| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ದೇಶದ ಎಲ್ಲ ಗ್ರಾಮೀಣ ಕುಟುಂಬಗಳಿಗೆ 2024ರೊಳಗೆ ನಳದ ಮೂಲಕ ಕುಡಿಯುವ ನೀರು ಒದಗಿಸುವ ಜಲಜೀವನ್ ಮಿಷನ್ ಯೋಜನೆಯು ಕಳೆದ ಆರು ತಿಂಗಳಲ್ಲಿ ಮಂದಗತಿಯ ಪ್ರಗತಿ ಸಾಧಿಸಿದ್ದು, ನಿಗದಿತ ಕಾಲಮಿತಿಯಲ್ಲಿ ಗುರಿ ಮುಟ್ಟುವುದು ಅನುಮಾನವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳ್ಳುವ ಯೋಜನೆ ಪ್ರಸ್ತುತ ಶೇ.71.6ರಷ್ಟು ಅನುಷ್ಠಾನವಾಗಿದೆ. ಆದರೆ, ಉಳಿದ ಶೇ.29ರಷ್ಟು ಯೋಜನೆ ಮುಗಿಸಲು ಒಂದು ವರ್ಷವಾದರೂ ಬೇಕಾಗಬಹುದು ಎಂಬ ಅಂದಾಜಿದೆ. ಇದಕ್ಕೆ ಕಳೆದ ಆರು ತಿಂಗಳಲ್ಲಿ ಮಂದಗತಿಯ ಪ್ರಗತಿ ಕಾರಣ ಎಂಬ ವಾದವೂ ಇದೆ. ಕೇಂದ್ರ ಸರ್ಕಾರ ಜಲಜೀವನ ಮಿಷನ್ ಯೋಜನೆಯನ್ನು 2019ರ ಆಗಸ್ಟ್ನಲ್ಲಿ ಘೋಷಿಸಿತ್ತು. ದೇಶಾದ್ಯಂತ ಶೇ.72.10 ಯೋಜನೆ ಅನುಷ್ಠಾನಗೊಂಡಿದೆ ಎಂಬ ಅಂಕಿಸಂಖ್ಯೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.
ಈ ಯೋಜನೆಗೆ ಕೆಲ ರಾಜ್ಯಗಳು ನಿರಾಸಕ್ತಿ ತಾಳಿವೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್​ಗಡದಲ್ಲಿ ಪ್ರಗತಿ ಶೇ.50ನ್ನೂ ದಾಟಿಲ್ಲ. ಕೇರಳ ಕೂಡ ಇದೇ ಪ್ರಗತಿಯ ಆಸುಪಾಸಿನಲ್ಲಿದೆ. ಗ್ರಾಮೀಣ ವಸತಿಗಳಿಗೆ ಸುಸ್ಥಿರ ಜಲಮೂಲಗಳಿಂದ ನಲ್ಲಿ ಸಂಪರ್ಕ ಕಲ್ಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಂತರ್ಜಲ ಮತ್ತು ಮೇಲ್ಮೈ ಜಲಮೂಲಗಳಿಂದ ಏಕ ಗ್ರಾಮ ಮತ್ತು ಬಹು ಗ್ರಾಮ ಯೋಜನೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ವರ್ಷವಾರು ಪ್ರಗತಿ
ಜಲ ಜೀವನ್ ಮಿಷನ್ ಯೋಜನೆಯಡಿ ರಾಜ್ಯದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಸಾಧಿಸಿದ ಪ್ರಗತಿ ವಿವರ ಈ ರೀತಿ ಇದೆ.
* 2020-21:23.60 ಲಕ್ಷ ಸಂಪರ್ಕ ಗುರಿ, 3.43 ಲಕ್ಷ ಸಾಧನೆ (ಶೇ.14.55)
* 2021-22:31.98 ಲಕ್ಷ ಸಂಪರ್ಕ ಗುರಿ, 18.70 ಲಕ್ಷ ಸಾಧನೆ (ಶೇ.58.47)
* 2022-23:25.17 ಲಕ್ಷ ಸಂಪರ್ಕ ಗುರಿ, 20.56 ಲಕ್ಷ ಸಾಧನೆ (ಶೇ.81.68)
* 2023-24ರ ನವೆಂಬರ್ ವರೆಗೆ:25 ಲಕ್ಷ ಸಂಪರ್ಕ, 4.08 ಲಕ್ಷ ಸಾಧನೆ (ಶೇ.16.32)
ಬಹುಗ್ರಾಮ ಯೋಜನೆಗಳುಬಾಗಲಕೋಟೆ-5, ಬಳ್ಳಾರಿ- 16, ಬೆಳಗಾವಿ- 4, ಬೆಂಗಳೂರು ಗ್ರಾಮಾಂತರ-1, ಬೆಂಗಳೂರು ನಗರ- 2, ಬೀದರ್-9, ಚಾಮರಾಜನಗರ- 2, ಚಿಕ್ಕಬಳ್ಳಾಪುರ- 5, ಚಿಕ್ಕಮಗಳೂರು- 9, ಚಿಕ್ಕೋಡಿ- 9, ಚಿತ್ರದುರ್ಗ- 5, ದಕ್ಷಿಣ ಕನ್ನಡ- 7, ದಾವಣಗೆರೆ- 6, ಧಾರವಾಡ- 1, ಗದಗ-0, ಹಾಸನ- 7, ಹಾವೇರಿ- 3, ಕಲಬುರಗಿ- 12, ಕೊಡಗು-0, ಕೋಲಾರ-0, ಕೊಪ್ಪಳ- 3, ಮಡ್ಯ- 6, ಮೈಸೂರು- 14, ರಾಯಚೂರು- 1, ರಾಮನಗರ- 3, ಶಿವಮೊಗ್ಗ- 13, ತುಮಕೂರು- 2, ಉತ್ತರ ಕನ್ನಡ- 7, ಉಡುಪಿ- 2, ವಿಜಯನಗರ- 3, ವಿಜಯಪುರ- 2, ಯಾಗಿರಿ- 1
* 9 ರಾಜ್ಯಗಳು ಶೇ.100 ಪ್ರಗತಿ ಸಾಧಿಸಿವೆ
* ಶೇ.75ಕ್ಕಿಂತ ಹೆಚ್ಚಿನ ಪ್ರಗತಿಯಲ್ಲಿರುವ ರಾಜ್ಯಗಳು 11
* ಶೇ. 50ರಿಂದ 75ರ ವರೆಗಿನ ಪ್ರಗತಿಯಲ್ಲಿರುವ ರಾಜ್ಯಗಳು 11. ಇದರಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ.
