಕಳವು ಕೇಸುಗಳು ಶೇ. 21.87 ಎಂದು ರಾಜ್ಯ ಅಪರಾಧ ಪ್ರಕರಣಗಳ ದಾಖಲಾತಿ ವಿಭಾಗ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖವಾಗಿದೆ.
26,281 ಕಳ್ಳತನ ಪ್ರಕರಣಗಳಲ್ಲಿ 285 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ, ಸರಕು ಸಾಗಣೆ ವಾಹನ, ಬೈಕ್, ಮೊಬೈಲ್, ಲ್ಯಾಪ್​ಟಾಪ್ ಇನ್ನಿತ್ತರ ವಸ್ತುಗಳನ್ನು ಕಳ್ಳರು ಒಂದೊಂದು ರೀತಿಯಲ್ಲಿ ದೋಚಿದ್ದಾರೆ. ಈ ಕುರಿತು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿ ಅಥವಾ ಬಂಧಿಸದೆ 114 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲು ಮಾತ್ರ ಶಕ್ತರಾಗಿದ್ದಾರೆ. ಬಾಕಿ ಶೇ.60 ವಸ್ತುಗಳ ಪತ್ತೆ ಸಾಧ್ಯವಾಗಿಲ್ಲ. 18,840 ಕಳ್ಳತನ ಪ್ರಕರಣಗಳಲ್ಲಿ 123 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಕಳ್ಳರು ದೋಚಿದ್ದು, ಪೊಲೀಸರು 56 ಕೋಟಿ ರೂ. ಮೌಲ್ಯದ ಕಳವು ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಅದೇ ರೀತಿ 5,157 ಕನ್ನಗಳವು ಪ್ರಕರಣಗಳಲ್ಲಿ 134 ಕೋಟಿ ರೂ. ಕಳವಾಗಿದ್ದು, 39 ಕೋಟಿ ರೂ. ಮೌಲ್ಯದ ಆಸ್ತಿ ಮಾತ್ರ ಪತ್ತೆಯಾಗಿದೆ. 1,865 ಸುಲಿಗೆ ಪ್ರಕರಣಗಳಲ್ಲಿ ಕಳ್ಳರು 19 ಕೋಟಿ ರೂ. ಮೌಲ್ಯದ ವಸ್ತು ದೋಚಿದ್ದು, ಆ ಪೈಕಿ ಪೊಲೀಸರು 12 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ದರೋಡೆಕೋರರು 226 ಕೃತ್ಯ ಎಸಗಿದ್ದು, 6 ಕೋಟಿ ರೂ. ಮೌಲ್ಯದ ವಸ್ತು ಕಳವು ಮಾಡಿದ್ದು, ಪೊಲೀಸರು ಐದು ಕೋಟಿ ರೂ. ಮೌಲ್ಯದ ವಸ್ತುಗಳನಷ್ಟೇ ಪತ್ತೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಮನೆ, ಅಂಗಡಿಗಳಲ್ಲೇ ಹೆಚ್ಚು
ಮನೆ, ಅಂಗಡಿ, ವಾಣಿಜ್ಯ ಮಳಿಗೆ ಇನ್ನಿತರ ಕಟ್ಟಡ ಪ್ರದೇಶಗಳಲ್ಲಿ ಕನ್ನಗಳವು ಹೆಚ್ಚಾಗಿದೆ. ಬೀಗ ಒಡೆದು ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚುವುದು ಅಥವಾ ಅಂಗಡಿಗಳಲ್ಲಿ ಚಿನ್ನ, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದೋಚುತ್ತಿದ್ದಾರೆ. ಇಂತಹ ವಾಸಸ್ಥಳ ಆವರಣದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳವಾದ ಸಂಬಂಧ 10,737 ಅಪರಾಧ ಪ್ರಕರಣಗಳು ದಾಖಲಾಗಿವೆ. ರಸ್ತೆಗಳಲ್ಲಿ ಅಡ್ಡಗಟ್ಟಿ ಬೆದರಿಕೆ, ಕೊಲೆ ಅಥವಾ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿರುವ ಸಂಬಂಧ 6,114 ಪ್ರಕರಣಗಳು ದಾಖಲಾಗಿವೆ.
ಕಳವಾದ ವಸ್ತು ಪತ್ತೆ ಕಷ್ಟವೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 18 =
Remember me
