ಬೆಂಗಳೂರು:ಸೋಲೆಂಬುದು ಗೆಲುವಿನ ಸೋಪಾನ ಎಂಬ ಮಾತನ್ನು ಸಮರ್ಪಕವಾಗಿ ಕಾಣುವುದೇ ಕ್ರೀಡೆಯಲ್ಲಿ. ಯಾಕೆಂದರೆ ಇಲ್ಲಿ ಸೋಲು ಗೆಲುವು ಸಾಮಾನ್ಯವಾದ ಸಂಗತಿ. ನಾನು ಕ್ರೀಡೆಯಲ್ಲಿ ಗೆದ್ದದ್ದಕ್ಕಿಂತ ಸೋತಿದ್ದೇ ಹೆಚ್ಚು. ಈ ಕ್ರೀಡೆಯೆಂಬುದು ನನ್ನ ವೃತ್ತಿಗೆ ತುಂಬ ಸಹಾಯಕವಾಯಿತು ಎಂದು ಮಾನವ ಹಕ್ಕುಗಳ ಆಯೋಗದ ಆಯುಕ್ತ ಸುಧೀರ್ ಹೆಗಡೆ ಹೇಳಿದರು.
ಇದನ್ನೂ ಓದಿ:ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನ; ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ಸಂತಾಪ…
ಇಂದು ನಗರದ ಅಂಜನಾಪುರದ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆಗಸ್ಟ್ 5 ಮತ್ತು 6 ರಂದು ಎರಡು ದಿನಗಳ ಕಾಲ ನಡೆದ 2023ನೇ ಸಾಲಿನ 7ನೇ ಹವ್ಯಕ ಬ್ಯಾಟ್‌ಮಿಂಟನ್ ಟೂರ್ನ್ಮೆಂಟನಲ್ಲಿ ಸುಧೀರ್ ಹೆಗಡೆ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೇಳೆ ಮಾತನಾಡಿದರು.
ಬಹುತೇಕ ಕ್ರೀಡಾಪಟುಗಳು ಜೀವನದಲ್ಲಿ ಸೋತೆ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರೂಪ. ಯಾಕೆಂದರೆ ಇಲ್ಲಿ ಗೆಲುವಿಗಿಂತ ಸೋಲು ಸಾಮಾನ್ಯವಾದದ್ದು. ಹಾಗಾಗಿ ಜೀವನಕ್ಕೆ ಆಟ ಬೇಕೇ ಬೇಕು. ಕ್ರೀಡೆಯಲ್ಲಿ ತೊಡಗಿದವರಿಗೆ ಧೈರ್ಯ ಜಾಸ್ತಿ ಎಂದೂ ಅಭಿಪ್ರಾಯಪಟ್ಟರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೀಪೋಸ್ ಮ್ಯಾಟ್ರಸ್‌ನ ಸಿಒಒ ರಾಮನಾಥ್ ಭಟ್ ಹಾಗೂ ಹಿರಿಯ ಆಟಗಾರ ವಿಶ್ವನಾಥ ಹೆಗಡೆ ಉಪಸ್ಥಿತರಿದ್ದರು. ಜಗದೀಶ್ ಹೊಸಬಾಳೆ ಸ್ವಾಗತಿಸಿದರು. ಕಮಲಾಕರ ಕೆ.ಎಸ್. ವಂದಿಸಿದರು.
ಇದನ್ನೂ ಓದಿ:ಈ ಚಿತ್ರ ನನಗೆ ಮರು ಜನ್ಮ ನೀಡಿದೆ; ಭಾವುಕರಾದ ನಿರ್ದೇಶಕ ಮೆಹರ್​ ರಮೇಶ್​
ಈ ಹಬ್ಯಾ ಟೂರ್ನ್ಮೆಂಟ್‌ನ ಪ್ರಾಯೋಜಕತ್ವವನ್ನು ರೀಪೋಸ್ ಮ್ಯಾಟ್ರೆಸ್ ವಹಿಸಿಕೊಂಡಿದ್ದರೆ, ಆಸ್ಟರ್ ಆರ್. ವಿ. ಆಸ್ಪತ್ರೆ ವೈದ್ಯಕೀಯ ಪಾಲದಾರತ್ವವನ್ನು ವಹಿಸಿಕೊಂಡಿತ್ತು. 2023ನೇ ಸಾಲಿನ 7ನೇ ಹವ್ಯಕ ಬ್ಯಾಟ್‌ಮಿಂಟನ್ ಟೂರ್ನ್ಮೆಂಟ್‌ನಲ್ಲಿ ವಿಜೇತರಾದವರ ಪಟ್ಟಿ ಇಲ್ಲಿದೆ.
