ಬೆಳಗಾವಿ:ನಗರದ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಆವರಣದ ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯದ ಹಿಂದಿನ ಕಚೇರಿಯಲ್ಲೇ ಮದ್ಯದ ಪಾರ್ಟಿ ಮಾಡಿದ ಪ್ರಕರಣದಲ್ಲಿ 7 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಡಿಎಚ್‌ಒ ಅವರ ಕಾರು ಚಾಲಕ ಮಂಜುನಾಥ ಪಾಟೀಲ, ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬ ನೌಕರರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ನಿಮ್ಮ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಒಪ್ಪಿಕೊಳ್ತೀರಾ? ಮಹಿಷ ದಸರಾ ಸಂಘಟಕರಿಗೆ ಪ್ರತಾಪ್​ ಸಿಂಹ ಪ್ರಶ್ನೆ
ಪಾರ್ಟಿ ಮಾಡಿರುವ ನೌಕರರಲ್ಲೇ ಒಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಾಂಧಿ ಜಯಂತಿ ದಿನ ಕಚೇರಿಯಲ್ಲೇ ಗಾಂಧೀಜಿ ಭಾವಚಿತ್ರದ ಎದುರು ಕುಡಿದು ಕುಪ್ಪಳಿಸಿದ್ದಾರೆ. ಹಾಡು, ಡಾನ್ಸ್, ಹರಟೆ ಹೊಡೆದಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಗಾಂಧಿ ಜಯಂತಿ ದಿನ ಮದ್ಯ, ಮಾಂಸ ಮಾರಾಟ ನಿಷೇಧವಿರುತ್ತದೆ. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಪಾರ್ಟಿ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

A post shared by Vijayavani (@vijayavanino1)

ಇಲಾಖೆ ಕಚೇರಿಯಲ್ಲಿ ಏಳು ಜನ ಸಿಬ್ಬಂದಿ ಮದ್ಯ ಸೇವಿಸಿರುವುದು ಕಂಡುಬಂದಿದ್ದು, ಅವರನ್ನು ಅಮಾನತು ಮಾಡಲಾಗಿದೆ. ಆದರೆ, ಗಾಂಧಿ ಜಯಂತಿಗಿಂತ ಮೊದಲು ಈ ಪಾರ್ಟಿ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.
ಹಳಿ ತಪ್ಪಿದ ಈಶಾನ್ಯ ಎಕ್ಸ್‌ಪ್ರೆಸ್ : ನಾಲ್ವರು ಸಾವು, ಹಲವರಿಗೆ ಗಾಯ, ಬದಲಾದ ರೈಲು ಮಾರ್ಗಗಳು…ಇಲ್ಲಿದೆ ಸಂಪೂರ್ಣ ಪಟ್ಟಿ

VIDEO | ಉತ್ತರಾಖಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಆದಿ ಕೈಲಾಶ್ ದರ್ಶನ ಪಡೆದು, ಪಾರ್ವತಿ ಕುಂಡದಲ್ಲಿ ಪೂಜೆ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 2 =
Remember me
