ಬೆಂಗಳೂರು :ಬೆಂಗಳೂರು ನಗರ ಪೊಲೀಸ್​ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೇ.77.90 ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ನೀಡಲಾಗಿದೆ. ನಗರದಲ್ಲಿ ಸಿವಿಲ್​, ಸಂಚಾರ, ಮೀಸಲು ಪಡೆ, ತಾಂತ್ರಿಕ ವಿಭಾಗ ಸೇರಿದಂತೆ 26 ಘಟಕಗಳಲ್ಲಿ 18,821 ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ 17,892 ಮಂದಿ ಮೊದಲ ಡೋಸ್​ ಲಸಿಕೆ ಪಡೆದಿದ್ದು, 14,664 ಮಂದಿ (ಶೇ.77.90) ಲಸಿಕೆಯ 2ನೇ ಡೋಸ್​ ಕೂಡ ಪಡೆದಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ನಗರದ ಪೊಲೀಸರಲ್ಲಿ ಈವರೆಗೆ 946 ಮಂದಿಗೆ ಕರೊನಾ ಸೋಂಕು ದೃಢವಾಗಿದೆ. ಇದರಲ್ಲಿ 754 ಆ್ಯಕ್ಟೀವ್​ ಪ್ರಕರಣಗಳಾಗಿವೆ. ಈ ಪೈಕಿ ಒಬ್ಬರು ಐಸಿಯುನಲ್ಲಿದ್ದರೆ, ಮತ್ತೊಬ್ಬರು ಆಮ್ಲಜನಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 29 ಮಂದಿ ಆಸ್ಪತ್ರೆಯಲ್ಲಿ ಇದ್ದರೆ, 723 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಲ್ಲಿ 14 ಮಂದಿ ಮೊದಲ ಡೋಸ್​ ಲಸಿಕೆ ಪಡೆದವರಿದ್ದಾರೆ, 15 ಮಂದಿ 2ನೇ ಡೋಸ್​​ ಲಸಿಕೆ ಸಹ ಪಡೆದಿದ್ದಾರೆ.
ಇದನ್ನೂ ಓದಿ:ಮದುವೆ ಮಂಟಪ ದಾಳಿ : ಎರ್ರಾಬಿರ್ರಿ ವರ್ತಿಸಿದ ಡಿಎಂ ಸಸ್ಪೆಂಡ್
ಸಿವಿಲ್​, ಸಂಚಾರ ವಿಭಾಗದ ಪೊಲೀಸರು ಶೇ.90 ಮಂದಿ ಎರಡೂ ಡೋಸ್​ ಪಡೆದಿದ್ದಾರೆ. ಸಿಸಿಬಿ ವಿಭಾಗದ 60 ಮಂದಿಯಲ್ಲಿ 59 ಮಂದಿ ಎರಡು ಹಂತದ ಲಸಿಕೆ ಪಡೆದಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಭದ್ರತೆಗೆ ನಿಯೋಜನೆಗೊಂಡಿರುವ 107 ಮಂದಿ ಪೊಲೀಸರಲ್ಲಿ ಕೇವಲ 59 ಮಂದಿ ಮಾತ್ರ ಕೋವ್ಯಾಕ್ಸಿನ್​ ಪಡೆದಿದ್ದಾರೆ. ಇನ್ನೂ ಅರ್ಧದಷ್ಟು ಮಂದಿ ಲಸಿಕೆ ಕಡೆ ಮುಖಾನೇ ಮಾಡಿಲ್ಲ ಎಂದು ಪೊಲೀಸ್​ ಇಲಾಖೆ ಮಾಹಿತಿ ನೀಡಿದೆ.
ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ

ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 20 =
Remember me