ಓಪನ್ ಸಿಂಗಲ್ಸ್:ವಿನರ್ – ಗುರುರಾಜ್ರನ್ನರ್ – ಅಖಿಲ್ ಹೆಗಡೆ
ಪುರುಷರ ಓಪನ್ ಡಬಲ್ಸ್:ವಿನರ್- ಮುರಳಿ ಹೆಗಡೆ ಮತ್ತು ಅಖಿಲ್ ಹೆಗಡೆರನರ್ – ನಿರಂಜನ್ ಹೆಗಡೆ ಮತ್ತು ಪ್ರವೀಣ್ ಹೆಗಡೆ
16 ವರ್ಷದೊಳಗಿನ ಮಿಶ್ರ ಡಬಲ್ಸ್:ವಿನರ್ – ಕ್ಷಿತಿಜ್ ಭಟ್ ಮತ್ತು ಪ್ರಾಂಜಲಾ ನಿಸರ್ಗರನರ್ – ತೃಶಾ ಎಮ್. ಹೆಗಡೆ ಮತ್ತು ದಿಗಂತ್ ಎಸ್. ಹೆಗಡೆ
60+ ಪುರುಷರ ಸಿಂಗಲ್ಸ್:ವಿನರ್ – ಡಾ. ಸುಬ್ಬರಾವ್ರನರ್ – ರಾಘವೇಂದ್ರ ಎಂ.ಎಸ್.
ಮಹಿಳೆಯರ ಡಬಲ್ಸ್ (30+):ವಿನರ್ -ರಶ್ಮಿ ಭಟ್ ಮತ್ತು ಸೌಮ್ಯರನ್ನರ್ – ಅಕ್ಷತಾ ಎಂ.ಕೆ. ಮತ್ತು ಮುಧುಮತಿ
ಮಹಿಳೆಯರ ಸಿಂಗಲ್ಸ್ (35+):ವಿನ್ನರ್ – ಸ್ಮಿತಾ ನಟರಾಜ್ರನ್ನರ್ – ಅಕ್ಷತಾ ಎಂ.ಕೆ.
ಮಹಿಳೆಯರ ಓಪನ್ ಡಬಲ್ಸ್:ವಿನ್ನರ್ – ಸಂಪೂರ್ಣ ಭಟ್ ಮತ್ತು ಸಾಧನಾ ಭಟ್ರನ್ನರ್ – ಶಾಂತಾ ಹೆಗಡೆ ಮತ್ತು ಸುಗಂಧಿ
ಮಹಿಳೆಯರ ಓಪನ್ ಸಿಂಗಲ್ಸ್:ವಿನ್ನರ್ – ಸಂಪೂರ್ಣ ಭಟ್ರನ್ನರ್ – ಸುಪ್ರಿಯಾ ಜಾನಾ
ಯುವತಿಯರ ಸಿಂಗಲ್ಸ್ (16 ವರ್ಷದೊಳಗೆ):ವಿನ್ನರ್ – ಪ್ರಾಂಜಲಾ ನಿಸರ್ಗರನ್ನರ್ – ವೈಭವ ಕೆ.ಆರ್.
