|ಶಿವಾನಂದ ತಗಡೂರುಬೆಂಗಳೂರು
ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಇಂದು (ಜೂ. 18) ಎಪ್ಪತ್ತು ವಸಂತಗಳು ತುಂಬಿದ ಸಂಭ್ರಮ. ಅಮೃತ ಮಹೋತ್ಸವಕ್ಕೆ ಹತ್ತಿರದಲ್ಲಿರುವ ಕರ್ನಾಟಕ ವಿಧಾನಸಭೆ ಈಗಾಗಲೆ ಬೆಳ್ಳಿ ಹಬ್ಬ ಮತ್ತು ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದೆ. ಈಗ ವಿಧಾನಸಭೆ ನಡೆಯುವುದಕ್ಕೆ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಕಲ್ಲಿನ ವಿಧಾನಸೌಧವಿದೆ. ಆದರೆ, ಅಂದು ಅಧಿವೇಶನ ನಡೆಸುವುದಕ್ಕೆ ಸೂಕ್ತವಾದ ಸ್ಥಳ ಇರಲಿಲ್ಲ. ಮಹಾರಾಜರ ಕಾಲದಲ್ಲಿದ್ದ ಪ್ರಜಾಪ್ರತಿನಿಧಿಗಳ ಸಭೆಗಳು ಮೈಸೂರಿನಲ್ಲಿ ನಡೆಯುತ್ತಿದ್ದವು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂತು. ನಾಡಿನ ಮೊದಲ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಕೆ.ಸಿ. ರೆಡ್ಡಿ ಅವರದ್ದು. 1949ರ ಡಿಸೆಂಬರ್ 16ರಂದು ಮೈಸೂರು ಮಹಾರಾಜರು ಪ್ರತಿನಿಧಿ ಮತ್ತು ಶಾಸಕಾಂಗ ಸಭೆಯನ್ನು ವಿಸರ್ಜಿಸಿದರು. 1947ರಲ್ಲಿ ರಚಿತವಾದ ಸಂವಿಧಾನ ರಚನಾ ಸಭೆಯು 1952ರಲ್ಲಿ ಚುನಾವಣೆ ನಡೆಯುವವರೆಗೆ ಮೈಸೂರಿನ ಹಂಗಾಮಿ ಅಸೆಂಬ್ಲಿಯಾಗಿ ಮಾರ್ಪಾಟಾಗಿತ್ತು.
ಅಧಿವೇಶನ ನಡೆದಿದ್ದೆಲ್ಲಿ?:1952ರ ಜೂ.18ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹಳೆಯ ಸಾರ್ವಜನಿಕ ಕಚೇರಿ ಕಟ್ಟಡದ ಸಮ್ಮೇಳನ ಸಭಾಂಗಣದಲ್ಲಿ (ಆಗಿನ ಅಠಾರ ಕಚೇರಿಯೇ ಈಗಿನ ಹೈಕೋರ್ಟ್ ಕಟ್ಟಡ) ಶಾಸಕಾಂಗ ಸಭೆಯ ಮೊದಲ ಅಧಿವೇಶನ ನಡೆಯಿತು. ಸಂವಿಧಾನದಡಿ ರೂಪುಗೊಂಡ ಮೊದಲ ವಿಧಾನಸಭೆಯಲ್ಲಿ 99 ಚುನಾಯಿತ ಮತ್ತು ಒಬ್ಬ ನಾಮನಿರ್ದೇಶಿತ ಸದಸ್ಯರಿದ್ದರು. ರಾಜ್ಯ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ಹಂಗಾಮಿ ಸ್ಪೀಕರ್ ಆಗಿ ವಿ. ವೆಂಕಟಪ್ಪ ನೇಮಕಗೊಂಡಿದ್ದರು. ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದ ಗೌರವ ಕೂಡ ಮೊದಲ ಸ್ಪೀಕರ್ ಆಗಿದ್ದ ವೆಂಕಟಪ್ಪ ಅವರಿಗೆ ಸಲ್ಲುತ್ತದೆ.
