ಗದಗ:ಒಂದೇ ಕುಟುಂಬದ ನಾಲ್ವರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ವಿಕಾಸಕುಮಾರ್​, ಪ್ರಕಾಶ ಬಾಕಳೆ ಅವರ ಮೊದಲನೇ ಪತ್ನಿಯ ಪುತ್ರ ವಿನಾಯಕ ಬಾಕಳೆ ಮುಖ್ಯ ಆರೋಪಿ. ಕೊಲೆ ಸುಪಾರಿಗೆ 65 ಲಕ್ಷ ರೂ. ಡೀಲ್ ಆಗಿತ್ತು. 2 ಲಕ್ಷ ಅಡ್ವಾನ್ಸ್ ನೀಡಲಾಗಿತ್ತು ಎಂಬುದು ತನಿಖೆ ಮೂಲಕ ತಿಳಿದುಬಂದಿದೆ ಎಂದರು.
ಇದನ್ನೂ ಓದಿ:ಬೆಂಗಳೂರಿನ ಕದಂಬ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಪತ್ರ
ವಿನಾಯಕ ಮತ್ತು ತಂದೆ ಪ್ರಕಾಶ ನಡುವೆ ಮನಸ್ತಾಪ. ವಿನಾಯಕ ಹೆಸರಲ್ಲಿ ಪ್ರಕಾಶ್​ ಆಸ್ತಿ ಮಾಡಿದ್ದರು. ಆಸ್ತಿಯಲ್ಲಿ ಕೆಲ ಭಾಗವನ್ನು ವಿನಾಯಕ ಮಾರಾಟ ಮಾಡಿದ್ದ. ನನ್ನ ಕೇಳದೆ ಆಸ್ತಿ ಮಾರಾಟ ಮಾಡುವಂತಿಲ್ಲ ಎಂದು ತಂದೆ ಪ್ರಕಾಶ್​ ಮಗನಿಗೆ ವಾರ್ನಿಂಗ್ ಕೊಟ್ಟಿದ್ದರು. ಕೊಲೆಗಡುಕರಿಂದ ಮಿಸ್ ಫೈರ್: ಕೊಪ್ಪಳ ಮೂಲದ ಸಹೋದರ ಸಂಬಂಧಿ ನಿಜವಾದ ಟಾರ್ಗೆಟ್ ಆಗಿರಲಿಲ್ಲ. ಕೊಲೆ ನಂತರ ಮನೆಯಲ್ಲಿರುವ ಬಂಗಾರ, ದುಡ್ಡು ಕೊಂಡ್ಯೊಯ್ಯುವಂತೆ ಆರೋಪಿಗಳಿಗೆ ಸೂಚಿಸಲಾಗಿತ್ತು ಎಂದರು.
ಕೊಲೆ ಸಮಯದಲ್ಲಿ ಮನೆಯಲ್ಲಿ ಪ್ರಕಾಶ ಬಾಕಳೆ ಜೋರಾಗಿ ಕಿರುಚಾಡಿದ್ದು, ಪೊಲೀಸರಿಗೆ ಕರೆ ಮಾಡಿದ್ದರಿಂದ ಆರೋಪಿಗಳು ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪ್ರಕಾಶ್​ ಬಾಕಳೆ ಕುಟುಂಬ ಅಂದುಕೊಂಡೆ ಆರೋಪಿಗಳು ಹತ್ಯೆಗೈದಿದ್ದಾರೆ. ವಿನಾಯಕ ಸೇರಿ 8 ಜನರ ಬಂಧನವಾಗಿದೆ. ವಿನಾಯಕ್​ನಿಂದ ಫೈರೋಜ್ ಎಂಬಾತ ಕೊಲೆ ಸುಪಾರಿ ಪಡೆದಿದ್ದ. ಮಹಾರಾಷ್ಟ್ರದ ಮೀರಜ್ ಮೂಲದವರಿಗೆ ಕೊಲೆಗೆ ಸುಪಾರಿ ಕೊಡಲಾಗಿತ್ತು ಎಂದು ಹೇಳಿದ್ದಾರೆ.
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
