ಬೆಂಗಳೂರು:ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಕಾರುಗಳನ್ನು ಜಪ್ತಿ ಮಾಡಿದ ಫೈನಾನ್ಶಿಯರ್​ನನ್ನೇ ಅಪಹರಿಸಿ, ನಾಗಮಂಗಲದಲ್ಲಿ ಕೂಡಿಹಾಕಿದ್ದ 7 ಅಪಹರಣಕಾರರನ್ನು ತಿಲಕ್​ನಗರ ಪೊಲೀಸರು ಬಂಧಿಸಿದ್ದಾರೆ.
ಕಿಡ್ನ್ಯಾಪ್​ನಲ್ಲಿ ನಟ ಸುನಾಮಿ ಕಿಟ್ಟಿ ಕೂಡ ಭಾಗಿಯಾಗಿರುವುದು ದೃಢಪಟ್ಟಿದೆ. ವಿದ್ಯಾರಣ್ಯಪುರ ನಿವಾಸಿ ನವೀನ್ ಅಪಹರಣಕಾರರಿಂದ ರಕ್ಷಿಸಲ್ಪಟ್ಟ ಫೈನಾನ್ಶಿಯರ್. ವಿದ್ಯಾರಣ್ಯಪುರದ ಮೋಹನ್ (35), ಜೋಸೆಫ್ (32), ರವಿಕಿರಣ್ (30), ಭರತ್ (32), ಮಹೇಶ್ (32), ನವ್ಯಂತ್ (34), ಬಸವೇಶ್ವರನಗರದ ರಾಜುನನ್ನು (30) ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಾದ ಸುನಾಮಿ ಕಿಟ್ಟಿ, ಮೂರ್ತಿ, ವಿಶ್ವನಾಥ್, ಸತೀಶ್, ಶಿವ ಎಂಬುವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದ್ದಾರೆ.
ನವೀನ್ ಹಳೇ ಕಾರುಗಳ ಮೇಲೆ ಫೈನಾನ್ಸ್ ನೀಡುವ ವ್ಯವಹಾರ ಮಾಡುತ್ತಿದ್ದಾರೆ. ಸಾಲ ಮರುಪಾವತಿಸದಿದ್ದರೆ ಕಾರುಗಳನ್ನು ಜಪ್ತಿ ಮಾಡುತ್ತಾರೆ.
ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಮೂರ್ತಿ, ಸುನಾಮಿ ಕಿಟ್ಟಿ, ವಿಶ್ವನಾಥ್ ಕಡೆಯವರ ಕಾರುಗಳನ್ನು ನವೀನ್ ಜಪ್ತಿ ಮಾಡಿದ್ದ. ಇದೇ ವಿಚಾರವಾಗಿ ನವೀನ್ ಮೇಲೆ ದ್ವೇಷ ಇಟ್ಟುಕೊಂಡಿದ್ದರು. ಗುರುವಾರ ಬೆಳಗ್ಗೆ 11 ಗಂಟೆಯಲ್ಲಿ ನವೀನ್ ಕೋರ್ಟ್​ಗೆ ಹೋಗುವ ಸಲುವಾಗಿ ದೇವರಚಿಕ್ಕನಹಳ್ಳಿಯಲ್ಲಿ ಕ್ಯಾಬ್ ಹತ್ತಿದ್ದರು. ಜಯನಗರದ ಖಾಸಗಿ ಆಸ್ಪತ್ರೆಯೊಂದರ ಸಮೀಪ ಹೋಗುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದಿದ್ದ ಎಂಟತ್ತು ಮಂದಿಯ ಗ್ಯಾಂಗ್ ಕ್ಯಾಬ್​ನಲ್ಲಿದ್ದ ನವೀನ್​ನನ್ನು ಕೆಳಗಿಳಿಸಿ ತಮ್ಮ ಕಾರಿನಲ್ಲಿ ಅಪಹರಿಸಿದ್ದರು.
ಈ ಕುರಿತು ಕ್ಯಾಬ್ ಚಾಲಕ ‘ನಮ್ಮ100’ಗೆ ಕರೆ ಮಾಡಿ ದೂರು ಮುಟ್ಟಿಸಿದ್ದ. ಬಳಿಕ ವಿಷಯವನ್ನು ನವೀನ್ ಪಾಲಕರಿಗೂ ಮಾಹಿತಿ ನೀಡಿದ್ದ. ನವೀನ್​ನ ತಂದೆ ಕೊಟ್ಟ ದೂರಿನ ಮೇರೆಗೆ ಅನುಮಾನಿತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ನವೀನ್​ನನ್ನು ಕಾರಿನಲ್ಲಿ ಅಪಹರಿಸಿ ಕರೆದೊಯ್ದಿರುವ ದೃಶ್ಯ ಕಂಡು ಬಂದಿತ್ತು ಹಾಗೂ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು.
ಆರೋಪಿಗಳ ಫೋನ್ ಲೊಕೇಷನ್ ಪರಿಶೀಲಿಸಿದಾಗ ನಾಗಮಂಗಲದಲ್ಲಿರುವ ಸುಳಿವು ಸಿಕ್ಕಿತ್ತು. ರಾತ್ರಿ ನಾಗಮಂಗಲಕ್ಕೆ ಹೋಗಿ ಸ್ಥಳೀಯ ಪೊಲೀಸರ ನೆರವಿನಿಂದ ಲಾಡ್ಜ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನವೀನ್​ನನ್ನು ರಕ್ಷಿಸಲಾಗಿದೆ. ನವೀನ್ ಎಂಟತ್ತು ಮಂದಿಗೆ ಹಣ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
