ಕುಂದಾಪುರ:ಶಾಲೆಯಿಂದ ಮನೆಗೆ ವಾಪಸಾಗುವಾಗ ಕಾಲುಸಂಕದಿಂದ ಕಾಲು ಜಾರಿ ನದಿಗೆ ಬಿದ್ದು ಸೋಮವಾರ ನಾಪತ್ತೆಯಾಗಿದ್ದ ಕಾಲ್ತೋಡು ಗ್ರಾಮದ ಚಪ್ಪರಿಕೆ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸನ್ನಿಧಿಯ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.
ಬೊಳಂಬಳ್ಳಿಯ ಮಕ್ಕಿಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿ, ಸೋಮವಾರ ಸಂಜೆ ಶಾಲೆಯಿಂದ ಬರುವಾಗ ಕಾಲುಸಂಕದಿಂದ ಜಾರಿ ಬಿದ್ದಿದ್ದಳು. ಸೋಮವಾರ, ಮಂಗಳವಾರ ಎರಡು ದಿನ ಹುಡುಕಾಡಿದ್ದರೂ ಈಕೆ ಪತ್ತೆ ಆಗಿರಲಿಲ್ಲ.
ಆದರೆ ಆಕೆ ಬಿದ್ದ ಸ್ಥಳದಿಂದ ಸುಮಾರು 4 ಮೀ. ದೂರದ ಪೊದೆಯ ಮಧ್ಯದಲ್ಲಿ ಇಂದು ಮೃತದೇಹ ಕಂಡು ಬಂದಿದೆ. ಸನ್ನಿಧಿಯ ಪತ್ತೆಗಾಗಿ ಮೂರು ದಿನಗಳಿಂದ ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು, ಈಜುಪಟುಗಳು ನಿರಂತರ ಶೋಧ ಕಾರ್ಯ ನಡೆಸಿದ್ದರು.
ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

ಕಾಲು ಜಾರಿ ಬಿದ್ದ ಸಿದ್ದರಾಮಯ್ಯ; ಅಪಘಾತದಲ್ಲಿ ಗಾಯಗೊಂಡಿದ್ದವರ ಭೇಟಿಗೆ ಬಂದಿದ್ದಾಗ ಘಟನೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