ಯುವಕರ ಸಿಂಗಲ್ಸ್ ( 16 ವರ್ಷದೊಳಗೆ):ರನ್ನರ್ – ಕ್ಷಿತಿಜ ಭಟ್ವಿನ್ನರ್ – ಶ್ರೀಶ ಯು. ಹೊಸಮನೆ
ಮಿಶ್ರ ಡಬಲ್ಸ್ ಓಪನ್:ವಿನ್ನರ್ – ಸಾತ್ವಿಕ್ ಭಟ್ ಮತ್ತು ವರ್ಷಾ ಭಟ್‌ಗರನ್ನರ್ – ಸಂಪೂರ್ಣ ಭಟ್ ಮತ್ತು ಅಖಿಲ್ ಹೆಗಡೆ
ಮಿಶ್ರ ಡಬಲ್ಸ್ ( 40+):ವಿನ್ನರ್ -ವಿನೀತ್ ಭಟ್ ಮತ್ತು ವರ್ಷ ಭಟ್ರನ್ನರ್ – ಅರ್ಪಣಾ ಹೆಗಡೆ ಮತ್ತು ಅಖಿಲ್ ಹೆಗಡೆ
ಪುರುಷರ ಡಬಲ್ಸ್ (60+):ವಿನ್ನರ್ – ರಾಘವೇಂದ್ರ ಎಂ.ಎಸ್. ಮತ್ತು ಹಿರಣ್ಯ ಭಟ್ರನ್ನರ್ – ಸುಬ್ಬಪ್ಪಯ್ಯ ವೈದ್ಯ ಮತ್ತು ಸುಬ್ಬರಾವ್
ಪುರುಷರ ಡಬಲ್ಸ್ (50+):ವಿನ್ನರ್ – ಕೃಷ್ಣಮೂರ್ತಿ ಎಸ್.ಪಿ. ಮತ್ತು ವಿನೀತ್ ಭಟ್ರನ್ನರ್ – ಡಾ. ದಿನೇಶ್ ಹೆಗಡೆ ಮತ್ತು ಡಾ. ರಮೇಶ್ ಹೆಗಡೆ
ಪುರುಷರ ಸಿಂಗಲ್ಸ್ (50+):ವಿನ್ನರ್ – ಗಂಗಾಧರ ಸಿ. ಹೆಗಡೆರನ್ನರ್ – ಮೋಹನ್ ಶ್ರೀನಿವಾಸ ಸಾಯಾ
ಮಿಶ್ರ ವಯಸ್ಸಿನ ಪುರುಷರ ಡಬಲ್ಸ್:ವಿನ್ನರ್ – ಪ್ರದೀಪ್ ಮತ್ತು ಕಿರಣ್ ಜಯಮೂರ್ತಿ ಭಟ್ರನ್ನರ್ – ಗುರುರಾಜ್ ಎನ್. ಹೆಗಡೆ ಮತ್ತು ಡಾ. ದಿನೇಶ್ ಹೆಗಡೆ
ಪುರುಷರ ಸಿಂಗಲ್ಸ್ (35+):ವಿನ್ನರ್ – ಅಶ್ವಿನ್ ಕುಮಾರ್ ಭಟ್ರನ್ನರ್ – ಸುಶರ್ಮ ಕೆ.ಎಸ್.
ಪುರುಷರ ಡಬಲ್ಸ್ (35+):ವಿನ್ನರ್ – ಅಶ್ವಿನ್ ಕುಮಾರ್ ಭಟ್ ಮತ್ತು ಭೂಷಣ್ ಅಮಚಿರನ್ನರ್ – ಸಂದೇಶ್ ಕುಮಾರ್ ಎಚ್.ಕೆ ಮತ್ತು ಮನೋಜ್ ಶಿಲಗೆರಮನೆ

ಫೋಟೋ ಕ್ಯಾಪ್ಷನ್: (ಎಡದಿಂದ ಬಲಕ್ಕೆ) ಬಾಲು, ವಿಶ್ವನಾಥ ಹೆಗಡೆ, ಜಗದೀಶ್ ಹೊಸಬಾಳೆ, ಸೂರಜ್ ಹೆಗಡೆ (ಡಿವೈಎಸ್ಪಿ) ಗುರುರಾಜ ಹೆಗಡೆ (ಪುರುಷರ ವಿನರ್ ಸಿಂಗಲ್ಸ್) ಅಖಿಲ್ ಹೆಗಡೆ (ರನ್‌ರಅಪ್) ಕಮಲಾಕರ ಕೆ.ಎಸ್., ರಾಷ್ಟ್ರಮಟ್ಟದ ಆಟಗಾರ ಜೈರಾಮ್ ಪೈ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
