
ಬೆಂಗಳೂರು:ಸರ್ಕಾರಿ ನೌಕರರ 7 ವೇತನ ಆಯೋಗದ ಶಿಫಾರಸ್ಸನ್ನು ಸರ್ಕಾರ ಜಾರಿ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ವಿರೋಧ ಪಕ್ಷದ ಸದಸ್ಯರು ಇನ್ನುಳಿದ ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಬಿಜೆಪಿ ಸದಸ್ಯ ಎಸ್.ವಿ.ಸಂಕನೂರು ಮತ್ತು ಶಶೀಲ್ ಜಿ ನಮೋಶಿ ಮಾತನಾಡಿ, ನಿಮ್ಮದೇ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಿದ್ದ ಒಪಿಎಸ್ ಜಾರಿ ಮಾಡಿಲ್ಲ. ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ರಚನೆಗೆ ಆಗಿ ಒಂದುವರೆ ವರ್ಷಗಳು ಕಳೆದರೂ ಒಂದು ಸಭೆ ಆಗಿಲ್ಲ ಎಂದರು. ಕೇಂದ್ರ ಸರ್ಕಾರ ಹರಿಯರ್ಸ್ ಕೊಡ್ತಾ ಇರುವ ರೀತಿಯಲ್ಲಿ ರಾಜ್ಯ ಸರ್ಕಾರ ಯಾಕೆ ಕೊಡ್ತಾ ಇಲ್ಲ ಎಂದು ಪ್ರಶ್ನಿಸಿದರು.ಬಿಜೆಪಿಯ ಪ್ರತಾಪ ಸಿಂಹ ನಾಯ್ಕ ಮಾತನಾಡಿ, ಸರ್ಕಾರದ ನಿರ್ಣಯ ಅಭಿನಂದನೆ ಸಲ್ಲಿಸುತ್ತೇನೆ.ಪೂರ್ತಿ ಅಭಿನಂದನೆಗಳು ನೀವೇ (ಸರ್ಕಾರ) ತೆಗೆದುಕೊಳ್ಳಬೇಡಿ. ಯಾಕೆಂದರೆ ಮಧ್ಯಂತರ ಶೇ.17ರಷ್ಟು ಏರಿಕೆ ನಮ್ಮ ಸರ್ಕಾರ ಮಾಡಿದೆ. ಈ ಅಭಿನಂದನೆ ನಮಗೂ ಸಲ್ಲಬೇಕು ಎಂದರು.ಸಭಾನಾಯಕ ಬೋಸರಾಜು ಮಾತನಾಡಿ, ಪ್ರತಿಪಕ್ಷ ಸದಸ್ಯರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅವರಿಗೂ ನಾವು ಅಭಿನಂದನೆ ಸಲ್ಲಿಸುತ್ತೇವೆ.ನಮ್ಮ ಪ್ರಣಾಳಿಕೆಯಲ್ಲಿ ಒಪಿಎಸ್ ಜಾರಿ ಬಗ್ಗೆ ಹೇಳಿದ್ದು, ಅದರಂತೆ ಸಮಿತಿ ರಚನೆ ಆಗಿದೆ. ಸಮಿತಿಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ಆದಷ್ಟು ಬೇಗ ವರದಿ ತರಿಸುತ್ತೇವೆ ಎಂದರು.ಕೇಂದ್ರ ಸರ್ಕಾರವೂ ಒಂದು ಸಮಿತಿ ರಚನೆ ಮಾಡಿದೆ. ಅವರು ಕೂಡ ಸಮಿತಿಯ ವರದಿಗಾಗಿ ಕಾಯುತ್ತಿದ್ದಾರೆ ಎಂದರು.ಚರ್ಚೆ ಮುಂದುವರಿದಿದ್ದಾಗ ಮಧ್ಯ ಪ್ರವೇಶಿಸಿದ ಸಭಾಪತಿ, ಅರ್ಧ ಗಂಟೆ ಚರ್ಚೆಗೆ ಪತ್ರ ಕೊಡಿ ಚರ್ಚೆ ಅವಕಾಶ ಕೊಡ್ತೇನೆ ಎಂದಾಗ ಚರ್ಚೆಗೆ ತೆರೆ ಬಿತ್ತು.
2243 ಹುದ್ದೆಗಳ ನೇಮಕಾತಿಗೆ ಕ್ರಮ:ಲೋಕಸೇವಾ ಆಯೋಗದ ಮೂಲಕ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 2243 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಬಿಜೆಪಿಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಲೋಕಸೇವಾ ಆಯೋಗದಲ್ಲಿ 380 ಹುದ್ದೆಗಳು ಮಂಜೂರಾಗಿದ್ದು, 210 ಹುದ್ದೆಗಳು ತೆರವಾಗಿವೆ. 88 ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದರೂ, 122 ಹುದ್ದೆ ಖಾಲಿ ಇದೆ. ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲ್ಮನೆಯಲ್ಲಿ ಸಿಎಂ ಪರವಾಗಿ ಬೋಸರಾಜು ಉತ್ತರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
