ಗಿರೀಶ್ ಗರಗಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ವಲಸೆ ಕಾರ್ವಿುಕರು ಊರಿನ ಹಾದಿ ಹಿಡಿದ ಪರಿಣಾಮ ಹಾಗೂ ಸಿಮೆಂಟ್, ಕಬ್ಬಿಣ ಪೂರೈಕೆಯ ವ್ಯತ್ಯಯದಿಂದಾಗಿ ರಾಜ್ಯದ ನಿರ್ಮಾಣ ಕ್ಷೇತ್ರ ಮಖಾಡೆ ಮಲಗಿದೆ. ಸದ್ಯ ಚಾಲ್ತಿಯಲ್ಲಿರುವ 3 ಸಾವಿರ ಯೋಜನೆ ಗಳೂ ಸೇರಿ ಒಟ್ಟಾರೆ 6 ಸಾವಿರ ನಿರ್ಮಾಣ ಕಾಮಗಾರಿಗಳ ಮುಂದುವರಿಕೆ ಹಾಗೂ ಆರಂಭಕ್ಕೆ ಗ್ರಹಣ ಕವಿದಿದೆ. ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ಮುದ್ರಾಂಕ ಶುಲ್ಕದಿಂದಲೇ ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ. 2019-20ನೇ ಸಾಲಿನಲ್ಲಿ ಫೆಬ್ರವರಿವರೆಗೆ 10 ಸಾವಿರ ಕೋಟಿ ರೂ. ಸಂಗ್ರಹವಾಗಿತ್ತು. 2021-22ರಲ್ಲಿ 12 ಸಾವಿರ ಕೋಟಿ ರೂ. ಗುರಿ ಹೊಂದಲಾಗಿದೆ. ಇದರ ಜತೆಗೆ ಜಿಎಸ್​ಟಿ ಸೇರಿ ಇನ್ನಿತರ ಮೂಲಗಳಿಂದ ಬರುವ ಆದಾಯದ ಮೊತ್ತ 10 ಸಾವಿರ ಕೋಟಿ ರೂ. ದಾಟಲಿದೆ. ನಿರ್ವಣಕ್ಕೆ ಅಗತ್ಯವಿರುವ ಸಿಮೆಂಟ್, ಸ್ಟೀಲ್ ಇನ್ನಿತರ ವಸ್ತು ಮಾರಾಟ ಆಗದಿರುವ ಪರಿಣಾಮ ಜಿಎಸ್​ಟಿಯೂ ಬಂದಿಲ್ಲ.
ಕಾರ್ವಿುಕರ ಕೊರತೆ: ರಾಜ್ಯದಲ್ಲಿದ್ದ ಸುಮಾರು 20 ಲಕ್ಷ ಕಾರ್ವಿುಕರ ಪೈಕಿ ಶೇ. 60ಕ್ಕೂ ಹೆಚ್ಚಿನ ಜನ ಊರುಗಳಿಗೆ ತೆರಳಿದ್ದಾರೆ. ಬೃಹತ್ ಕಟ್ಟಡ ನಿರ್ವಣದಲ್ಲಿ ಶೇ. 80 ಕೆಲಸ ಯಂತ್ರೋಪಕರಣಗಳದ್ದಾದರೆ ಶೇ. 20 ಕಾರ್ವಿುಕರ ಕೆಲಸವಿರಲಿದೆ. ಅಂದಾಜಿನ ಪ್ರಕಾರ 10 ಕೋಟಿ ರೂ. ಮೊತ್ತದ ಯೋಜನೆಯಲ್ಲಿ 2 ಕೋಟಿ ರೂ.ಗಳನ್ನು ಕಾರ್ವಿುಕರಿಗಾಗಿ ಮೀಸಲಿರಿಸಬೇಕಾಗುತ್ತದೆ.
ಇದನ್ನೂ ಓದಿ:ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..
ಸದ್ಯ ನರೇಗಾದಲ್ಲಿ ನಿಗದಿ ಮಾಡಿರುವ ದರವನ್ನು ಕಾರ್ವಿುಕರಿಗೆ ಕೊಡಲಾಗುತ್ತಿದೆ. ಆದರೆ, ಅಷ್ಟು ಹಣಕ್ಕೆ ಕಾರ್ವಿುಕರು ಒಪ್ಪದ ಕಾರಣ ಪುರುಷ ಕಾರ್ವಿುಕರಿಗೆ 800 ರೂ.ನಿಂದ 1 ಸಾವಿರ ರೂ ಮತ್ತು ಮಹಿಳಾ ಕಾರ್ವಿುಕರಿಗೆ 500 ರೂ.ನಿಂದ 700 ರೂ. ಕೂಲಿ ನೀಡಲಾಗುತ್ತಿದೆ. ಹೀಗಾಗಿ ಕಾರ್ವಿುಕರ ಕೂಲಿ ಕೂಡ ಹೆಚ್ಚಳವಾಗುವ ಸಾಧ್ಯತೆಗಳಿವೆ.