* ಬಂಗಾಳದಲ್ಲಿ ಅತಿ ಕಡಿಮೆ ಪ್ರಗತಿ ಸಾಧಿಸಿದ್ದು, ಶೇ.40ರಷ್ಟು ಮಾತ್ರ ಅನುಷ್ಠಾನವಾಗಿದೆ.
* ರಾಜಸ್ಥಾನ, ಜಾರ್ಖಂಡ್ ಕೂಡ ಬಹಳ ಹಿಂದುಳಿದಿವೆ
* ಕೇರಳದಲ್ಲೂ ಸಹ ಶೇ.51ರಷ್ಟು ಪ್ರಗತಿಯಾಗಿದೆ.
ತನಿಖೆರಾಜ್ಯದ ವಿವಿಧ ಕಡೆ ಯೋಜನೆ ಜವಾಬ್ದಾರಿ ತೆಗೆದುಕೊಂಡ ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆಂದು ಅನೇಕ ಶಾಸಕರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸೂಚನೆ ನೀಡಿದೆ. ಒಂದೂವರೆ ಸಾವಿರದಷ್ಟು ಸ್ಯಾಂಪಲ್ ಪರೀಕ್ಷೆ ನಡೆಸಿ ನಿಗದಿತ ರೀತಿಯಲ್ಲಿ ಕಾಮಗಾರಿ ನಡೆದಿದೆಯೇ ಎಂದು ವರದಿ ತರಿಸಿ ಬಳಿಕ ಮುಂದಿನ ಕ್ರಮಕೈಗೊಳ್ಳಲಿದೆ. ಅಲ್ಲದೇ ಇನ್ನೂ ದೂರುಗಳಿದ್ದರೆ ನೇರವಾಗಿ ತಮಗೆ ಸಲ್ಲಿಸಿ ಎಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕರನ್ನು ಗ್ರಾಮೀಣಾಭಿವೃದ್ಧಿ ಸಚಿವರು ಕೋರಿದ್ದರು.
ಪ್ರಸ್ತುತ ಪ್ರಗತಿರಾಜ್ಯದಲ್ಲಿ 1,01,17,000 ಗ್ರಾಮೀಣ ಮನೆಗಳಿವೆ. ಜಲ ಜೀವನ್ ಮಿಷನ್ ಯೋಜನೆ ಪ್ರಾರಂಭದಲ್ಲಿ 2019ರ ಆಗಸ್ಟ್ 1ರವರೆಗೆ 24.51ಲಕ್ಷ ಮನೆಗಳಿಗೆ ನಳ ಸಂಪರ್ಕ ಹೊಂದಿದ್ದವು. ಈ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗಿದ್ದು, ಒಟ್ಟಾರೆ 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆ. ಈ ಯೋಜನೆಯಡಿ ರಾಜ್ಯಾದ್ಯಂತ 160 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಒಟ್ಟು 45,559 ನಳ ನೀರು ಸರಬರಾಜು ಕಾಮಗಾರಿಗಳನ್ನು ಯೋಜಿಸಲಾಗಿದ್ದು, 14,839 ಕಾಮಗಾರಿಗಳು ಮುಕ್ತಾಯ ಗೊಂಡಿದ್ದು, 12,045 ಪ್ರಗತಿ ಯಲ್ಲಿವೆ. ಉಳಿದ 15,675 ಕಾಮ ಗಾರಿಗಳು ಟೆಂಡರ್ ಹಂತದಲ್ಲಿವೆ.
ನನ್ನನ್ನು ಹೊರ ಕಳುಹಿಸಿ ತಾಯಿಯನ್ನು ಕರೆದು… ಖ್ಯಾತ ನಿರ್ದೇಶಕನ ಮುಖವಾಡ ಕಳಚಿದ ನಟಿ ಯಶಿಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
