ಬೆಂಗಳೂರು:ಒಂದು ನಿಮಿಷದ ಅವಧಿಯಲ್ಲಿ ಬರೋಬ್ಬರಿ 80 ಬಸ್ಕಿ ಹೊಡೆದ ಏಳು ತಿಂಗಳ ಮಗುವೊಂದು ಇದೀಗ ನೋಬೆಲ್​ ವರ್ಲ್ಡ್​ ರೆಕಾರ್ಡ್​ ಪ್ರಶಸ್ತಿ ಸ್ವೀಕರಿಸುವ ಮೂಲಕ ದಾಖಲೆ ನಿರ್ಮಿಸಿದೆ. ರಾಮನಗರ ತಾಲೂಕಿನ ಕೇತೋಹಳ್ಳಿ ಗ್ರಾಮದ ನಿಸರ್ಗ ಬಾಲರಾಜ್​ ದಂಪತಿಯ ಮಗುವಿಗೆ ಈ ಪ್ರಶಸ್ತಿ ಲಭಿಸಿದ್ದು, ಪ್ರಮಾಣಪತ್ರವನ್ನು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಪೋಷಕರಿಗೆ ಹಸ್ತಾಂತರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದನ್ನೂ ಓದಿ:ದಯವಿಟ್ಟು ಬಾಳೆಹಣ್ಣಿನ ಸಿಪ್ಪೆ ಬಿಸಾಡಬೇಡಿ.. ಹೀಗೆ ಮಾಡಿ ನಂತರ ಅದ್ಬುತ ನೋಡಿ..
ಏಳು ತಿಂಗಳ ಈ ಪುಟ್ಟ ಪೋರನ ಹೆಸರು ಸಾತ್ವಿಕ್​ ಬಿ.ಗೌಡ, ಮೊದಲಿನಿಂದಲೂ ಚುರುಕಿನ ಪುಟಾಣಿ. ಪೋಷಕರ ಅಚ್ಚುಮೆಚ್ಚಿನ ಮಗನಾದ ಸಾತ್ವಿಕ್​ ಸಮಯವನ್ನೇ ಮೀರಿಸುವಂತೆ ವೇಗವಾಗಿ ಬಸ್ಕಿ ಹೊಡೆಯುವುದನ್ನು ಕರಗತ ಮಾಡಿಕೊಂಡಿದ್ದಾನೆ. ಒಂದು ನಿಮಿಷದ ಅವಧಿಯೊಳಗೆ 80ರಿಂದ 90 ಬಸ್ಕಿ ಹೊಡೆಯುವ ಅಭ್ಯಾಸವನ್ನು ರೂಢಿಸಿಕೊಂಡು ಇಂದು ದಾಖಲೆಯೊಂದನ್ನು ನಿರ್ಮಿಸಿದ್ದಾನೆ.
ಒಂದು ನಿಮಿಷದಲ್ಲಿ 80 ಬಸ್ಕಿ ಹೊಡೆದ ಪುತ್ರನ ವಿಡಿಯೋವನ್ನು ಪೋಷಕರು ನೋಬೆಲ್​ ವರ್ಲ್ಡ್​ ರೆಕಾರ್ಡ್​​ ವೆಬ್​ಸೈಟ್​ಗೆ ದಾಖಲಿಸಿದ್ದಾರೆ. ಇದಾದ ಬಳಿಕ ಜನವರಿ 17ರಂದು ಮಗುವಿಗೆ ಈ ಪ್ರಶಸ್ತಿ ಒಲಿದುಬಂದಿದೆ. ಅವಾರ್ಡ್​ ಬಂದ ಸಂತಸದಲ್ಲಿ ನಿಸರ್ಗ ಬಾಲರಾಜ್​ ದಂಪತಿ, ಈ ಪ್ರಶಸ್ತಿಯನ್ನು ಎಚ್​.ಡಿ. ಕುಮಾರಸ್ವಾಮಿ ಅವರಿಂದಲೇ ಸ್ವೀಕರಿಸಬೇಕು ಎಂಬ ಮಹದಾಸೆಯಿಂದ ಇಂದು ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
