ಬೆಂಗಳೂರು:ಬೆಂಗಳೂರಿನ ಹೊರವಲಯದಲ್ಲಿ ಆನೆ ದಂತ ದಂಧೆ ನಡೆಸುತ್ತಿದ್ದ ಕಿಡಿಗೇಡಿಗಳ ಅಕ್ರಮವನ್ನು ತಡದೆ ಕಂದಾಯ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಇದೀಗ ಏಳು ಮಂದಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ಸ್ತ್ರೀ ಸಮಾನತೆಗೆ ಮಹತ್ವ ನೀಡಿದ ರಾಜ್ಯ ಕಾಂಗ್ರೆಸ್ ಸರ್ಕಾರ: ಎಂಎಲ್‌ಸಿ ದಿನೇಶ್ ಗೂಳಿಗೌಡ ಮೆಚ್ಚುಗೆ
ಅಧಿಕಾರಿಗಳು ಮಾರ್ಚ್ 5ರಂದೇ ಆಟೋ ರಿಕ್ಷಾದಲ್ಲಿ ಮೂವರು ಶಂಕಿತರನ್ನು ಹಿಡಿದಿದ್ದರು. ಆರೋಪಿಗಳಿಂದ ಆನೆ ದಂತಗಳನ್ನು ಹೊಂದಿರುವ ದೊಡ್ಡ ಚೀಲವನ್ನು ವಶಪಡಿಸಿಕೊಂಡ ಅಧಿಕಾರಿಗಳು, ಹೆಚ್ಚಿನ ತನಿಖೆ ಕೈಗೊಂಡ ಬಳಿಕ ಅಕ್ರಮ ದಂಧೆಗೆ ಅನುಕೂಲ ಮಾಡಿಕೊಡುತ್ತಿದ್ದ ಇತರ ನಾಲ್ವರನ್ನು ಬಂಧಿಸಲು ಕಾರಣವಾಯಿತು.
ವನ್ಯಜೀವಿ ಸಂರಕ್ಷಣಾ ಕಾಯ್ದೆ (ಡಬ್ಲ್ಯುಪಿಎ) 1972ರ ಸೆಕ್ಷನ್ 50ರ ಪ್ರಕಾರ ಆರೋಪಿಗಳಿಂದ 6.8 ಕೆಜಿ ತೂಕದ ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಎಲ್ಲಾ ಏಳು ಮಂದಿಯನ್ನು ಬಂಧಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯಿದೆಗೆ ಇತ್ತೀಚಿನ ತಿದ್ದುಪಡಿಗಳು, ಏಪ್ರಿಲ್ 1, 2023ರಿಂದ ಜಾರಿಗೆ ಬರುತ್ತವೆ. ದೇಶೀಯ ಅಕ್ರಮ ವನ್ಯಜೀವಿ ವ್ಯಾಪಾರವನ್ನು ತಡೆಯಲು ಡಿಆರ್​ಐಗೆ (DRI) ವರ್ಧಿತ ಅಧಿಕಾರವನ್ನು ನೀಡಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್​ ಕಂಡ ದಕ್ಷಿಣ ಭಾರತದ ಸ್ಟಾರ್​ ನಟರಿವರು!
“2023-2024ರ ಆರ್ಥಿಕ ವರ್ಷದಲ್ಲಿ ಮಾತ್ರ, ಭಾರತದಾದ್ಯಂತ ಡಿಆರ್‌ಐ ಘಟಕಗಳು ಒಟ್ಟು 57.5 ಕೆಜಿ ತೂಕದ ಆರು ದಂತಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿವೆ. ಈ ಕಾರ್ಯಾಚರಣೆಗಳನ್ನು ಚೆನ್ನೈ, ಹೈದರಾಬಾದ್, ಗುವಾಹಟಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ನಡೆಸಲಾಗಿದ್ದು, ವನ್ಯಜೀವಿ ಕಳ್ಳಸಾಗಣೆಯನ್ನು ಎದುರಿಸಲು ಡಿಆರ್‌ಐನ ಅಚಲ ಬದ್ಧತೆಯನ್ನು ಮತ್ತಷ್ಟು ಪ್ರದರ್ಶಿಸುತ್ತದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಗೊಂಡಿದೆ,(ಏಜೆನ್ಸೀಸ್).
ಬಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್​ ಕಂಡ ದಕ್ಷಿಣ ಭಾರತದ ಸ್ಟಾರ್​ ನಟರಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
