ಮೈಸೂರು:ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್​ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಶಿಲ್ಪಾ ನಾಗ್ ಪರ ವಹಿಸಿ 65 ಕಾರ್ಪೋರೇಟರ್​​ಗಳು ದನಿ ಎತ್ತಿದ್ದು, ಸುದ್ದಿಗೋಷ್ಠಿ ನಡೆಸಿ ತಮ್ಮ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಶಿಲ್ಪಾ ನಾಗ್ ಪರ ವಹಿಸಿ ಸುದ್ದಿಗೋಷ್ಠಿ ನಡೆಸಿದ 65 ಕಾರ್ಪೋರೇಟರ್​ಗಳು, ಇದು ಮೈಸೂರು ಮಹಾನಗರ ಪಾಲಿಕೆಯ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ನಾಗ್ ಮೈಸೂರು ಮಹಾನಗರ ಪಾಲಿಕೆಗೆ ಉತ್ತಮ ಅಧಿಕಾರಿಯಾಗಿದ್ದರು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು, ಒಳ್ಳೆಯ ಕೆಲಸ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸಿರುವ ಕಾರ್ಪೋರೇಟರ್​ಗಳು, ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.
ಸಾಮೂಹಿಕವಾಗಿ ಸರ್ವಪಕ್ಷಗಳ ಕಾರ್ಪೋರೇಟರ್‌ಗಳು ಈ ಆಗ್ರಹ ವ್ಯಕ್ತಪಡಿಸಿದ್ದು, ಒಬ್ಬ ಅಧಿಕಾರಿಗೆ ಇಷ್ಟೆಲ್ಲ ಕಿರುಕುಳ ಕೊಡುತ್ತಿರುವುದು ಸರಿಯಲ್ಲ. ಅವರು ಸಿಎಸ್​ಆರ್​ ಫಂಡ್​ ಉಪಯೋಗಿಸಿದ್ದಾರೆ ನಿಜ. ಅವರೂ ಐಎಎಸ್ ಅಧಿಕಾರಿ ತಾನೇ? ಅವರಿಗೇಕೆ ಇಷ್ಟು ಹಿಂಸೆ ಕೊಟ್ಟಿದ್ದೀರಿ ಎಂದು ಈ ಕಾರ್ಪೋರೇಟರ್​​ಗಳು ರೋಹಿಣಿ ಸಿಂಧೂರಿ ಅವರನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ.
ಶಿಲ್ಪಾನಾಗ್​ ರಾಜೀನಾಮೆಗೆ ಅಸಲಿ ಕಾರಣವೇನು? ರಾಜೀನಾಮೆಗೆ ಒಂದು ದಿನ ಮೊದಲೇ ಬಂದಿತ್ತು ನೋಟಿಸ್​!

ಸಿನಿಮೀಯ ರೀತಿಯಲ್ಲಿ ಗೋರಕ್ಷಣೆ; 1 ಕಿ.ಮೀ. ದೂರ ಕಾರಲ್ಲಿ ರಿವರ್ಸ್ ಹೋಗಿ ಪರಾರಿಯಾದ ದನಗಳ್ಳರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 13 =
Remember me