6 ತಿಂಗಳು ಸಂಕಷ್ಟ:ಸದ್ಯ ಸರ್ಕಾರ ಕೆಲ ಷರತ್ತು ವಿಧಿಸಿ ನಿರ್ಮಾಣ ಕಾರ್ಯ ಆರಂಭಕ್ಕೆ ಸೂಚಿಸಿದ್ದರೂ ಇನ್ನು ಕನಿಷ್ಠ 6 ತಿಂಗಳು ಸಮರ್ಪಕವಾಗಿ ನಿರ್ಮಾಣ ಕಾರ್ಯ ಶುರುವಾಗುವುದಿಲ್ಲವೆಂಬುದು ತಜ್ಞರ ವಾದ.
ಸಹಾಯವಾಣಿ ಅಗತ್ಯ:ಕಾರ್ವಿುಕರ ಕೊರತೆ ನೀಗಿಸಲು ತಾಲೂಕು ಮಟ್ಟದಲ್ಲಿ ಕಾರ್ವಿುಕರ ಸಹಾಯವಾಣಿ ಆರಂಭಿಸಿ ನೋಂದಣಿ ಮಾಡಿಕೊಳ್ಳುವವರನ್ನು ಅಗತ್ಯವಿರುವೆಡೆ ಕಳಿಸಬೇಕೆಂಬ ಸಲಹೆಗಳೂ ಕೇಳಿಬರುತ್ತಿವೆ.
ಕರೊನಾದಿಂದಾಗಿ ನಿರ್ಮಾಣ ಕ್ಷೇತ್ರದಿಂದ ಸರ್ಕಾರಕ್ಕೆ ಬರುತ್ತಿದ್ದ ಶೇ.30ಕ್ಕೂ ಹೆಚ್ಚಿನ ಆದಾಯವೂ ಕೈತಪ್ಪಿದಂತಾಗಿದೆ.| ಸುರೇಶ್ ಹರಿ,ಕ್ರೆಡಾಯ್ ಬೆಂಗಳೂರು ಅಧ್ಯಕ್ಷ
ಇದನ್ನೂ ಓದಿ:ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!
ಕಚ್ಚಾ ವಸ್ತು ಮಾರಾಟವೂ ಇಲ್ಲ: ರಾಜ್ಯದಲ್ಲಿ ವಾರ್ಷಿಕ 16 ಕೋಟಿ ಟನ್​ಗೂ ಹೆಚ್ಚಿನ ಸಿಮೆಂಟ್, 27 ಕೋಟಿ ಟನ್​ಗೂ ಹೆಚ್ಚಿನ ಸ್ಟೀಲ್, ಕಬ್ಬಿಣ ಸಾಮಗ್ರಿ ಉತ್ಪಾದನೆಯಾಗುತ್ತಿತ್ತು. ಆದರೆ 2 ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಸಿಮೆಂಟ್ ಉತ್ಪಾದನೆಗೆ ಅಗತ್ಯವಿರುವ ಜೆಲ್ಲಿ ಪುಡಿ ಪೂರೈಕೆ ವ್ಯತ್ಯಯವಾಗಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರು, ಉತ್ತರಕನ್ನಡ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಕಲಬುರಗಿಯಲ್ಲಿ ಹೆಚ್ಚಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಸದ್ಯ ಅಲ್ಲೆಲ್ಲ ಗಣಿಗಾರಿಕೆ ಸ್ಥಗಿತಗೊಂಡಿದೆ. ಸರ್ಕಾರದ ಅನುಮತಿಯಿದ್ದರೂ ಗಣಿಗಾರಿಕೆಯನ್ನು ಸಮರ್ಪಕವಾಗಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಕಬ್ಬಿಣದ ಅದಿರು ಗಣಿಗಾರಿಕೆ ಬಳ್ಳಾರಿ, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ರಾಯಚೂರಿನಲ್ಲಿ ನಡೆಯುತ್ತಿದ್ದು, ಅಲ್ಲೂ ಕಾರ್ವಿುಕರು, ಬಂಡವಾಳದ ಕೊರತೆಯಿಂದ ಆರಂಭವಾಗಿಲ್ಲ. ಜತೆಗೆ ಕಾರ್ಖಾನೆಗಳು ಉತ್ಪಾದನಾ ಕಾರ್ಯ ಆರಂಭಿಸಿಲ್ಲ.
ಸಾಕಪ್ಪಾ ಸಾಕು, ಇನ್ನು ಯಾವತ್ತೂ ಕಾಂಗ್ರೆಸ್ ಅಧ್ಯಕ್ಷ ಆಗುವುದಿಲ್ಲ ಎಂದ ರಾಹುಲ್ ಗಾಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