ಸ್ಪೀಕರ್ ಸ್ಥಾನಕ್ಕೂ ಸ್ಪರ್ಧೆ:ವಿಧಾನಸಭೆ ಸಮಾವೇಶಗೊಂಡ ಬಳಿಕ ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಸಮಾಜವಾದಿ ಮುಖಂಡ ಶಾಂತವೇರಿ ಗೋಪಾಲಗೌಡ ಮತ್ತು ಎಚ್. ಸಿದ್ದಯ್ಯ ನಡುವೆ ನಡೆದ ಸ್ಪರ್ಧೆಯಲ್ಲಿ ಎಚ್. ಸಿದ್ದಯ್ಯ 74 ಮತ ಪಡೆದು ಜಯಶಾಲಿಯಾದರು. ಆಗ ಅವರನ್ನು ಅಭಿನಂದಿಸಿ ಸಿಎಂ ಕೆಂಗಲ್ ಹನುಮಂತಯ್ಯ ಭಾಷಣ ಮಾಡಿದ್ದು ವಿಶೇಷ.
ರಾಜ್ಯದ ಸಂರಚನೆ:ಮೊದಲು 99 ಸದಸ್ಯರಿಗೆ ಸೀಮಿತವಾಗಿದ್ದ ಸದಸ್ಯರ ಸಂಖ್ಯಾಬಲ ಕ್ರಮೇಣ 224ಕ್ಕೆ ಹಿಗ್ಗಿತು. 1953ರಲ್ಲಿ ಆಂಧ್ರ ರಾಜ್ಯ ರಚನೆಯೊಂದಿಗೆ, ಬಳ್ಳಾರಿ ಜಿಲ್ಲೆಯ ಭಾಗಗಳನ್ನು ಮದ್ರಾಸ್ ರಾಜ್ಯದಿಂದ ಮೈಸೂರು ರಾಜ್ಯಕ್ಕೆ ಸೇರಿಸಿದ್ದರಿಂದ ವಿಧಾನಸಭೆಯ ಬಲ ಹೆಚ್ಚಾಯಿತು. ಮೈಸೂರು ರಾಜ್ಯದ ಮರು-ಸಂಘಟನೆಯ ನಂತರ 1956ರ ನ.1ರಂದು ಹಿಂದಿನ ಬಾಂಬೆ ರಾಜ್ಯದಿಂದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ರಾಜ್ಯದ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಕೂರ್ಗ್​ನ ಒಂದು ಜಿಲ್ಲೆ ಮತ್ತು ತಾಲೂಕು ಮತ್ತು ರಾಜಪ್ರಭುತ್ವದ ರಾಜ್ಯದೊಂದಿಗೆ ಮೈಸೂರು ವಿಧಾನಸಭೆ ಸದಸ್ಯರ ಸಂಖ್ಯೆಯೂ ಹೆಚ್ಚಿತು. 1957ರಲ್ಲಿ 208ರಷ್ಟಿದ್ದ ವಿಧಾನಸಭೆಯ ಬಲವು 1967ರಲ್ಲಿ 216ಕ್ಕೆ ಮತ್ತು 1978ರಲ್ಲಿ 224ಕ್ಕೆ ಏರಿತು.1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಮೊದಲ ಅಧಿವೇಶನ:ಹೊಸದಾಗಿ ವಿಧಾನಸೌಧವನ್ನು ನಿರ್ಮಾಣ ಮಾಡಿದ ಬಳಿಕ ವಿಧಾನಸಭೆಯ ಮೊದಲ ಅಧಿವೇಶನವು 1956 ಡಿ.19ರಂದು ನಡೆಯಿತು.
ಜಂಟಿ ಅಧಿವೇಶನಗಳು:ಮೈಸೂರಿನ ಜಗನ್ಮೋಹನ ಪ್ಯಾಲೇಸ್, ಬೆಂಗಳೂರಿನ ಟೌನ್ ಹಾಲ್ ಮತ್ತು ಸಾರ್ವಜನಿಕ ಕಚೇರಿಗಳ ಕಟ್ಟಡ ಸಂಕೀರ್ಣ ಸಭಾಂಗಣದಲ್ಲಿ ವಿಧಾನಸಭೆಯ ಜಂಟಿ ಅಧಿವೇಶನ ನಡೆಸಿರುವುದು ವಿಶೇಷ.
ಕಾಶಿಯಾತ್ರೆಗೆ ತೆರಳಿದ್ದ ಕನ್ನಡಿಗರು ಅತಂತ್ರ; ರಾಜ್ಯ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಯಾತ್ರಾರ್ಥಿಗಳು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
