ಬೆಳಗಾವಿ:ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 4.13 ಲಕ್ಷ ಮೌಲ್ಯದ ಚಿನ್ನಾಭರಣ, 1.14 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸಂಗ್ರಹವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ನಗದು ಹಣ, ಚಿನ್ನಾಭರಣ ಎಣಿಕೆ ಕಾರ್ಯ ಐದು ದಿನಗಳಿಂದ ನಡೆಯುತ್ತಿತ್ತು. ಹುಂಡಿಯಲ್ಲಿ ವಿದೇಶಿ ಕರೆನ್ಸಿ, ಚಿತ್ರವಿಚಿತ್ರ ಭಕ್ತರ ಪತ್ರಗಳು ಪತ್ತೆಯಾಗಿದ್ದವು. ಒಟ್ಟು ಯಲ್ಲಮ್ಮನ ಹುಂಡಿಯಲ್ಲಿ 70 ಲಕ್ಷ ಸಂಗ್ರಹವಾಗಿದೆ.
ಹುಂಡಿಯಲ್ಲಿ ಕೂಡಿಕೆಯಾಗಿದ್ದ ಹಣ ಎಣಿಕೆ ಮಾಡಲಾಗುತ್ತಿತ್ತು. ಈ ವೇಳೆ ಅರಭ್​​ ದೇಶದ ಕರೆನ್ಸಿಗಳು ಪತ್ತೆಯಾಗಿವೆ. ಈ ಕರೆನ್ಸಿಯಲ್ಲಿ ‘ಸೆಂಟ್ರಲ್​​ ಬ್ಯಾಂಕ್​ ಆಫ್​​ ದಿ ಯುನೈಟೆಡ್​​​ ಅರಬ್​​ ಎಮಿರೇಟ್ಸ್​​​’ ಎಂಬ ಹೆಸರಿತ್ತು.
ಹಣದ ಜೊತೆಗೆ ಭಕ್ತರ ಹರಕೆ ಚೀಟಿಗಳು ಪತ್ತೆಯಾಗಿವೆ. ಬೆಳಗಾವಿ ವಿಭಜನೆ ಮಾಡಿ ನಾಲ್ಕು ಜಿಲ್ಲೆ ಮಾಡುವಂತೆ ಬೇಡಿಕೊಂಡಿರುವ ಹರಕೆ ಚೀಟಿಗಳು ಸಿಕ್ಕಿವೆ. ಇನ್ನೂ ಈ ಹರಕೆ ಚೀಟಿಯಲ್ಲಿ ‘ಬೆಳಗಾವಿ ಸೇರಿ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ ಜಿಲ್ಲೆ ಮಾಡಬೇಕು. ಜಿಲ್ಲಾ ವಿಭಜನೆ ಮಾಡಿ ನಾಲ್ಕು ಜಿಲ್ಲೆ ಮಾಡುವಂತೆ, ಜಿಲ್ಲೆ ಶಾಸಕರಿಗೆ, ಸಿಎಂ ಬೊಮ್ಮಾಯಿಗೆ ತಲೆಯಲ್ಲಿ ಬರುವಂತೆ ಮಾಡು ತಾಯಿ’ ಎಂದು ಬರೆದಿರುವ ಭಕ್ತನ ಹರಕೆ ಚೀಟಿ ಸಿಕ್ಕದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಭಾಗಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
